ಹೈದರಾಬಾದ್(ತೆಲಂಗಾಣ): ಮಹಿಳಾ ಪ್ರಯಾಣಿಕರೊಬ್ಬರು ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದ ಬೆಲೆಬಾಳುವ 10 ತೊಲ ತೂಕದ ಚಿನ್ನಾಭರಣಗಳನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಆಟೋ ಚಾಲಕ ಮಾನವೀಯತೆ ಮೆರೆದಿದ್ದಾನೆ.
ಹೈದರಾಬಾದ್ನ ಲಂಗರ್ಹೌಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಆಟೋದಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಆಭರಣಗಳಿದ್ದ ಬ್ಯಾಗ್ ಕಳೆದುಕೊಂಡಿರುವುದು ಗೊತ್ತಾದ ನಂತರ ಲಂಗರ್ಹೌಸ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು.
-
Hyderabad | An auto-driver hands over a customer's bag of 10 tolas gold who lost it while travelling
— ANI (@ANI) February 9, 2022 " class="align-text-top noRightClick twitterSection" data="
"A complaint was received after a couple lost their bag. Auto driver, Syed Zakir, informed that he'd found the bag & their contact inside," said K Srinivas, SHO, Langer House PS pic.twitter.com/xgIBo91Evc
">Hyderabad | An auto-driver hands over a customer's bag of 10 tolas gold who lost it while travelling
— ANI (@ANI) February 9, 2022
"A complaint was received after a couple lost their bag. Auto driver, Syed Zakir, informed that he'd found the bag & their contact inside," said K Srinivas, SHO, Langer House PS pic.twitter.com/xgIBo91EvcHyderabad | An auto-driver hands over a customer's bag of 10 tolas gold who lost it while travelling
— ANI (@ANI) February 9, 2022
"A complaint was received after a couple lost their bag. Auto driver, Syed Zakir, informed that he'd found the bag & their contact inside," said K Srinivas, SHO, Langer House PS pic.twitter.com/xgIBo91Evc
ಮತ್ತೊಂದೆಡೆ, ಆಟೋ ಚಾಲಕ ಸೈಯದ್ ಜಾಕೀರ್ ಬ್ಯಾಗ್ ಪರಿಶೀಲಿಸಿದಾಗ ಫೋನ್ ನಂಬರ್ ದೊರೆತಿದೆ. ಕೂಡಲೇ ಆಭರಣ ಕಳೆದುಕೊಂಡಿರುವವರನ್ನು ಪತ್ತೆ ಹಚ್ಚಿದ ಆತ ಪೊಲೀಸರ ಮೂಲಕ ಆಭರಣ ತಲುಪಿಸಿದ್ದಾನೆ.
ಸೈಯದ್ ಜಾಕೀರ್ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಹೂವಿನ ಹಾರ ಹಾಕಿ ಸನ್ಮಾನಿಸಿ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ: ಭಾರತದ 60 ಮೀನುಗಾರರ ಅಪಹರಿಸಿ,10 ಬೋಟ್ ಜಪ್ತಿ ಮಾಡಿಕೊಂಡ ಪಾಕಿಸ್ತಾನ