ETV Bharat / bharat

ಯೂಟ್ಯೂಬ್ ವಿಡಿಯೋ ನೋಡಿ ಪತ್ನಿಗೆ ಹೆರಿಗೆ ಯತ್ನ : ಮಗು ಸಾವು, ವ್ಯಾಪಾರಿಯ ಬಂಧನ

ಪೊಲೀಸರ ಮಾಹಿತಿ ಪ್ರಕಾರ ಲೋಗನಾಥನ್ ಒಂದೂವರೆ ವರ್ಷಗಳ ಹಿಂದೆ ಗೋಮತಿ(28) ಎಂಬಾಕೆಯನ್ನು ವಿವಾಹವಾಗಿದ್ದರು. ಗರ್ಭಿಣಿಯಾಗಿದ್ದ ಗೋಮತಿ ಅವರ ಹೆರಿಗೆಯನ್ನು ಯೂಟ್ಯೂಬ್ ವಿಡಿಯೋದ ಮೂಲಕವೇ ನೋಡಿ ಹೆರಿಗೆ ಮಾಡಲು ಆತ ಪ್ರಯತ್ನಿಸಿದ್ದ. ಈ ವೇಳೆ ಮಗು ಸಾವನ್ನಪ್ಪಿದೆ..

Baby dies: Man arrested for attempting wife's delivery at home
ಯೂಟ್ಯೂಬ್ ವಿಡಿಯೋ ನೋಡಿ ಪತ್ನಿಗೆ ಹೆರಿಗೆ ಯತ್ನ: ವ್ಯಾಪಾರಿಯ ಬಂಧನ, ಮಗು ಸಾವು
author img

By

Published : Dec 22, 2021, 2:40 PM IST

ರಾಣಿಪೇಟೆ, ತಮಿಳುನಾಡು : ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಮನೆಯಲ್ಲಿಯೇ ತನ್ನ ಪತ್ನಿಯ ಹೆರಿಗೆ ಮಾಡಲು ಯತ್ನಿಸಿ ಮಗುವಿನ ಸಾವಿಗೆ ಕಾರಣವಾದ ಆರೋಪದ ಹಿನ್ನೆಲೆಯಲ್ಲಿ ವ್ಯಾಪಾರಿಯೊಬ್ಬನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

ರಾಣಿಪೇಟ್ ಜಿಲ್ಲೆಯ ಅರಕ್ಕೋಣಂ ಸಮೀಪದ ನೆಡುಂಪುಲಿ ಗ್ರಾಮದ ಲೋಗನಾಥನ್ (32) ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಮಗು ಸಾವನ್ನಪ್ಪಿದ್ದು, ಪತ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರ ಮಾಹಿತಿ ಪ್ರಕಾರ ಲೋಗನಾಥನ್ ಒಂದೂವರೆ ವರ್ಷಗಳ ಹಿಂದೆ ಗೋಮತಿ(28) ಎಂಬಾಕೆಯನ್ನು ವಿವಾಹವಾಗಿದ್ದರು. ಗರ್ಭಿಣಿಯಾಗಿದ್ದ ಗೋಮತಿ ಅವರ ಹೆರಿಗೆಯನ್ನು ಯೂಟ್ಯೂಬ್ ವಿಡಿಯೋದ ಮೂಲಕವೇ ನೋಡಿ ಹೆರಿಗೆ ಮಾಡಲು ಆತ ಪ್ರಯತ್ನಿಸಿದ್ದ. ಈ ವೇಳೆ ಮಗು ಸಾವನ್ನಪ್ಪಿದೆ.

ನಂತರ ಗಂಭೀರ ಸ್ಥಿತಿಯಲ್ಲಿದ್ದ ಗೋಮತಿ ಅವರನ್ನು ವೆಲ್ಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶಿಶುವಿನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ವೈದ್ಯಕೀಯ ಅಧಿಕಾರಿ ಡಾ.ಮೋಹನ್ ನೆಮಿಲಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಭಲೇ ಅಮ್ಮ.. ಬೀದಿನಾಯಿಗಳ ದಾಳಿಯಿಂದ ಮೂವರು ಮಕ್ಕಳನ್ನು ರಕ್ಷಿಸಿದ್ಲು ಗರ್ಭಿಣಿ ತಾಯಿ!

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.