ಹರಿದ್ವಾರ: ಕುಂಭಮೇಳ ನಡೆಯುತ್ತಿರುವ ಹಿನ್ನೆಲೆ ಜನರು ಉಳಿದುಕೊಳ್ಳಲೆಂದು ಶಿಬಿರಗಳನ್ನು ನಿರ್ಮಾಣ ಮಾಡಲಾಗಿದೆ. ಶಿಬಿರದ ಅವ್ಯವಸ್ಥೆಯಿಂದ ಅಸಮಾಧಾನಗೊಂಡ ನಿರ್ಮೋಹಿ ಅಖಾಡದ ಸಾಧುಗಳು ಹರಿದ್ವಾರದಲ್ಲಿ ಕುಂಭಮೇಳ ಅಧಿಕಾರಿಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜನಸಮೂಹದ ಮಧ್ಯೆಯೇ ಮೇಳದ ಅಧಿಕಾರಿಯನ್ನು ತಳಿಸಲಾಗಿದೆ. ಇದರಿಂದ ಅವರ ಕನ್ನಡಕ ಮುರಿದು ಹೋಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮೇಳ ಐಜಿ ಸಂಜಯ್ ಗುಂಜಯಾಲ್ ಹೇಳಿದ್ದಾರೆ.
ಓದಿ:ಹರಿದ್ವಾರ: ಇಂದು ಕುಂಭಮೇಳಕ್ಕೆ ಔಪಚಾರಿಕ ಚಾಲನೆ
ಕುಂಭಮೇಳದ ಮೊದಲ ದಿನದಂದು ಹರಿದ್ವಾರದ ಹರ್ ಕಿ ಪೌರಿ ಘಾಟ್‌ನಲ್ಲಿ ಭಕ್ತರು ಪವಿತ್ರ ಸ್ನಾನ ಮಾಡಿದರು. ಜನರು ಆರ್ಟಿಪಿಸಿಆರ್ ಪರೀಕ್ಷಾ ವರದಿಯನ್ನು ಒಳಗೊಂಡಂತೆ ಕೋವಿಡ್-19 ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಉತ್ತರಾಖಂಡ ಸರ್ಕಾರ ಆದೇಶಿಸಿದೆ.
ಈ ವರ್ಷ ಕುಂಭಮೇಳ ಏಪ್ರಿಲ್ 1 ರಿಂದ 30 ರವರೆಗೆ ಹರಿದ್ವಾರದಲ್ಲಿ ನಡೆಯಲಿದೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಕುಂಭಮೇಳವನ್ನು ಭಾರತದ ನಾಲ್ಕು ವಿಭಿನ್ನ ಸ್ಥಳಗಳಲ್ಲಿ (ನಾಸಿಕ್, ಹರಿದ್ವಾರ, ಪ್ರಯಾಗ್ರಾಜ್ ಮತ್ತು ಉಜ್ಜಯಿನಿ) ನಡೆಸಲಾಗುತ್ತದೆ.