ETV Bharat / bharat

ಚಾರ್​ಧಾಮ್​ ಯಾತ್ರೆ 2023: ಇಂದಿನಿಂದ ಬದರಿನಾಥ ದರ್ಶನ ಆರಂಭ - ಈಟಿವಿ ಭಾರತ ಕನ್ನಡ

ಇಂದು ಬದರಿನಾಥ ದೇವಸ್ಥಾನದ ಮಹಾದ್ವಾರ ತೆರೆಯಲಾಗಿದ್ದು, ಇಂದಿನಿಂದ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ.

ಬದರಿನಾಥ ದರ್ಶನ ಆರಂಭ
ಬದರಿನಾಥ ದರ್ಶನ ಆರಂಭ
author img

By

Published : Apr 27, 2023, 11:02 AM IST

ಬದರಿನಾಥ (ಉತ್ತರಾಖಂಡ): ಚಾರ್​ಧಾಮ್​ ಯಾತ್ರೆಯು ಏಪ್ರಿಲ್ 22 ರಿಂದ ಪ್ರಾರಂಭವಾಗಿದೆ. ಚಾರ್​ ಧಾಮ್​ಗಳ ಪೈಕಿ ಹಿಂದೂ ಪವಿತ್ರ ಪುಣ್ಯ ಕ್ಷೇತ್ರವಾಗಿರುವ ಬದರಿನಾಥ​ ದೇವಸ್ಥಾನದ ಬಾಗಿಲುಗಳನ್ನು ಭಕ್ತರ ದರ್ಶನಕ್ಕಾಗಿ ಇಂದು ತೆರೆಯಲಾಗಿದೆ. ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅರ್ಚಕರು ಮಹಾದ್ವಾರ ತೆರೆದರು. ಇದಕ್ಕೂ ಮೊದಲು ದೇವಸ್ಥಾನದ ಮುಂಭಾಗದಲ್ಲಿ ಪೂಜೆ ನೆರವೇರಿಸಲಾಯಿತು. ನಂತರ 7.10 ಕ್ಕೆ ಬದರಿನಾಥ ದೇವಾಲಯದ ಬಾಗಿಲು ತೆರೆಯಲಾಯಿತು. ಬಳಿಕ ದೇವರಿಗೆ ಮೊದಲ ಪೂಜೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮಾಡಲಾಯಿತು.

ಈ ವೇಳೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಬದರಿನಾಥ ದೇವಸ್ಥಾನವನ್ನು 20 ಕ್ವಿಂಟಾಲ್ ಹೂವಿನಿಂದ ಅಲಂಕರಿಸಲಾಗಿದ್ದು, ದರ್ಶನ ನೋಂದಣಿ ಪ್ರಕ್ರಿಯೆ ಇಂದಿನಿಂದ ಆರಂಭಿಸಲಾಗಿದೆ. ಏಪ್ರಿಲ್ 22 ರಂದು, ಗಂಗೋತ್ರಿ ಮತ್ತು ಯಮುನೋತ್ರಿ ಧಾಮದ ಬಾಗಿಲುಗಳನ್ನು ತೆರೆಯಲಾಗಿತ್ತು. ಏಪ್ರಿಲ್ 25 ರಂದು ಕೇದಾರನಾಥ ದೇವಸ್ಥಾನದ ಬಾಗಿಲನ್ನು ತೆರೆಯಲಾಯಿತು. ಇದೀಗಾ ಇಂದು ಬದರಿನಾಥ ದೇವಾಲಯದ ಬಾಗಿಲು ತೆರೆಯುವುದರೊಂದಿಗೆ, ಸಂಪೂರ್ಣ ಚಾರ್ಧಾಮ್ ಯಾತ್ರೆ ಆರಂಭಗೊಂಡಿದೆ.

ಈವರೆಗೂ 95 ಸಾವಿರಕ್ಕೂ ಹೆಚ್ಚು ಭಕ್ತರು ಚಾರ್‌ಧಾಮಕ್ಕೆ ಭೇಟಿ ನೀಡಿರುವುದು ಗಮನಾರ್ಹ. ಆರಂಭಿಕ ಹಂತದಲ್ಲೇ ಅಪಾರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸಿದ್ದು, ಚಾರಧಾಮ್​ ಯಾತ್ರೆ ಮುಕ್ತಾಯದ ವೇಳೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕೊರೊನಾ ನಂತರ, 2022 ರಲ್ಲಿ ಚಾರ್​​ಧಾಮ್ ಯಾತ್ರೆಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಇದೀಗ 2023 ಚಾರ್​ಧಾಮ್​ ಯಾತ್ರೆ ಆರಂಭಗೊಂಡಿದ್ದು, ಈಗಾಗಲೇ ಲಕ್ಷಕ್ಕೂ ಅಧಿಕ ಭಕ್ತರು ಯಾತ್ರೆಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇದಾರನಾಥ ದರ್ಶನ ಆರಂಭ: ಹಿಂಧೂ ಧಾರ್ಮಿಕ ಕ್ಷೇತ್ರ ಚಾರ್​ಧಾಮಗಳ ಪೈಕಿ ಒಂದಾಗಿರುವ ಕೇದಾರನಾಥ್ ದೇವಾಲಯದ ಬಾಗಿಲಗಳನ್ನು ಏ.25 ರಂದು ತೆರೆಯಲಾಗಿತ್ತು.​ ಬೆಳಗ್ಗೆ 6 ಗಂಟೆ 20ನಿಮಿಷಕ್ಕೆ ​ವೇದಘೋಷದೊಂದಿಗೆ ಕೇದಾರನಾಥ ಧಾಮದ ಬಾಗಿಲು ಭಕ್ತರ ದರ್ಶನಕ್ಕಾಗಿ ತೆರೆಯಲಾಗಿತ್ತು. ಈ ವೇಳೆ ಉತ್ತರಾಖಂಡ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಕೂಡ ಭಾಗಿಯಾಗಿದ್ದರು.

ಇದನ್ನೂ ಓದಿ: ಚಾರ್‌ಧಾಮ್ ಭೇಟಿಗೆ ಯಾತ್ರಿಕರ ನೋಂದಣಿ ಕಡ್ಡಾಯ: ಉತ್ತರಾಖಂಡ ಸರ್ಕಾರ

ಕೇದಾರನಾಥ್​ ಪಂಚಮುಖಿ ಭೋಗ್ ವಿಗ್ರಹ, ಚಾಲ್ ಉತ್ಸವ ವಿಗ್ರಹಗಳನ್ನ ಡೋಲಿಯಲ್ಲಿ ಇರಿಸಿ ರಾವಲ್ ನಿವಾಸದಿಂದ ದೇವಾಲಯದ ಆವರಣಕ್ಕೆ ತರಲಾಗಿತ್ತು. ಇದಾದ ಬಳಿಕ ಸಿಎಂ ಪುಷ್ಕರ್​ ಸಿಂಗ್​ ಧಾಮಿ, ಬದರಿನಾಥ್​ ಕೇದಾರನಾಥ್​ ಮಂದಿರ ಸಮಿತಿ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಕೇದಾರನಾಥ ದೇವಸ್ಥಾನದ ಮಹಾದ್ವಾರ ತೆರೆಯಲಾಗಿತ್ತು. ಈ ಶುಭ ಸಮಯದಲ್ಲಿ ಕೇದಾರನಾಥ ದೇವಸ್ಥಾನದ ಮುಂದೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. 23 ಕ್ವಿಂಟಾಲ್ ವಿವಿಧ ಹೂವುಗಳಿಂದ ಇಡೀ ದೇವಸ್ಥಾನವನ್ನು ಅಲಂಕಾರ ಮಾಡಲಾಗಿತ್ತು.

ಇದನ್ನೂ ಓದಿ: ಹಿಮಪಾತದ ನಡುವೆಯೇ ತೆರೆದ ಕೇದಾರನಾಥನ ಮಹಾದ್ವಾರ: ಉತ್ತರಾಖಂಡ ಸಿಎಂ ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.