ETV Bharat / bharat

ಅರುಣಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ : ಹಿಮದಡಿ 7 ಸೇನಾ ಸಿಬ್ಬಂದಿ ಸಿಲುಕಿರುವ ಶಂಕೆ

ಹಿಮಪಾತದಿಂದ ಹಾನಿಗೊಳಗಾದ ಸೇನಾ ಗಸ್ತು ಪಡೆ ರಕ್ಷಿಸಲು ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್​​​​ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಹಾಯಕ್ಕಾಗಿ ವಿಶೇಷ ತಂಡಗಳನ್ನು ಏರ್‌ ಲಿಫ್ಟ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಹಿಮಪಾತದೊಂದಿಗೆ ಅಸಹನೀಯ ಹವಾಮಾನವಿದೆ ಎಂದು ಭಾರತೀಯ ಸೇನೆ ತಿಳಿಸಿದೆ..

author img

By

Published : Feb 7, 2022, 3:23 PM IST

Avalanche Hits Army Patrol In Arunachal, 7 Trapped
ಅರುಣಾಚಲ ಪ್ರದೇಶದಲ್ಲಿ ಭಾರಿ ಹಿಮಪಾತ

ನವದೆಹಲಿ : ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಭಾರತೀಯ ಸೇನಾ ಗಸ್ತು ಪಡೆಯ ಕಡೆ ಹಿಮಪಾತ ಸಂಭವಿಸಿದ್ದು, ಗಸ್ತು ತಿರುಗುತ್ತಿದ್ದ ಏಳು ಸೇನಾ ಸಿಬ್ಬಂದಿ ಹಿಮದಡಿ ಸಿಲುಕಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.

ಈ ಘಟನೆ ನಿನ್ನೆ ಕಮೆಂಗ್ ಸೆಕ್ಟರ್​​​ನ ಎತ್ತರದ ಪ್ರದೇಶದಲ್ಲಿ ಹಿಮಪಾತವಾಗಿದ್ದು, ಸೇನೆ ಶೋಧ ಮತ್ತು ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಏರ್ ಲಿಫ್ಟ್ ಮಾಡಿದೆ. ಇನ್ನು ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆ ಮುಂದುವರೆದಿದೆ. ಈ ಪ್ರದೇಶದಲ್ಲಿ ಕಳೆದ ಹಲವಾರು ದಿನಗಳಿಂದ ಭಾರಿ ಹಿಮಪಾತ ಸಂಭವಿಸುತ್ತಿದೆ ಎಂದು ಸೇನೆ ತಿಳಿಸಿದೆ.

ಹಿಮಪಾತದಿಂದ ಹಾನಿಗೊಳಗಾದ ಸೇನಾ ಗಸ್ತು ಪಡೆ ರಕ್ಷಿಸಲು ಅರುಣಾಚಲ ಪ್ರದೇಶದ ಕಮೆಂಗ್ ಸೆಕ್ಟರ್​​​​ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸಹಾಯಕ್ಕಾಗಿ ವಿಶೇಷ ತಂಡಗಳನ್ನು ಏರ್‌ ಲಿಫ್ಟ್ ಮಾಡಲಾಗಿದೆ. ಈ ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಹಿಮಪಾತದೊಂದಿಗೆ ಅಸಹನೀಯ ಹವಾಮಾನವಿದೆ ಎಂದು ಭಾರತೀಯ ಸೇನೆ ತಿಳಿಸಿದೆ.

ಅರುಣಾಚಲ ಪ್ರದೇಶವನ್ನು ಸಾಮಾನ್ಯವಾಗಿ ಪಶ್ಚಿಮದಲ್ಲಿ ಕಮೆಂಗ್ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ಉಳಿದ ಭಾಗಗಳಾಗಿ ವಿಂಗಡಿಸಲಾಗಿದೆ. ಭಾರತೀಯ ಸೇನೆಯ ಪೂರ್ವ ಕಮಾಂಡ್ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಸೇರಿದಂತೆ 1,346 ಕಿಲೋಮೀಟರ್ ಉದ್ದದ ನೈಜ ನಿಯಂತ್ರಣ ರೇಖೆಯನ್ನು (LAC) ನಿರ್ವಹಿಸುತ್ತದೆ.

ಇದನ್ನೂ ಓದಿ: ಶೂ ಸೋಲ್​ನಲ್ಲಿ ಹೆರಾಯಿನ್​​ ಸಾಗಣೆ.. 5 ಲಕ್ಷ ಮೌಲ್ಯದ 1724 ಗ್ರಾಂ ಹೆರಾಯಿನ್​ ಜಪ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.