ನವದೆಹಲಿ: ಕೃಷಿ ಮಸೂದೆ ತಿದ್ದುಪಡಿ ವಿರೋಧಿಸಿ ರೈತರು ನಡೆಸುತ್ತಿರುವ ಆಂದೋಲನವು 50ನೇ ದಿನಕ್ಕೆ ಕಾಲಿಟ್ಟಿದೆ. ಈ ನಡುವೆ ಸುಪ್ರೀಂಕೋರ್ಟ್ ಮಸೂದೆ ಅನುಷ್ಠಾನಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಇಷ್ಟಾದರೂ ಪಟ್ಟುಬಿಡದ ರೈತರು ಆಂದೋಲನ ಮುಂದುವರಿಸಿದ್ದಾರೆ.
ದೆಹಲಿ ಸಂಪರ್ಕಿಸುವ ಬಹುತೇಕ ರಸ್ತೆಗಳನ್ನು ಬಂದ್ ಮಾಡಿರುವ ರೈತರು ಹಲವು ಗಡಿಗಳನ್ನು ಮುಚ್ಚಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆ ವಾಹನ ಸವಾರರು ತೀವ್ರ ರೀತಿಯ ಸಮಸ್ಯೆಗೆ ಒಳಗಾಗಿದ್ದಾರೆ.
ಮೊದಲಿಗೆ ಸರಕು ವಾಹನಗಳು ಗಡಿ ದಾಟಲಾಗದೇ ಸಮಸ್ಯೆಗೆ ಒಳಗಾಗಿದಲ್ಲದೆ ಕೈಗಾರಿಕಾ ವಲಯ ಭಾರಿ ನಷ್ಟ ಅನುಭವಿಸುವಂತಾಗಿತ್ತು.
ಇದೀಗ ದೆಹಲಿ ಗಡಿ ಭಾಗದ ಆಟೋ ಸವಾರರು ರೈತರ ಪ್ರತಿಭಟನೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸಿಂಘು ಗಡಿಯಲ್ಲಿ (ದೆಹಲಿ-ಹರಿಯಾಣ) ಆಟೋ ಚಾಲಕರು ಪ್ರತಿಭಟನೆಯ ಪರಿಣಾಮ ಎದುರಿಸುತ್ತಿದ್ದೇವೆ ಎಂದಿದ್ದಾರೆ. ಪ್ರತಿಭಟನೆಯಿಂದಾಗಿ ಸಿಂಘು ಗಡಿದಾಟಲು ಆಗುತ್ತಿಲ್ಲ, ತೀವ್ರ ಸಮಸ್ಯೆಗೆ ಒಳಗಾಗಿದ್ದೇವೆ ಎಂದಿದ್ದಾರೆ.
ಗಡಿರಸ್ತೆ ದಾಟಲು ಅನುಮತಿ ನೀಡುತ್ತಿಲ್ಲ. ನಾವು ಪ್ರಯಾಣಿಕರನ್ನು ಪ್ರತಿಭಟನಾ ಸ್ಥಳಕ್ಕಿಂತ ಮುಂಚಿತವಾಗಿ ಬಿಟ್ಟು ಮರಳುತ್ತಿದ್ದೇವೆ ಎಂದು ಆಟೋ ಚಾಲಕ ಅಖಲೇಶ್ ತಮ್ಮ ನೋವು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಕೊರೊನಾ ಲಸಿಕೆ ವಿತರಣೆ: ಅಧಿಕಾರಿಗಳ ಪೂರ್ವತಯಾರಿ ಸಭೆ ಕರೆದ ದೆಹಲಿ ಸಿಎಂ