ಔರಂಗಾಬಾದ್ (ಮಹಾರಾಷ್ಟ್ರ): ಗುಲಾಬ್ ಚಂಡಮಾರುತದ ಆರ್ಭಟಕ್ಕೆ ಮಹಾರಾಷ್ಟ್ರದಲ್ಲಿ 20 ಮಂದಿ ಬಲಿಯಾಗಿದ್ದಾರೆ. ಸೈಕ್ಲೋನ್ ಅಬ್ಬರ ನಿಂತ ಮೇಲೂ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ.
ವರದಿಗಳ ಪ್ರಕಾರ, ಸೆಪ್ಟೆಂಬರ್ ಒಂದೇ ತಿಂಗಳಲ್ಲಿ ವರುಣ ಸೃಷ್ಟಿಸಿದ ಅವಾಂತರಕ್ಕೆ 70ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಇನ್ನು ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಪ್ರವಾಹ, ಭೂಕುಸಿತ, ಮಳೆ, ಸಿಡಿಲು ಸಂಬಂಧದ ಅವಘಡಗಳಿಂದ 400ಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಧಾರಾಕಾರ ಮಳೆಗೆ ಪತಿ - ಪತ್ನಿ ಸೇರಿ ಮೂವರು ಬಲಿ..ಮಾನವ ನಿರ್ಮಿತ ಪ್ರವಾಹ ಎಂದ ಸಿಎಂ
ಔರಂಗಾಬಾದ್ ಜಿಲ್ಲೆಯಲ್ಲಿ ಎಡಬಿಡದೇ ಮಳೆಯಾಗುತ್ತಿದ್ದು, ನರೇಗಾಂವ್ ಪ್ರದೇಶ ಜಲಾವೃತಗೊಂಡಿವೆ. ರಸ್ತೆಗಳು ಕುಸಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ,