ETV Bharat / bharat

ರಾಮ್​ದೇವ್​ ಒಡೆತನದ ಕಂಪನಿಯ ಹೆಚ್ಚುವರಿ ಬಂಡವಾಳ ಕ್ರೋಢೀಕರಣಕ್ಕೆ ಸೆಬಿ ಅನುಮೋದನೆ - ರುಚಿ ಸೋಯಾ

ರುಚಿ ಸೋಯಾ ಪ್ರವರ್ತಕರ ಪಾಲನ್ನು ಶೇ.75ಕ್ಕೆ ಇಳಿಸಲು ಮೂರು ವರ್ಷ ಸಮಯಾವಕಾಶವಿದೆ. ರುಚಿ ಸೋಯಾ ಪ್ರಾಥಮಿಕವಾಗಿ ಎಣ್ಣೆ ಬೀಜಗಳನ್ನು ಸಂಸ್ಕರಿಸುವ ವ್ಯವಹಾರ. ಕಚ್ಚಾ ಖಾದ್ಯ ತೈಲವನ್ನು ಅಡುಗೆ ಎಣ್ಣೆಯಾಗಿ ಬಳಸಲು, ಸೋಯಾ ಉತ್ಪನ್ನಗಳನ್ನು ತಯಾರಿಸಲು ಮತ್ತು ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ಕಾರ್ಯನಿರ್ವಹಿಸುತ್ತದೆ..

ಬಾಬಾ
ಬಾಬಾ
author img

By

Published : Aug 17, 2021, 8:30 PM IST

ನವದೆಹಲಿ : ಬಾಬಾ ರಾಮ್​ದೇವ್​ ನೇತೃತ್ವದ ಪತಂಜಲಿ ಆಯುರ್ವೇದ ಒಡೆತನದ ಖಾದ್ಯ ತೈಲ ಸಂಸ್ಥೆ ರುಚಿ ಸೋಯಾವು ಹೆಚ್ಚುವರಿ ಬಂಡವಾಳ ಕ್ರೋಢೀಕರಣಕ್ಕೆ ಮುಂದಾಗಿದೆ. ಈ ಹಿನ್ನೆಲೆ 4,300 ಕೋಟಿ ರೂಪಾಯಿ ಹೆಚ್ಚುವರಿ ಬಂಡವಾಳ ಕ್ರೋಢೀಕರಣಕ್ಕೆ ಸೆಬಿ ಅನುಮೋದನೆ ನೀಡಿದೆ.

ಜೂನ್​ನಲ್ಲಿ ಸೆಬಿಗೆ ಕಂಪನಿಯು ಡ್ರಾಫ್ಟ್​ ಪೇಪರ್​ಗಳನ್ನು ಸಲ್ಲಿಸಿತ್ತು. ಆಗಸ್ಟ್​ 14ರಂದು ಸೆಬಿಯು ಪೂರ್ವಾಪರಗಳನ್ನು ಪರಿಶೀಲಿಸಿದ್ದು, ಇಂದು ಬಂಡವಾಳ ಕ್ರೋಢೀಕರಣಕ್ಕೆ ಅನುಮತಿ ನೀಡಿದೆ.

ಡ್ರಾಫ್ಟ್ ಪೇಪರ್‌ಗಳ ಪ್ರಕಾರ, ಬಾಕಿ ಹಣವನ್ನು ಕಂಪನಿಯ ವ್ಯವಹಾರ ಮುಂದುವರಿಸಲು, ಕೆಲ ಬಾಕಿ ಸಾಲಗಳ ಮರುಪಾವತಿಗೆ ಹಾಗೂ ಇತರೆ ಸಾಮಾನ್ಯ ಕಾರ್ಪೊರೇಟ್​ ಉದ್ದೇಶಗಳ ಪೂರೈಕೆಗಾಗಿ ಬಳಸಲಾಗುತ್ತದೆ. 2019ರಲ್ಲಿ ಪತಂಜಲಿ ರುಚಿ ಸೋಯಾವನ್ನು 4,350 ಕೋಟಿ ರೂ.ಗಳಿಗೆ ದಿವಾಳಿತನ ಪ್ರಕ್ರಿಯೆಯ ಮೂಲಕ ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಗಿದೆ.

ಪ್ರವರ್ತಕರು ಪ್ರಸ್ತುತ ಶೇ.99ರಷ್ಟು ಪಾಲನ್ನು ಹೊಂದಿದ್ದಾರೆ. ಮೂಲಗಳ ಪ್ರಕಾರ ಅವರು ಎಫ್‌ಪಿಒನ ಈ ಸುತ್ತಿನಲ್ಲಿ ಕನಿಷ್ಠ ಶೇ.9ರಷ್ಟು ಪಾಲನ್ನು ಕಡಿಮೆ ಮಾಡಿಕೊಳ್ಳಬೇಕು. ಸೆಬಿ ನಿಯಮಗಳ ಪ್ರಕಾರ, ಕಂಪನಿಯು ಕನಿಷ್ಠ ಶೇ.25ರಷ್ಟು ಸಾರ್ವಜನಿಕ ಷೇರುಗಳನ್ನು ಸಾಧಿಸಲು ಪ್ರವರ್ತಕರ ಪಾಲನ್ನು ಇಳಿಸಬೇಕಾಗಿದೆ.

ರುಚಿ ಸೋಯಾ ಪ್ರವರ್ತಕರ ಪಾಲನ್ನು ಶೇ.75ಕ್ಕೆ ಇಳಿಸಲು ಮೂರು ವರ್ಷ ಸಮಯಾವಕಾಶವಿದೆ. ರುಚಿ ಸೋಯಾ ಪ್ರಾಥಮಿಕವಾಗಿ ಎಣ್ಣೆ ಬೀಜಗಳನ್ನು ಸಂಸ್ಕರಿಸುವ ವ್ಯವಹಾರ. ಕಚ್ಚಾ ಖಾದ್ಯ ತೈಲವನ್ನು ಅಡುಗೆ ಎಣ್ಣೆಯಾಗಿ ಬಳಸಲು, ಸೋಯಾ ಉತ್ಪನ್ನಗಳನ್ನು ತಯಾರಿಸಲು ಮತ್ತು ಮೌಲ್ಯವರ್ಧಿತ ಉತ್ಪನ್ನಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಕಂಪನಿಯು ಪಾಮ್ ಮತ್ತು ಸೋಯಾ ವಿಭಾಗಗಳಲ್ಲಿ ಸಮಗ್ರ ಮೌಲ್ಯ ಸರಪಳಿಯನ್ನು ಹೊಂದಿದ್ದು, ಫಾರ್ಮ್ ಟು ಫೋರ್ಕ್ ವ್ಯಾಪಾರ ಮಾದರಿ ಹೊಂದಿದೆ. ಇದು ಮಹಾಕೋಷ್, ಸನ್​ರಿಚ್, ರುಚಿ ಗೋಲ್ಡ್ ಮತ್ತು ನ್ಯೂಟ್ರೆಲಾಗಳಂತಹ ಬ್ರಾಂಡ್‌ಗಳನ್ನೂ ಹೊಂದಿದೆ.

ಮೇ ತಿಂಗಳಲ್ಲಿ ರುಚಿ ಸೋಯಾ ಪತಂಜಲಿ ನ್ಯಾಚುರಲ್ ಬಿಸ್ಕಟ್ಸ್ ಪ್ರೈವೇಟ್ ಲಿಮಿಟೆಡ್‌(PNBPL)ನಿಂದ ಬಿಸ್ಕೆಟ್ ವ್ಯಾಪಾರವನ್ನು 60.02 ಕೋಟಿ ರೂ.ಗೆ ಮಾರಾಟ ಮಾಡುವುದಾಗಿ ಘೋಷಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.