ETV Bharat / bharat

ಜಂಬೋ ಎಲೆಕ್ಟ್ರಿಕ್​​ ಬೈಕ್​ ತಯಾರಿಸಿದ ರೋಹಿತ್​.. 2 ಗಂಟೆ ಚಾರ್ಜ್​​, 1080 ಕಿ.ಮೀಟರ್ ಪ್ರಯಾಣ - ಜಂಬೋ ಎಲೆಕ್ಟ್ರಿಕ್​ ಬೈಕ್​

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಜನರು ಎಲೆಕ್ಟ್ರಿಕಲ್​ ಬೈಕ್​ಗಳ ಮೊರೆ ಹೋಗುವುದು, ಹೊಸ ಹೊಸ ಬೈಕ್​ ಆವಿಷ್ಕಾರ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಮೀರತ್​​ ವಿದ್ಯಾರ್ಥಿಯೋರ್ವ ಜಂಬೋ ಎಲೆಕ್ಟ್ರಿಕ್​ ಬೈಕ್​ ತಯಾರಿಸಿದ್ದಾರೆ.

Electric bike Mahabal
Electric bike Mahabal
author img

By

Published : Aug 24, 2022, 8:48 PM IST

ಮೀರತ್​​(ಉತ್ತರ ಪ್ರದೇಶ): ಇಂದಿನ ದುಬಾರಿ ದುನಿಯಾದಲ್ಲಿ ನಮ್ಮಿಷ್ಟದ ಬೈಕ್​ ಖರೀದಿ ಮಾಡಿ, ದೂರದ ಪ್ರಯಾಣ ಮಾಡುವುದು ಅಷ್ಟು ಸುಲಭವಲ್ಲ. ದಿನದಿಂದ ದಿನಕ್ಕೆ ಪೆಟ್ರೋಲ್​, ಡೀಸೆಲ್​ ಬೆಲೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ, ದೂರದ ಪ್ರಯಾಣ ಮಾಡುವುದು ಇತ್ತೀಚಿನ ದಿನಗಳಲ್ಲಿ ತುಂಬಾ ದುಬಾರಿಯಾಗ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಬ್ರೇಕ್​ ಹಾಕ್ಬೇಕು ಎಂದು ಸಂಕಲ್ಪ ತೊಟ್ಟ ಮೀರತ್​​​ನ ಬಿಟೆಕ್​​ ವಿದ್ಯಾರ್ಥಿ ರೋಹಿತ್ ಶರ್ಮಾ ಜಂಬೋ ಎಲೆಕ್ಟ್ರಿಕ್​​ ಬೈಕ್​ ತಯಾರಿಸಿದ್ದಾರೆ.

Electric bike Mahabal Guinness world Record
ಜಂಬೋ ಎಲೆಕ್ಟ್ರಿಕ್​​ ಬೈಕ್​ ತಯಾರಿಸಿದ ರೋಹಿತ್

ರೋಹಿತ್​ ತಯಾರಿಸಿರುವ ಈ ವಿಶೇಷ ಬೈಕ್​ 13 ಅಡಿ ಉದ್ದವಾಗಿದೆ. ಹೀಗಾಗಿ, ಮಹಾಬಲ್​ ಎಲೆಕ್ಟ್ರಿಕ್​ ಚಾಪರ್​ ಎಂದು ಅದಕ್ಕೆ ಹೆಸರಿಟ್ಟಿದ್ದಾರೆ. ಹಾಗಾದ್ರೆ ಈ ಬೈಕ್​​ನ ವಿಶೇಷತೆ, ರೋಹಿತ್​ ಅವರ ಸಾಮರ್ಥ್ಯದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಮೂಲತಃ ಬಾಗ್​​ಪತ್​​ನ ರೋಹಿತ್ ಶರ್ಮಾ ಮೀರತ್​​ನ ದೆಹಲಿ ಇನ್​​​​ಸ್ಟಿಟ್ಯೂಟ್​ ಆಫ್​​ ಇಂಜಿನಿಯರಿಂಗ್​ ಕಾಲೇಜ್​​​ನಲ್ಲಿ ಬಿಟೆಕ್​ ಮೆಕ್ಯಾನಿಕಲ್​ ಪೂರ್ಣಗೊಳಿಸಿದ್ದಾರೆ. ಏನಾದ್ರೂ ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದ ಇವರು, ಇದೀಗ ಪರಿಸರ ಸ್ನೇಹಿ ಬೈಕ್​ ತಯಾರಿಸಿದ್ದಾರೆ. ಇದನ್ನು ಸೌರಶಕ್ತಿ ಹಾಗೂ ವಿದ್ಯುತ್ ಮೂಲಕ ಚಾರ್ಜ್​ ಮಾಡಬಹುದಾಗಿದೆ.

120 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ

ಬೈಕ್​ ವಿಶೇಷತೆ ಏನು?: ಸುಮಾರು 13 ಅಡಿ ಉದ್ದವಿರುವ ಈ ಬೈಕ್ ಚಾರ್ಜ್​ ಆಗಲು ಕೇವಲ ಎರಡು ಗಂಟೆ ತೆಗೆದುಕೊಳ್ಳುತ್ತದೆ. ಒಮ್ಮೆ ಚಾರ್ಜ್​ ಮಾಡಿದರೆ 1080 ಕಿಲೋ ಮೀಟರ್ ಪ್ರಯಾಣಿಸಬಹುದಾಗಿದೆ ಎಂದು ರೋಹಿತ್​ ಹೇಳುತ್ತಾರೆ. ಪ್ರತಿ ಗಂಟೆಗೆ 120 ಕಿಲೋ ಮೀಟರ್​ ವೇಗದಲ್ಲಿ ಈ ಬೈಕ್​​ ಓಡುತ್ತದೆ. ಸುಮಾರು 700 ಕೆಜಿ ಭಾರ ಹೊತ್ತುಕೊಂಡು ಹೋಗುವ ಸಾಮರ್ಥ್ಯ ಇದಾಗಿದೆ ಎನ್ನುವ ರೋಹಿತ್, ವಿಶ್ವದ ಅತಿ ಉದ್ದದ ಬೈಕ್​ ಎಂದು ತಿಳಿಸಿದ್ದಾರೆ. ಹೀಗಾಗಿ, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರಿಸಲು ಅರ್ಜಿ ಸಲ್ಲಿಸಿದ್ದಾರೆ. ತನ್ನ ಪಾಕೆಟ್ ಮನಿ ಹಾಗೂ ಸ್ಕಾಲರ್​ಶಿಪ್​​​ನಿಂದ ಬಂದಿರುವ ಹಣದಿಂದ ಈ ಬೈಕ್ ತಯಾರಿಸಿರುವುದಾಗಿ ತಿಳಿಸಿದ್ದಾನೆ.

ಇದನ್ನೂ ಓದಿ: 20 ರೂಪಾಯಿಗೆ 50 ಕಿ.ಮೀ.​ ಪ್ರಯಾಣ​.. ವಿಶೇಷ ಬೈಕ್​​ ತಯಾರಿಸಿದ ಯುವಕ!

1 ಲಕ್ಷ ರೂಪಾಯಿ ಖರ್ಚು: ತುಂಬಾ ಎತ್ತರ ಹಾಗೂ ದೊಡ್ಡದಾಗಿದ್ದರೂ ಈ ಬೈಕ್​ ಪಿಕಪ್​ ಅತ್ಯುತ್ತಮವಾಗಿದೆ. ಕೇವಲ ಮೂರು ಸೆಕೆಂಡ್​​​ಗಳಲ್ಲಿ 0 ದಿಂದ 40 ಕಿಮೀ ವೇಗ ಹೆಚ್ಚಿಸಬಹುದಾಗಿದೆ. ವಿಶ್ವದ ಅತಿದೊಡ್ಡ ಶಕ್ತಿಶಾಲೆ ಎಲೆಕ್ಟ್ರಾನಿಕ್​ ಬೈಕ್​ ಇದಾಗಿದ್ದು, ಸಂಪೂರ್ಣವಾಗಿ ಪರಿಸರಿ ಸ್ನೇಹಿಯಾಗಿದೆ. ಸುಮಾರು 45ರಿಂದ 50 ದಿನದಲ್ಲಿ ಈ ಬೈಕ್​ ತಯಾರುಗೊಂಡಿದ್ದು, ಸಿದ್ಧಪಡಿಸಲು 1 ಲಕ್ಷ 20 ಸಾವಿರ ರೂಪಾಯಿ ವೆಚ್ಚಾಗಿದೆ ಎಂದು ರೋಹಿತ್​ ಈಟಿವಿ ಭಾರತ್​​ಗೆ ತಿಳಿಸಿದ್ದಾರೆ. ಈ ವಿಶೇಷ ಬೈಕ್​ ವೀಕ್ಷಣೆ ಮಾಡಲು ಇದೀಗ ತಂಡೋಪ ತಂಡವಾಗಿ ರೋಹಿತ್ ಮನೆಗೆ ಜನರು ಆಗಮಿಸಲು ಶುರು ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.