ETV Bharat / bharat

ಸಾವಿರಾರು ಜನರನ್ನು ಒಗ್ಗೂಡಿಸಿ​​ ಯೋಗ ಪಾಠ: ಕೊರೊನಾ ರೂಲ್ಸ್ ಬ್ರೇಕ್, ಕುರುಡಾದ ಆಡಳಿತ! - ಬಾಬಾ ರಾಮ್​ದೇವ್

ಕೊರೊನಾ ಸಾಂಕ್ರಾಮಿಕದಿಂದಾಗಿ ಬಹುತೇಕ ರಾಜ್ಯಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಎಲ್ಲಾ ಶಾಲೆಗಳು, ಜಿಮ್‌ಗಳು, ಯೋಗ ಶಾಲೆಗಳನ್ನು ಮುಚ್ಚಲಾಗಿದೆ. ಮದುವೆಗಳನ್ನು ರದ್ದುಗೊಳಿಸುವ ಆದೇಶವನ್ನೂ ಸರ್ಕಾರ ಕೇಳಿದೆ. ಅಷ್ಟೇ ಅಲ್ಲ ಶವಸಂಸ್ಕಾರಕ್ಕೆ ಕೇವಲ 20 ಜನರು ಸೇರಬಹುದು ಎಂದಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದ ಕಾರಣ ಅನೇಕ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಈ ಎಲ್ಲಾ ಕ್ರಮಗಳ ನಡುವೆ ಬಾಬಾ ರಾಮದೇವ್ ಪ್ರತಿದಿನ 100ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಿ ಯೋಗ ಮಾಡುತ್ತಿರುವುದು ಕಂಡುಬರುತ್ತದೆ. ಆಡಳಿತಕ್ಕೆ ಈ ಬಗ್ಗೆ ತಿಳಿದೇ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.

ಬಾಬಾ ರಾಮ್​ದೇವ್
ಬಾಬಾ ರಾಮ್​ದೇವ್
author img

By

Published : May 26, 2021, 9:51 PM IST

ಡೆಹ್ರಾಡೂನ್: ಯೋಗ ಗುರು ಬಾಬಾ ರಾಮ್‌ದೇವ್ ಅವರು ಅಲೋಪತಿ ವೈದ್ಯಕೀಯ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಟೀಕೆಗಳನ್ನು ಮೈಮೇಲೆ ಎಳೆದುಕೊಂಡು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಕಾವು ಆರುವ ಮುನ್ನ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ.

ಕೊರೊನಾ ಸಾಂಕ್ರಾಮಿಕದಿಂದಾಗಿ ಬಹುತೇಕ ರಾಜ್ಯಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿದೆ. ಎಲ್ಲಾ ಶಾಲೆಗಳು, ಜಿಮ್‌ಗಳು, ಯೋಗ ಶಾಲೆಗಳನ್ನು ಮುಚ್ಚಲಾಗಿದೆ. ಮದುವೆಗಳನ್ನು ರದ್ದುಗೊಳಿಸುವ ಆದೇಶವನ್ನೂ ಸರ್ಕಾರ ಕೇಳಿದೆ. ಅಷ್ಟೇ ಅಲ್ಲ ಶವಸಂಸ್ಕಾರಕ್ಕೆ ಕೇವಲ 20 ಜನರು ಸೇರಬಹುದು ಎಂದಿದೆ. ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸದ ಕಾರಣ ಅನೇಕ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಈ ಎಲ್ಲಾ ಕ್ರಮಗಳ ನಡುವೆ ಬಾಬಾ ರಾಮದೇವ್ ನಿತ್ಯ 100ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸಿ ಯೋಗ ಮಾಡುತ್ತಿರುವುದು ಕಂಡುಬರುತ್ತದೆ. ಆಡಳಿತಕ್ಕೆ ಈ ಬಗ್ಗೆ ತಿಳಿದೇ ಇಲ್ಲವಂತೆ.

ಸಾವಿರಾರು ಜನರನ್ನು ಒಗ್ಗೂಡಿಸಿ ರಾಮ್​ದೇನ್​ ಯೋಗ ಪಾಠ

ಯೋಗ ಗುರು ಬಾಬಾ ರಾಮದೇವ್ ಕೋವಿಡ್ -19 ಮಾರ್ಗಸೂಚಿಗಳ ನಡುವೆಯೂ ಯೋಗ ಗ್ರಾಮದಲ್ಲಿ 100ಕ್ಕೂ ಹೆಚ್ಚು ಜನರನ್ನು ಒಗ್ಗೂಡಿಸಿಕೊಂಡು ಯೋಗ ಮಾಡಿದ್ದಾರೆ ಎನ್ನಲಾದ ವಿಡಿಯೋ ಈಗ ವೈರಲ್​ ಆಗಿದೆ. ಯೋಗ ಮಾಡುವುದಕ್ಕೆ ವಿರೋಧವಿಲ್ಲ. ಆದರೆ, ಸಾಮೂಹಿಕವಾಗಿ ಜನರನ್ನು ಒಟ್ಟುಗೂಡಿಸಿ ಯೋಗ ಮಾಡುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಈಡಾಗಿದೆ.

ಕೊರೊನಾ ಮಾರ್ಗಸೂಚಿಗಳನ್ನು ಬಾಬಾ ಅವರು ನಿರ್ಲಕ್ಷಿಸುತ್ತಿದ್ದಾರೆ ಎಂಬ ಪ್ರಶ್ನೆಗಳು ಮೂಡುತ್ತಿವೆ. ಜಿಲ್ಲಾಧಿಕಾರಿ ಮತ್ತು ಎಸ್‌ಎಸ್‌ಪಿ ಕಚೇರಿಯ ಸಮೀಪವಿರುವ ಯೋಗ ಗ್ರಾಮವು ಸಾರ್ವಜನಿಕರ ದೃಷ್ಟಿಯಿಂದ ಹೇಗೆ ದೂರವಿದೆ ಎಂಬ ಪ್ರಶ್ನೆಯೂ ಉದ್ಭವಿಸುತ್ತಿದೆ. ಈ ಎಲ್ಲ ಜನರನ್ನು ಈ ರೀತಿಯಾಗಿ ಗುಂಪು ಸೇರಿಸಲು ಬಾಬಾ ಅನುಮತಿ ಪಡೆದಿದ್ದಾರೋ ಇಲ್ಲವೋ?

ಬಾಬಾ ರಾಮದೇವ್ ಅವರು ತಮ್ಮ ಖಾಸಗಿ ಚಾನೆಲ್‌ನಲ್ಲಿ ನಿತ್ಯ ಬೆಳಗ್ಗೆ 5 ರಿಂದ ರಾತ್ರಿ 8ರವರೆಗೆ ಯೋಗವನ್ನು ನೇರ ಪ್ರಸಾರ ಮಾಡುತ್ತಾರೆ. ಅದರಲ್ಲಿ ಯೋಗ ಗ್ರಾಮದಲ್ಲಿ ಜನರನ್ನು ಒಟ್ಟುಗೂಡಿಸಿ ಯೋಗ ಮಾಡುತ್ತಿರುವುದು ಕಂಡುಬರುತ್ತದೆ. ದೇಶದ ವಿವಿಧ ರಾಜ್ಯಗಳ ಜನರು ಇಲ್ಲಿಗೆ ಬಂದಿದ್ದಾರೆ. ನಿನ್ನೆ, ಕಾರ್ಯಕ್ರಮದಲ್ಲಿ ಬಾಬಾ ಯೋಗ ಮಾಡುತ್ತಿದ್ದಾಗ, ಯೋಗ ಗ್ರಾಮದಲ್ಲಿ ಬಾಬಾ ಅವರ ಈ ಯೋಗ ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ಜನರ ಗುಂಪು ಸೇರಿ ಹಾಜರಿದ್ದರು ಎನ್ನಲಾಗುತ್ತಿದೆ. ಈ ವೇಳೆ ಮಾಸ್ಕ್​ ಧರಿಸದೆ ಯೋಗ ನಿರತವಾಗಿದ್ದು ವಿಡಿಯೋದಲ್ಲಿದೆ.

ಅಷ್ಟು ಜನಸಮೂಹ ಸೇರುತ್ತಿರುವುದು ನಮಗೆ ತಿಳಿದಿಲ್ಲ: ಸ್ಥಳೀಯ ಆಡಳಿತ

ಈ ಬಗ್ಗೆ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳಿಗೆ ಕೇಳಿದಾಗ, ಅವರಿಗೆ ಈ ಕರಿತು ಎಳ್ಳಷ್ಟು ಮಾಹಿತಿ ಇಲ್ಲ ಎಂದದ್ದು ಆಶ್ಚರ್ಯಕರವಾಗಿದೆ.

ಹರಿದ್ವಾರದ ಎಸ್‌ಡಿಎಂ ಗೋಪಾಲ್ ಸಿಂಗ್ ಚೌಹಾನ್ ಅವರು ಯೋಗ ಗ್ರಾಮದಲ್ಲಿ ಜನಸಂದಣಿ ಇದೆ ಎಂಬುದರ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ.

ಬಾಬಾ ರಾಮ್​ದೇವ್ ಅವರು ಕಾನೂನು ಮತ್ತು ಕಾನೂನಿನ ಎಲ್ಲ ನಿಯಮಗಳನ್ನು ಪಾಲಿಸಬೇಕು. ಜನಸಮೂಹವನ್ನು ಒಟ್ಟುಗೂಡಿಸುವ ಮೂಲಕ ಇಂತಹ ಕಾರ್ಯಕ್ರಮವನ್ನು ಆಯೋಜಿಸುವುದು ಏಕೆ? ಅದರ ಅವಶ್ಯಕತೆ ಏನಿದೆ? ಅವರಿಗೆ ಈ ಹಕ್ಕನ್ನು ಯಾರು ಕೊಟ್ಟಿದ್ದಾರೆ ಎಂಬ ಸರಣಿ ಪ್ರಶ್ನೆಗಳು ಮೂಡುತ್ತಿವೆ.

ಮತ್ತೊಂದೆಡೆ, ಸಣ್ಣ ವ್ಯಾಪಾರಿಗಳಿಗೆ ಅಂಗಡಿಗಳನ್ನು ತೆರೆಯಲು ಮತ್ತು ಸರಕುಗಳನ್ನು ಮಾರಾಟ ಮಾಡಲು ನಿಷೇಧಿಸಿದಾಗ ಬಾಬಾ ಬಾಬಾಗೆ ಯಾರು ವಿನಾಯಿತಿ ನೀಡಿದ್ದಾರೆ ಎಂಬ ಪ್ರಶ್ನೆ ಸರ್ಕಾರ ಮತ್ತು ಆಡಳಿತದ ಮೇಲೆ ಉದ್ಭವಿಸುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.