ETV Bharat / bharat

91ರ ಪ್ರಾಯ.. ಈಗಲೂ ಸಲೀಸಾಗಿ ಯೋಗ ಮಾಡ್ತಾರೆ ಈ ಬಾಲಯ್ಯ!

91ರ ಪ್ರಾಯದಲ್ಲೂ ಯೋಗಾಸನ ಮಾಡುವ ಬಾಲಯ್ಯ ಯಾವುದೇ ಕಠಿಣವಾದ ಆಸನಗಳನ್ನು ಅನಾಯಾಸವಾಗಿ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

balayya yoga
91ರ ಪ್ರಾಯದಲ್ಲೂ ಸಲಿಸಾಗಿ ಯೋಗ ಮಾಡುವ ಬಾಲಯ್ಯ
author img

By

Published : Jun 21, 2022, 4:02 PM IST

ಅದಿಲಾಬಾದ್(ತೆಲಂಗಾಣ): ಇತ್ತೀಚಿನ ದಿನಗಳಲ್ಲಿ 90ರ ವಯಸ್ಸು ಸಮೀಪಿಸುತ್ತಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿ ಹಾಸಿಗೆ ಹಿಡಿಯುವವರ ಸಂಖ್ಯೆಯೇ ಹೆಚ್ಚು. ಆದರೆ ಬಾಲಯ್ಯ ಎಂಬುವವರು 91ರ ಪ್ರಾಯದಲ್ಲೂ ಸಲೀಸಾಗಿ ಯೋಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ, ಇತರರಿಗೂ ಯೋಗದ ಮಹತ್ವ ಮತ್ತು ತಮ್ಮ ಅನುಭವಸ ಬಗ್ಗೆ ತಿಳಿಸಿಕೊಡುತ್ತಾರೆ.

ಪ್ರತಿದಿನ ಬೆಳಗ್ಗೆ 4 ಗಂಟೆಗೆ ಎದ್ದು 2 ಕಿಲೋ ಮೀಟರ್​ವರೆಗೆ ನಡೆದುಕೊಂಡು ಹೋಗುವುದು, ಅದಾದ ನಂತರ 1 ಗಂಟೆ ಕಾಲ ಯೋಗಾಸನ ಮಾಡುವುದು ಇವರ ದಿನ ನಿತ್ಯದ ಕಾರ್ಯಗಳಲ್ಲಿ ಒಂದಾಗಿದೆ. ಅವರು 8 ವರ್ಷದ ಬಾಲಕನಾಗಿದ್ದಾಗಿಂದ ಪ್ರಾರಂಭಿಸಿದ ಯೋಗಭ್ಯಾಸವನ್ನು 90ರ ಪ್ರಾಯದಲ್ಲೂ ಮುಂದುವರಿಸಿದ್ದಾರೆ. ಕಠಿಣವಾದ ಆಸನಗಳನ್ನು ಅನಾಯಾಸವಾಗಿ ಮಾಡಬಲ್ಲರು ಈ ಬಾಲಯ್ಯ.

ಬಟ್ಟೆಯನ್ನು ಹೊಲಿಯವುದರ ಮೂಲಕ ತಮ್ಮ ಕುಟುಂಬವನ್ನು ನಡೆಸುತ್ತಿದ್ದರು. ಅವರ ಹೆಂಡತಿ ಮರಣದ ನಂತರ 2016ರಿಂದ ಅದಿಲಾಬಾದ್​ ವೃದ್ಧಾಶ್ರಮಕ್ಕೆ ಸೇರಿಕೊಳ್ಳುತ್ತಾರೆ. ಈಗಲೂ ಇವರು ಬಟ್ಟೆ ಹೊಲಿಯುವುದನ್ನು ಮುಂದುರೆಸಿದ್ದಾರೆ. ಪ್ರತಿಯೊಬ್ಬರಿಗೂ ಆರೋಗ್ಯಕರವಾದ ಜೀವನ ಬೇಕಾದರೆ ಪ್ರತಿದಿನ ಯೋಗ ಮಾಡುವಂತೆ ಬಾಲಯ್ಯ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:ಮೊದಲ ದಿನದ ಕರ್ನಾಟಕ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಂಡುಬಂದಿದ್ದು ಹೀಗೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.