ETV Bharat / bharat

ಏರ್​ ಏಷ್ಯಾ ಸಂಸ್ಥೆಗೆ 20 ಲಕ್ಷ ದಂಡ... ವಿಮಾನ ಹಾರಾಟ ತರಬೇತಿ ಮುಖ್ಯಸ್ಥರ ವಜಾಕ್ಕೆ ಡಿಜಿಸಿಎ ಆದೇಶ

ಏರ್​ ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು 20 ಲಕ್ಷ ರೂಪಾಯಿ ದಂಡ ಹಾಕಿ ಆದೇಶಿಸಿದೆ.

aviation-safety-regulator-imposes-rs-20-lakh-penalty-on-airasia-india
ಏರ್​ ಏಷ್ಯಾ ಸಂಸ್ಥೆಗೆ 20 ಲಕ್ಷ ದಂಡ... ವಿಮಾನ ಹಾರಾಟ ತರಬೇತಿ ಮುಖ್ಯಸ್ಥರ ವಜಾಕ್ಕೆ ಡಿಜಿಸಿಎ ಆದೇಶ
author img

By

Published : Feb 11, 2023, 3:50 PM IST

ಮುಂಬೈ (ಮಹಾರಾಷ್ಟ್ರ): ಪೈಲಟ್‌ಗಳ ತರಬೇತಿಗೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಟಾಟಾ ಗ್ರೂಪ್ ಒಡೆತನದ ಏರ್​ ಏಷ್ಯಾ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶನಿವಾರ 20 ಲಕ್ಷ ರೂಪಾಯಿ ದಂಡ ವಿಧಿಸಿದೆ. ಜೊತೆಗೆ ಮೂರು ತಿಂಗಳ ಅವಧಿಗೆ ಏರ್‌ಲೈನ್‌ನ ತರಬೇತಿ ಮುಖ್ಯಸ್ಥರನ್ನು ವಜಾ ಮಾಡುವಂತೆ ಕೂಡ ಆದೇಶಿಸಿದೆ.

ಇದನ್ನೂ ಓದಿ: ಮತ್ತೆ ₹10 ಲಕ್ಷ ದಂಡ ಜಡಿದ ಡಿಜಿಸಿಎ: ವಿಮಾನದಲ್ಲಿ ಮದ್ಯ ಪೂರೈಕೆ ನೀತಿಯನ್ನೇ ಬದಲಿಸಿದ ಏರ್​ ಇಂಡಿಯಾ

ಪೈಲಟ್ ಪ್ರಾವೀಣ್ಯತೆಯ ಪರಿಶೀಲನೆಗಳು ಹಾಗೂ ಸಲಕರಣೆಗಳ ರೇಟಿಂಗ್ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಏರ್​ಏಷ್ಯಾ ಸಂಸ್ಥೆಯು ವಿಮಾನಯಾನ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಡಿಜಿಸಿಎ ಈ ಕ್ರಮ ಕೈಗೊಂಡಿದೆ. ಅಲ್ಲದೇ, ಜೊತೆಗೆ ಎಂಟು ನಿಯೋಜಿತ ಪರೀಕ್ಷಕರಿಗೆ (ಡಿಇ) ತಲಾ ಮೂರು ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಈ ಮೂಲಕ ಕಳೆದ ಕೇವಲ ಒಂದು ತಿಂಗಳ ಅವಧಿಯಲ್ಲಿ ಟಾಟಾ ಗ್ರೂಪ್ ಏರ್‌ಲೈನ್​ ವಿರುದ್ಧ ಮೂರು ಬಾರಿ ವಿಮಾನಯಾನ ಸುರಕ್ಷತೆ ನಿಯಂತ್ರಕ ಡಿಜಿಸಿಎ ಕ್ರಮ ಜರುಗಿಸಿದೆ. ಮತ್ತೊಂದೆಡೆ, ಏರ್​ಏಷ್ಯಾ ಇಂಡಿಯಾ ಸಂಸ್ಥೆಯು ಪ್ರತಿಕ್ರಿಯಿಸಿ, ಡಿಜಿಸಿಎ ಆದೇಶವನ್ನು ಪರಿಶೀಲಿಸಲಾಗುತ್ತಿದೆ. ಜೊತೆಗೆ ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಹ ಪರಿಗಣಿಸಲಾಗುತ್ತಿದೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: ಪಕ್ಷಿ ಡಿಕ್ಕಿ: ಏರ್ ಏಷ್ಯಾ ವಿಮಾನ ತುರ್ತು ಭೂಸ್ಪರ್ಶ

2022ರ ನವೆಂಬರ್​ನಲ್ಲಿ ಮುಖ್ಯ ಬೇಸ್ ತಪಾಸಣೆಯ ನಂತರ ಪೈಲಟ್‌ಗಳ ತರಬೇತಿ ಅಭ್ಯಾಸಗಳಿಗೆ ಸಂಬಂಧಿಸಿದ ಸಂಶೋಧನೆಯನ್ನು ಡಿಜಿಸಿಎ ಗಮನಿಸಿದ್ದು, ಇದನ್ನು ನಾವು ಅಂಗೀಕರಿಸಿದ್ದೇವೆ. ಡಿಜಿಸಿಎ ಜೊತೆಗಿನ ಸಮನ್ವಯದಲ್ಲಿ ತಕ್ಷಣದ ಸರಿಪಡಿಸುವ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ಅಂತರವನ್ನು ಪರಿಹರಿಸಲು ಹೆಚ್ಚುವರಿ ಸಿಮ್ಯುಲೇಟರ್​​ ತರಬೇತಿ ಅವಧಿಗಳನ್ನು ಅನುಷ್ಠಾನ ಮಾಡಲಾಗಿದೆ ಎಂದು ಏರ್​ ಏಷ್ಯಾದ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದೇಶದಲ್ಲಿ ಏನಿದೆ?: ನವೆಂಬರ್ 23 ಮತ್ತು 25ರ ಅವಧಿಯಲ್ಲಿ ಡಿಜಿಸಿಎಯು ವಿಮಾನಯಾನ ಸಂಸ್ಥೆಯಲ್ಲಿ ಪೈಲಟ್ ಪ್ರಾವೀಣ್ಯತೆ ಮತ್ತು ಉಪಕರಣಗಳ ರೇಟಿಂಗ್ ಪರಿಶೀಲನೆ ನಡೆಸಿತ್ತು. ಈ ವೇಳೆ, ಏರ್​ ಏಷ್ಯಾ ಇಂಡಿಯಾ ಲಿಮಿಟೆಡ್‌ನ ಪೈಲಟ್‌ಗಳ ಕೆಲವು ಕಡ್ಡಾಯ ಅಭ್ಯಾಸಗಳನ್ನು ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಗೆ ಅನುಗುಣವಾದ ವೇಳಾಪಟ್ಟಿಯಂತೆ ನಡೆಸಿಲ್ಲ. ಇದು ಡಿಜಿಸಿಎ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಜೊತೆಗೆ ನಿಯಮಾವಳಿಗಳ ಪ್ರಕಾರ ತನ್ನ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾದ ಕಾರಣ ಮೂರು ತಿಂಗಳ ಅವಧಿಗೆ ತರಬೇತಿಯ ಮುಖ್ಯಸ್ಥರನ್ನು ಅವರ ಸ್ಥಾನದಿಂದ ತೆಗೆದುಹಾಕಬೇಕು ಹಾಗೂ ಎಂಟು ನಿಯೋಜಿತ ಪರೀಕ್ಷಕರಿಗೆ ತಲಾ ಮೂರು ಲಕ್ಷ ರೂಪಾಯಿಗಳ ಆರ್ಥಿಕ ದಂಡವನ್ನು ಹಾಕಲಾಗಿದೆ ಎಂದು ಎಂದು ಡಿಜಿಸಿಎ ಹೇಳಿದೆ. ಅಲ್ಲದೇ, ಇದೇ ವಿಷಯವಾಗಿ ಈ ಹಿಂದೆ ಏರ್​ ಏಷ್ಯಾ ವಿಮಾನಯಾನ ಸಂಸ್ಥೆ, ಅದರ ತರಬೇತಿ ಮುಖ್ಯಸ್ಥರು ಹಾಗೂ ಎಲ್ಲ ಡಿಇಗಳಿಗೆ ಶೋಕಾಸ್ ನೋಟಿಸ್‌ ಸಹ ಜಾರಿ ಮಾಡಲಾಗಿತ್ತು. ಇದರ ನಂತರವೇ ದಂಡದ ಆದೇಶ ಹೊರಡಿಸಲಾಗಿದೆ.

ಈ ಹಿಂದೆ 30 ಲಕ್ಷ, 10 ಲಕ್ಷ ದಂಡ: ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಸಹ ಪುರುಷ ಪ್ರಯಾಣಿಕನೋರ್ವ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದಕ್ಕೆ ಸಂಬಂಧಿಸದಂತೆ ಜನವರಿ 20ರಂದು ಡಿಜಿಸಿಎ 30 ಲಕ್ಷ ರೂಪಾಯಿ ತಂಡ ಹಾಕಿತ್ತು. ಜೊತೆಗೆ ಪೈಟಲ್​ನ ಪರವಾನಗಿಯನ್ನು ಮೂರು ತಿಂಗಳ ಕಾಲ ಅಮಾನತು ಮಾಡಿತ್ತು. ಇದಾದ ನಂತರ ಜ.25ರಂದು ಕೂಡ 10 ಲಕ್ಷ ರೂಪಾಯಿ ದಂಡವನ್ನು ಏರ್​ ಇಂಡಿಯಾ ಸಂಸ್ಥೆಗೆ ವಿಧಿಸಲಾಗಿತ್ತು.

ಇದನ್ನೂ ಓದಿ: ಮೂತ್ರ ವಿಸರ್ಜನೆ ಪ್ರಕರಣ: ಏರ್ ಇಂಡಿಯಾ ಸಂಸ್ಥೆಗೆ 30 ಲಕ್ಷ ದಂಡ, ಪೈಲಟ್ ಲೈಸನ್ಸ್​ ಅಮಾನತು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.