ETV Bharat / bharat

2.8 ಕೋಟಿ ಚಂದಾದಾರರೊಂದಿಗೆ ಹೆಚ್ಚು ಜನಪ್ರಿಯವಾದ ಅಟಲ್ ಪಿಂಚಣಿ ಯೋಜನೆ..

author img

By

Published : Sep 5, 2021, 6:54 PM IST

ಅಟಲ್ ಪಿಂಚಣಿ ಯೋಜನೆಯನ್ನು ಭಾರತ ಸರ್ಕಾರವು 2015ರ ಮೇ ತಿಂಗಳಿನಲ್ಲಿ ಆರಂಭಿಸಿತು. 18-40 ವರ್ಷ ವಯಸ್ಸಿನ ಎಲ್ಲ ನಾಗರಿಕರು ಈ ಯೋಜನೆಗೆ ಚಂದಾದಾರರಾಗಬಹುದು. ಅವರಿಗೆ 60 ವರ್ಷವಾದ ನಂತರ ತಿಂಗಳಿಗೆ 1,000 ರಿಂದ 5,000 ರೂ.ಗಳವರೆಗೆ ಪಿಂಚಣಿ ಪಡೆಯುತ್ತಾರೆ..

ಅಟಲ್ ಪಿಂಚಣಿ ಯೋಜನೆ
ಅಟಲ್ ಪಿಂಚಣಿ ಯೋಜನೆ

ನವದೆಹಲಿ : ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಡಿಯಲ್ಲಿ ಅಟಲ್ ಪಿಂಚಣಿ ಯೋಜನೆಯು 2.8 ಕೋಟಿಗೂ ಅಧಿಕ ಚಂದಾದಾರರನ್ನು ಹೊಂದಿರುವ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯಾಗಿ ಹೊರಹೊಮ್ಮಿದೆ.

ಒಟ್ಟು 4.2 ಕೋಟಿ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್)ಯ ಚಂದಾದಾರರಲ್ಲಿ ಶೇ.66ರಷ್ಟು (2.8 ಕೋಟಿಗೂ ಹೆಚ್ಚು) ಜನರು ಅಟಲ್ ಪಿಂಚಣಿ ಯೋಜನೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗಳ ಟ್ರಸ್ಟ್‌ನ ವಾರ್ಷಿಕ ವರದಿ ಹೇಳುತ್ತದೆ. ಇವರಲ್ಲಿ ಮೆಟ್ರೋ ನಗರಗಳಲ್ಲದ ಪ್ರದೇಶದ ಜನರೇ ಹೆಚ್ಚಿದ್ದಾರೆ ಎನ್ನುವುದು ಮತ್ತೊಂದು ಗಮನಿಸಬೇಕಾದ ಅಂಶ.

ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆಯದವರಿಗೆ ಪಿಂಚಣಿ, ಪಡಿತರ ಇಲ್ಲವೆಂಬ ಯೋಜನೆ ರೂಪಿಸಿಲ್ಲ: ಸರ್ಕಾರದ ಸ್ಪಷ್ಟನೆ

ಎನ್‌ಪಿಎಸ್ ಚಂದಾದಾರರ ಪೈಕಿ ಅಟಲ್ ಪಿಂಚಣಿ ಯೋಜನೆ ಮೊದಲ ಸ್ಥಾನದಲ್ಲಿದ್ದರೆ, ರಾಜ್ಯ ಸರ್ಕಾರದ ಯೋಜನೆಯು ಶೇ.11ರಷ್ಟು ಚಂದಾದಾರರೊಂದಿಗೆ 2ನೇ ಸ್ಥಾನದಲ್ಲಿದೆ. ಕೇಂದ್ರ ಸ್ವಾಯತ್ತ ಸಂಸ್ಥೆಗಳು (ಎಸ್ಎಬಿ) ಶೇ.1ರಷ್ಟು ಚಂದಾದಾರರೊಂದಿಗೆ ಕೊನೆಯ ಸ್ಥಾನದಲ್ಲಿದೆ.

ಅಟಲ್ ಪಿಂಚಣಿ ಯೋಜನೆಯನ್ನು ಭಾರತ ಸರ್ಕಾರವು 2015ರ ಮೇ ತಿಂಗಳಿನಲ್ಲಿ ಆರಂಭಿಸಿತು. 18-40 ವರ್ಷ ವಯಸ್ಸಿನ ಎಲ್ಲ ನಾಗರಿಕರು ಈ ಯೋಜನೆಗೆ ಚಂದಾದಾರರಾಗಬಹುದು. ಅವರಿಗೆ 60 ವರ್ಷವಾದ ನಂತರ ತಿಂಗಳಿಗೆ 1,000 ರಿಂದ 5,000 ರೂ.ಗಳವರೆಗೆ ಪಿಂಚಣಿ ಪಡೆಯುತ್ತಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.