ETV Bharat / bharat

ಕಡಿಮೆ ಜ್ವರ ಪ್ರಕರಣಗಳಲ್ಲಿ ಪ್ರತಿಜೀವಕ ಮಾತ್ರೆ ಬಳಸಬೇಡಿ: ICMR

ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಪರಾವಲಂಬಿಗಳು ಕಾಲಾನಂತರದಲ್ಲಿ ಬದಲಾಗುತ್ತವೆ ಮತ್ತು ಇನ್ನು ಮುಂದೆ ಔಷಧಿಗಳಿಗೆ ಪ್ರತಿಕ್ರಿಯಿಸುವುದಿಲ್ಲ-ICMR ವರದಿ.

antibiotics
ಸಾಂದರ್ಭಿಕ ಚಿತ್ರ
author img

By

Published : Nov 27, 2022, 2:17 PM IST

ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ಕಡಿಮೆ ಜ್ವರ ಮತ್ತು ವೈರಲ್ ಬ್ರಾಂಕೈಟಿಸ್ ರೋಗಿಗಳ ಪ್ರಕರಣಗಳಲ್ಲಿ ಪ್ರತಿಜೀವಕಗಳನ್ನು ಬಳಸದಂತೆ ವೈದ್ಯರಿಗೆ ಸಲಹೆ ನೀಡಿದೆ. ಶನಿವಾರ ಬಿಡುಗಡೆ ಮಾಡಿದ ತನ್ನ ಮಾರ್ಗಸೂಚಿಗಳಲ್ಲಿ, ಪ್ರತಿಜೀವಕ ಮಾತ್ರೆಗಳನ್ನು ಶಿಫಾರಸು ಮಾಡುವಾಗ ಸಮಯವನ್ನು ಅನುಸರಿಸಲು ವೈದ್ಯರಿಗೆ ಸೂಚನೆ ನೀಡಿದೆ.

ನ್ಯುಮೋನಿಯಾಕ್ಕೆ ಎಂಟು ದಿನಗಳವರೆಗೆ ಪ್ರತಿಜೀವಕಗಳನ್ನು ಶಿಫಾರಸು ಮಾಡಬೇಕೆಂದು ICMR ಮಾರ್ಗಸೂಚಿಗಳು ಸೂಚಿಸುತ್ತವೆ. ಚರ್ಮ ಮತ್ತು ಅಂಗಾಂಶಗಳ ಸೋಂಕುಗಳಿಗೆ ಐದು ದಿನಗಳ ಪ್ರತಿಜೀವಕ ಚಿಕಿತ್ಸೆಯ ಅವಧಿಯನ್ನು ಸೂಚಿಸುತ್ತದೆ. ಪ್ರತಿಜೀವಕಗಳ ತರ್ಕಬದ್ಧ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ. ಮಾರ್ಗಸೂಚಿಗಳ ಪ್ರಕಾರ, "ಶಿಫಾರಸು ಮಾಡಿದ ಅವಧಿಯನ್ನು ಮೀರಿ ಪ್ರತಿಜೀವಕಗಳನ್ನು ನೀಡಲಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಒಂದು ದಿನಾಂಕವನ್ನು ಮುಂಚಿತವಾಗಿ ದಾಖಲಿಸಬೇಕು ಎಂದು ಹೇಳಿದೆ.

ದೇಶಾದ್ಯಂತ ಪ್ರತಿಜೀವಕ ನಿರೋಧಕತೆಯ ಪ್ರವೃತ್ತಿಯನ್ನು ಅಳೆಯಲು ICMR ಇತ್ತೀಚೆಗೆ ನಡೆಸಿದ ಸಮೀಕ್ಷೆಯು ರಕ್ತ, ಮೂತ್ರನಾಳ ಮತ್ತು ಶ್ವಾಸಕೋಶಗಳಲ್ಲಿ ಸೋಂಕನ್ನು ಉಂಟುಮಾಡುವ ಋಣಾತ್ಮಕ ಬ್ಯಾಕ್ಟೀರಿಯಾವಾದ ಅಸಿನೆಟೊಬ್ಯಾಕ್ಟರ್ ಬೌಮನ್ನಿಯು ಉನ್ನತ ಮಟ್ಟದ ಪ್ರತಿಜೀವಕಗಳಿಗೆ ನಿರೋಧಕವಾಗಿದೆ ಎಂದು ತಿಳಿಸಿದೆ.

ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಬ್ಯಾಕ್ಟೀರಿಯಾ, ವೈರಸ್‌ಗಳು, ಶಿಲೀಂಧ್ರಗಳು ಮತ್ತು ಪರಾವಲಂಬಿಗಳು ಕಾಲಾನಂತರದಲ್ಲಿ ಬದಲಾಗುತ್ತವೆ ಮತ್ತು ಇನ್ನು ಮುಂದೆ ಔಷಧಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಸೋಂಕುಗಳಿಗೆ ಚಿಕಿತ್ಸೆ ನೀಡಲು ಹೆಚ್ಚು ಕಷ್ಟಕರವಾಗಿಸುತ್ತದೆ ಮತ್ತು ತೀವ್ರ ಅನಾರೋಗ್ಯ ಮತ್ತು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ.

2021ರಲ್ಲಿ ಪರೀಕ್ಷಿಸಲಾದ ಅಸಿನೆಟೊಬ್ಯಾಕ್ಟರ್ ಬೌಮನ್ನಿಯ ಶೇ. 87.5ರಷ್ಟು ಮಾದರಿಗಳು ಉನ್ನತ-ಮಟ್ಟದ ಪ್ರತಿಜೀವಕವಾದ ಕಾರ್ಬಪೆನೆಮ್‌ಗಳಿಗೆ ನಿರೋಧಕವಾಗಿದೆ ಎಂದು ಸಮೀಕ್ಷೆ ಹೇಳಿದೆ. ಬ್ಯಾಕ್ಟೀರಿಯಾದಿಂದ ಉಂಟಾಗುವ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಗಳಲ್ಲಿ ಇದು ಚಿಕಿತ್ಸೆಯ ಆಯ್ಕೆಯನ್ನು ಸೀಮಿತಗೊಳಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: ರಕ್ತದ ಗುಂಪಿನಿಂದ ವೈರಲ್ ಕಾಯಿಲೆಗೆ ತುತ್ತಾಗುವ ಅಪಾಯ ಊಹಿಸಬಹುದು: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.