ಅಲಿಘಡ್ (ಉತ್ತರಪ್ರದೇಶ) : ಅತ್ಯಾಚಾರಕ್ಕೆ ಸಂಬಂಧಿಸಿದಂತೆ ದೇವರುಗಳನ್ನು ಉಲ್ಲೇಖಿಸಿ ಪಾಠ ಮಾಡಿದ ಆರೋಪ ಎದುರಿಸುತ್ತಿರುವ ಉತ್ತರಪ್ರದೇಶದ ಅಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಜೀತೇಂದ್ರ ಕುಮಾರ್ಗೆ ನಿರೀಕ್ಷಣಾ ಜಾಮೀನು ನೀಡಲು ಅಲಿಘಡ್ ಜಿಲ್ಲಾ ನ್ಯಾಯಾಲಯ ನಿರಾಕರಿಸಿದೆ.
ವಿಶ್ವವಿದ್ಯಾಲಯದ ವ್ಯಾಪ್ತಿಯ ಜವಾಹರ್ಲಾಲ್ ನೆಹರೂ ಮೆಡಿಕಲ್ ಕಾಲೇಜಿನ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಏ.5ರಂದು ಪುರಾಣದಲ್ಲಿನ ನಿದರ್ಶನ ನೀಡಿ ಡಾ.ಜೀತೇಂದ್ರ ಪಾಠ ಮಾಡಿದ್ದರು ಎನ್ನಲಾಗ್ತಿದೆ. ಈ ಸಂಬಂಧ ಈಗಾಗಲೇ ಇವರನ್ನು ವಿಶ್ವವಿದ್ಯಾಲಯವು ಸೇವೆಯಿಂದ ಅಮಾನತು ಮಾಡಿದೆ. ಅಲ್ಲದೇ, ಕಾರಣ ಕೇಳಿ ಶೋಕಾಸ್ ನೋಟಿಸ್ ಸಹ ಜಾರಿ ಮಾಡಿದೆ.
ಇತ್ತ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಡಾ. ಜೀತೇಂದ್ರ ವಿರುದ್ಧ ಬಿಜೆಪಿ ಮುಖಂಡ ನಿಶೀತ್ ಶರ್ಮಾ ದೂರು ದಾಖಲಿಸಿದ್ದಾರೆ. ಹೀಗಾಗಿ ಬಂಧನ ಭೀತಿಯಲ್ಲಿರುವ ಅವರು ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದರು. ಆದರೆ, ನ್ಯಾಯಾಲಯವು ಪ್ರಾಧ್ಯಾಪಕನ ಅರ್ಜಿಯನ್ನು ತಿರಸ್ಕರಿಸಿದೆ.
ಇದನ್ನೂ ಓದಿ: ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ: ಅಲಿಘಡ್ ಮುಸ್ಲಿಂ ವಿವಿ ಪ್ರಾಧ್ಯಾಪಕನಿಗೆ ನೋಟಿಸ್