ಹೈದರಾಬಾದ್: ರಾಮೋಜಿ ಫಿಲ್ಮ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನಿವೃತ್ತರಾಗಿದ್ದ ಅಟ್ಲೂರಿ ರಾಮಮೋಹನ್ ರಾವ್ (87) ಅವರು ಅನಾರೋಗ್ಯದಿಂದ ಇಂದು (ಶನಿವಾರ) ಇಹಲೋಕ ತ್ಯಜಿಸಿದರು. ನಾಳೆ(ಭಾನುವಾರ) ಜುಬಿಲಿ ಹಿಲ್ಸ್‌ನ ಮಹಾಪ್ರಸ್ಥಾನದಲ್ಲಿ ಬೆಳಗ್ಗೆ 10 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಟ್ಲೂರಿ ರಾಮಮೋಹನ್ ರಾವ್ ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ದೀರ್ಘಕಾಲದವರೆಗೆ ರಾಮೋಜಿ ಗ್ರೂಪ್ ಆಫ್ ಕಂಪನಿ ಜೊತೆ ನಿಕಟ ಸಂಬಂಧ ಹೊಂದಿದ್ದರು. ಈನಾಡು ದಿನಪತ್ರಿಕೆಯ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. 1935ರಲ್ಲಿ ಕೃಷ್ಣಾ ಜಿಲ್ಲೆಯ ಪೆದಪರುಪುಡಿಯಲ್ಲಿ ಜನಿಸಿದ್ದ ರಾಮಮೋಹನ್ ರಾವ್ ಅವರು, 1975 ರಲ್ಲಿ ಈನಾಡು ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿಧ್ದರು.
ರಾಮೋಜಿ ಗ್ರೂಪ್ ಅಧ್ಯಕ್ಷರಾದ ರಾಮೋಜಿ ರಾವ್ ಅವರ ಬಾಲ್ಯದ ಗೆಳೆಯರಾಗಿದ್ದರು. ಅಟ್ಲೂರಿ ರಾಮಮೋಹನ್ ಅವರ ನಿಧನದಿಂದ ರಾಮೋಜಿ ಫಿಲ್ಮ್ ಸಿಟಿಯ ಹಿರಿಯ ಕೊಂಡಿಯೊಂದು ಕಳಚಿದಂತಾಗಿದೆ.