ಕುಲ್ಲು(ಹಿಮಾಚಲಪ್ರದೇಶ) : ಮಂಜು ಮತ್ತು ಹಿಮಪಾತ ಅಧ್ಯಯನ ಸಂಸ್ಥೆ ಕುಲು ಪ್ರದೇಶದಲ್ಲಿ ಹಿಮಪಾತವಾಗುವ ಸೂಚನೆ ನೀಡಿದ ಬೆನ್ನಲ್ಲೇ ಪ್ರವಾಸಿಗರಿಗೆ ವಿಶ್ವದ ಅತಿ ಉದ್ದದ ಸುರಂಗವಾದ ಅಟಲ್ ಸುರಂಗ ಮಾರ್ಗದಲ್ಲಿ ಪ್ರಯಾಣ ನಿರ್ಬಂಧಿಸಲಾಗಿದೆ.
ಕುಲ್ಲು, ಶಿಮ್ಲಾ, ಲಾಹುಲ್, ಸ್ಪಿತಿ, ಮನಾಲಿ ಮುಂತಾದ ಪ್ರದೇಶಗಳಲ್ಲಿ ಹಿಮಪಾತವಾಗುವ ಸಾಧ್ಯತೆಯಿದೆ. ಕೆಲವು ದಿನಗಳಿಂದ ಹೇರಳವಾಗಿ ಹಿಮ ಸುರಿಯುತ್ತಿದ್ದು, ಹಿಮಪಾತವಾಗುವ ಮುನ್ಸೂಚನೆ ದೊರೆತಿದೆ ಎನ್ನಲಾಗಿದೆ.
ಇದನ್ನೂ ಓದಿ: ವಸಂತ ಪಂಚಮಿಯಂದು ಅಜ್ಜಿ ಇಂದಿರಾ ಗಾಂಧಿ ನೆನಪಿಸಿಕೊಂಡ ಪ್ರಿಯಾಂಕಾ
ಸೋಲಾಂಗ್ ನಾಲಾದ ಮೂಲಕ ಪ್ರಯಾಣಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ. ವಾತಾವರಣ ಮತ್ತೆ ಸಹಜ ಸ್ಥಿತಿಗೆ ಬಂದಾಗ ಅಟಲ್ ಸುರಂಗ ಮಾರ್ಗದಲ್ಲಿ ಮತ್ತೆ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎತ್ತರದ ಪ್ರದೇಶಗಳಲ್ಲಿ ಹೆಚ್ಚು ಹಿಮ ಸುರಿದಂತೆ ಹಿಮಪಾತವಾಗುವ ಸಾಧ್ಯತೆಯಿದೆ. ರೋಹ್ಟಂಗ್ ಜಿಲ್ಲೆಯ ಮನಾಲಿಯಲ್ಲಿ ಹಿಮಪಾತವಾಗುವ ಅತಿ ಅಪಾಯದ ಪ್ರದೇಶವಾಗಿದೆ. ಅಟಲ್ ಸುರಂಗ ಮಾರ್ಗದ ಜನರಲ್ಲೂ ಜಾಗೃತಿ ಮೂಡಿಸಲಾಗಿದೆ ಎಂದು ಮನಾಲಿ ಎಸ್ಡಿಎಂ ರಾಮನ್ ಘರ್ಸಂಗಿ ಹೇಳಿದ್ದಾರೆ.