ಮುಜಾಫರ್‌ಪುರ( ಬಿಹಾರ): ಮಹಿಳೆಯೊಬ್ಬರು ಸ್ವಂತ ಸೋದರಳಿಯನನ್ನು ಕೊಂದು ಮನೆಯಲ್ಲಿ ಹೂತು ಹಾಕಿದ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ಮನೆಯವರೆಲ್ಲ ಹೊಲದ ಕೆಲಸಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ.
ಬೋಚಾ ಪೊಲೀಸ್ ಠಾಣೆ ವ್ಯಾಪ್ತಿಯ ಬಲ್ತಿ ರಸೂಲ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಮೃತರನ್ನು ನಿತಿಕ್ ಕುಮಾರ್(3) ಎಂದು ತಿಳಿದು ಬಂದಿದೆ.
ಕೆಲಸ ಮುಗಿಸಿಕೊಂಡು ಮನೆಗೆ ಬಂದ ಮೃತನ ತಂದೆ ಮಗನ ಕುರಿತು ಸೊಸೆಯ ಬಳಿ ವಿಚಾರಿಸಲು ಹೋದಾಗ ಅನುಮಾನಾಸ್ಪದ ರೀತಿಯಲ್ಲಿ ನೆಲ ಅಗೆಯುತ್ತಿರುವುದು ಕಂಡು ಬಂದಿದೆ, ಏಕೆ ನೆಲ ಅಗೆಯುತ್ತಿದ್ದಿಯಾ ಎಂದು ಕೇಳಿದಾಗ ಇಲಿಗಳನ್ನು ಹಿಡಿಯುತ್ತಿರುವುದಾಗಿ ಹೇಳಿದ್ದಾಳೆ ಅನುಮಾನಗೊಂಡು ನೋಡಿದಾಗ ಮಗನ ಶವ ಇರುವುದು ಕಂಡು ಬಂದಿದೆ.
ಕೊಡಲೇ ಮೃತನ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಎಸ್ಪಿ ಮನೋಜ್ ಪಾಂಡೆ ತಿಳಿಸಿದರು.
ಇದನ್ನೂ ಓದಿ:ಅಂಕಿತಾ ಭಂಡಾರಿ ಕೊಲೆ ಪ್ರಕರಣ: ತನಿಖೆ ಸಿಬಿಐಗೆ ವಹಿಸಲು ಪೋಷಕರ ಒತ್ತಾಯ