ETV Bharat / bharat

ಲೇಖಕ ಸಲ್ಮಾನ್ ರಶ್ದಿ ಹಿಮಾಚಲದ ಮನೆಯ ಮೇಲೆ ದಾಳಿ: ತನಿಖೆ ಪ್ರಾರಂಭ - Rushdies Himachal house allegedly vandalized

ಲೇಖಕ ಸಲ್ಮಾನ್ ರಶ್ದಿ ಅವರ ಪೂರ್ವಜರ ಮನೆಯ ಮೇಲೆ ಬುಧವಾರ ದಾಳಿ ಮಾಡಲಾಗಿದೆ. ಈ ವೇಳೆ, ಮನೆಯಲ್ಲಿ ರಶ್ದಿ ಅವರ ಕುಟುಂಬದ ಸ್ನೇಹಿತರಾದ ರಾಣಿ ಶಂಕರ್ ದಾಸ್ ಮತ್ತು ಅವರ ಮಗ ಅನಿರುದ್ಧ ಶಂಕರ್ ದಾಸ್ ಇದ್ದರು ಎಂದು ಮನೆಯ ಉಸ್ತುವಾರಿ ರಾಜೇಶ್ ತ್ರಿಪಾಠಿ ಹೇಳಿದ್ದಾರೆ.

ಲೇಖಕ ಸಲ್ಮಾನ್ ರಶ್ದಿ
ಲೇಖಕ ಸಲ್ಮಾನ್ ರಶ್ದಿ
author img

By

Published : Nov 24, 2022, 6:42 PM IST

ಸೋಲನ್: ಹಿಮಾಚಲ ಪ್ರದೇಶದ ಸೋಲನ್‌ನಲ್ಲಿರುವ ಬ್ರಿಟಿಷ್ - ಅಮೆರಿಕನ್ ಲೇಖಕ ಸಲ್ಮಾನ್ ರಶ್ದಿ ಅವರ ಪೂರ್ವಜರ ಮನೆಯ ಮೇಲೆ ಬುಧವಾರ ಯಾರೋ ಅಪರಿಚಿತರು ದಾಳಿ ಮಾಡಿದ್ದಾರೆ. ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಯೊಬ್ಬರ ಪ್ರಕಾರ, ರಶ್ದಿ ಒಡೆತನದ ಅನೀಸ್ ವಿಲ್ಲಾವನ್ನು ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೆಲವರು ಧ್ವಂಸ ಮಾಡಿದ್ದಾರೆ ಎಂದು ಮನೆಯ ಉಸ್ತುವಾರಿ ರಾಜೇಶ್ ತ್ರಿಪಾಠಿ ಆರೋಪಿಸಿದ್ದಾರೆ.

ಇದನ್ನೂ ಓದಿ: ದಾಳಿಗೊಳಗಾದ ಲೇಖಕ ಸಲ್ಮಾನ್ ರಶ್ದಿ ಒಂದು ಕಣ್ಣು ಮತ್ತು ಕೈ ನಿಷ್ಕ್ರಿಯ!

ಘಟನೆ ನಡೆದಾಗ ರಶ್ದಿ ಅವರ ಕುಟುಂಬದ ಸ್ನೇಹಿತರಾದ ರಾಣಿ ಶಂಕರ್ ದಾಸ್ ಮತ್ತು ಅವರ ಪುತ್ರ ಅನಿರುದ್ಧ ಶಂಕರ್ ದಾಸ್ ಮನೆಯಲ್ಲಿದ್ದರು ಎಂದು ತ್ರಿಪಾಠಿ ಹೇಳಿದ್ದಾರೆ. ಗೋವಿಂದ್ ರಾಮ್ ಮತ್ತು ಅವರ ಮಗ ಕೆಲವು ಜನರೊಂದಿಗೆ ಮನೆಯೊಳಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲದೇ ಅವರು ಸುತ್ತಿಗೆಯಿಂದ ಎರಡು ಬಾಗಿಲುಗಳು ಮತ್ತು ಕನ್ನಡಿ, ಬೀಗಗಳನ್ನು ಒಡೆದಿದ್ದಾರೆ ಎಂದು ತ್ರಿಪಾಠಿ ಆರೋಪಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಎಎಸ್ಪಿ ಸೋಲನ್ ಅಜಯ್ ಕುಮಾರ್ ರಾಣಾ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.