ETV Bharat / bharat

ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ತೆಲಂಗಾಣ ಚುನಾವಣಾ ಫಲಿತಾಂಶ: ಮತ ಎಣಿಕೆ ಆರಂಭ

Assembly Elections result 2023: ದೇಶದ ಗಮನ ಸೆಳೆದಿರುವ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ತೆಲಂಗಾಣ ವಿಧಾನಸಭೆ ಚುನಾವಣೆಗಳ ಫಲಿತಾಂಶ ಇಂದು ಪ್ರಕಟವಾಗಲಿದೆ.

Assembly Elections: All preparations for counting of votes in Rajasthan, Madhya Pradesh, Chhattisgarh, Telangana
ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ತೆಲಂಗಾಣದಲ್ಲಿ ಚುನಾವಣಾ ಫಲಿತಾಂಶ: ಮತ ಎಣಿಕೆಗೆ ಸಕಲ ಸಿದ್ಧತೆ
author img

By ETV Bharat Karnataka Team

Published : Dec 2, 2023, 10:17 PM IST

Updated : Dec 3, 2023, 8:26 AM IST

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಸೆಮಿಫೈನಲ್​ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ದೇಶದ ಗಮನ ಸೆಳೆದಿರುವ ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ ಮತ್ತು ತೆಲಂಗಾಣ ವಿಧಾನಸಭೆಯ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮಿಜೋರಾಂನಲ್ಲಿ ನಾಳೆ ಡಿ.4ರಂದು ಫಲಿತಾಂಶ ಪ್ರಕಟವಾಗಲಿದೆ.

ದೇಶದ ಚುನಾವಣೆಗೆ ಆಯೋಗವು ಅಕ್ಟೋಬರ್ 9ರಂದು ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಢ, ತೆಲಂಗಾಣ, ಮಿಜೋರಾಂ ವಿಧಾನಸಭೆ ಚುನಾವಣೆಗೆ ಏಕಕಾಲಕ್ಕೆ ದಿನಾಂಕ ಘೋಷಣೆ ಮಾಡಿತ್ತು. ಪಂಚ ರಾಜ್ಯಗಳಲ್ಲಿ ಮತದಾನವನ್ನು ಬೇರೆ - ಬೇರೆಗಳ ದಿನಾಂಕದಂದು ನಡೆಸಿದ್ದರೂ, ಡಿ.3ರಂದು ಒಟ್ಟಿಗೆ ಫಲಿತಾಂಶ ಪ್ರಕಟಿಸುವುದಾಗಿ ಹೇಳಿತ್ತು. ಆದರೆ, ಮಿಜೋರಾಂನಲ್ಲಿ ಮತ ಎಣಿಕೆ ದಿನವನ್ನು ಬದಲಾವಣೆ ಮಾಡಬೇಕೆಂಬ ಮನವಿ ಮೇರೆಗೆ ಡಿ.3ರ ಬದಲು ಡಿ.4ಕ್ಕೆ ಮುಂದೂಡಲಾಗಿದೆ. ಅಂತೆಯೇ, ಉಳಿದಂತೆ ನಾಲ್ಕು ರಾಜ್ಯಗಳಲ್ಲಿ ಇಂದು ಫಲಿತಾಂಶ ಪ್ರಕಟಕ್ಕೆ ಸಕಲ ಸಿದ್ಧತೆಯನ್ನು ಈಗಾಗಲೇ ಆಯೋಗ ಮಾಡಿಕೊಂಡಿದೆ.

ರಾಜಸ್ಥಾನ-36 ಮತ ಎಣಿಕೆ ಕೇಂದ್ರಗಳು: ಮರುಭೂಮಿ ರಾಜ್ಯ ರಾಜಸ್ಥಾನದಲ್ಲಿ ಒಟ್ಟು 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಸ್ಥಾನಗಳಿಗೆ ನ.25ರಂದು ಮತದಾನ ನಡೆದಿದೆ. ಒಟ್ಟು 1,862 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಡಿ.3ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಶುರುವಾಗಲಿದೆ. ರಾಜ್ಯಾದ್ಯಂತ ಒಟ್ಟು 36 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಎಣಿಕೆ ಕಾರ್ಯಕ್ಕೆ ಭದ್ರತಾ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಮೊದಲು ಮತಪತ್ರಗಳ ಎಣಿಕೆ ಕಾರ್ಯ ನಡೆಯಲಿದ್ದು, ಬಳಿಕ ಇವಿಎಂ ಮತಗಳ ಎಣಿಕೆ ಕಾರ್ಯ ನಡೆಯಲಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿ ಪ್ರವೀಣ್ ಗುಪ್ತಾ ತಿಳಿಸಿದ್ದಾರೆ.

ರಾಜ್ಯದ 30 ಚುನಾವಣಾ ಜಿಲ್ಲೆಗಳು ತಲಾ ಒಂದು ಎಣಿಕೆ ಕೇಂದ್ರವನ್ನು ಹೊಂದಿದ್ದರೆ, ಜೈಪುರ, ಜೋಧ್‌ಪುರ ಮತ್ತು ನಾಗೌರ್‌ನಲ್ಲಿ ತಲಾ ಎರಡು ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಪ್ರತಿ ವಿಧಾನಸಭೆಗೆ ಪ್ರತ್ಯೇಕ ಮತ ಎಣಿಕೆ ಹಾಲ್‌ಗಳನ್ನು ಮಾಡಲಾಗಿದ್ದು, ಆಯೋಗದ ಸೂಚನೆಯಂತೆ ಅಂಚೆ ಮತಗಳು ಮತ್ತು ಇವಿಎಂಗಳ ಎಣಿಕೆಗೆ ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ. ಇವಿಎಂ ಮತ ಎಣಿಕೆಗೆ 4,180 ಸುತ್ತುಗಳಿರುತ್ತವೆ. ಮತ ಎಣಿಕೆ ನಡೆಯುವ ಸ್ಥಳಗಳಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಇರುತ್ತದೆ. ಅಧಿಕೃತ ಪಾಸ್ ಹೊಂದಿರುವವರಿಗೆ ಮಾತ್ರ ಸ್ಥಳಗಳಿಗೆ ಪ್ರವೇಶಿಸಲು ಅವಕಾಶವಿರುತ್ತದೆ ಎಂದು ಅವರು ಹೇಳಿದ್ದಾರೆ. ಕರಣಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರ್ಮೀತ್ ಸಿಂಗ್ ಕೂನಾರ್ ನಿಧನದ ಹಿನ್ನೆಲೆಯಲ್ಲಿ ಅಲ್ಲಿ ಮಾತ್ರ ಚುನಾವಣೆ ಮುಂದೂಡಲಾಗಿದೆ.

ಮಧ್ಯಪ್ರದೇಶ-52 ಜಿಲ್ಲಾ ಕೇಂದ್ರಗಳಲ್ಲಿ ಎಣಿಕೆ: ಮಧ್ಯಪ್ರದೇಶದ 230 ವಿಧಾನಸಭಾ ಸ್ಥಾನಗಳಿಗೆ ನ.17ರಂದು ಒಂದೇ ಹಂತದಲ್ಲಿ ಚುನಾವಣೆ ನಡೆದಿದೆ. ಇಲ್ಲಿ ಕೂಡ ಎಣಿಕೆ ಕಾರ್ಯಕ್ಕೆ ಭದ್ರತಾ ವ್ಯವಸ್ಥೆ ಸೇರಿದಂತೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. 52 ಜಿಲ್ಲಾ ಕೇಂದ್ರಗಳಲ್ಲಿ ಡಿ.3ರಂದು ಬೆಳಗ್ಗೆ 8 ಗಂಟೆಯಿಂದ ಬಿಗಿ ಭದ್ರತೆಯ ನಡುವೆ ಎಣಿಕೆ ಆರಂಭವಾಗಲಿದೆ. ಇವಿಎಂ ಮೂಲಕ ಶೇ.77.15ರಷ್ಟು ಮತದಾನವಾಗಿದ್ದು, ಅಂಚೆ ಮತಪತ್ರಗಳು ಸೇರಿಸಿದರೆ, ಒಟ್ಟು ಮತದಾನದ ಪ್ರಮಾಣವು ಶೇ.77.82ರಷ್ಟು ಆಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಅನುಪಮ್ ರಾಜನ್ ತಿಳಿಸಿದ್ದಾರೆ.

ಎಲ್ಲ ಜಿಲ್ಲೆಗಳಲ್ಲಿ ಅಂಚೆ ಮತಗಳ ಎಣಿಕೆಗೆ 692 ಟೇಬಲ್‌ಗಳನ್ನು ಹಾಕಲಾಗಿದ್ದು, ಇವಿಎಂಗಳ ಮತಗಳ ಎಣಿಕೆಗೆ ಒಟ್ಟು 4,369 ಟೇಬಲ್‌ಗಳನ್ನು ಸ್ಥಾಪಿಸಲಾಗಿದೆ. ಎಲ್ಲ ಜಿಲ್ಲಾ ಚುನಾವಣಾಧಿಕಾರಿಗಳು, ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ಭದ್ರತಾ ಪ್ರೋಟೋಕಾಲ್‌ಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಸರ್ಕಾರವು ಎಣಿಕೆ ದಿನವನ್ನು ಡ್ರೈಡೇ ಎಂದು ಘೋಷಿಸಿದೆ. ಈ ಸಮಯದಲ್ಲಿ ಎಲ್ಲ ವೈನ್ ಮತ್ತು ಮದ್ಯದ ಅಂಗಡಿಗಳು ಬಂದ್​ ಇರುತ್ತವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಛತ್ತೀಸ್​ಗಢ- 33 ಮತ ಎಣಿಕೆ ಕೇಂದ್ರಗಳು: ಛತ್ತೀಸ್​ಗಢದ 90 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 7ಮತ್ತು 17 ರಂದು ಎರಡು ಹಂತಗಳಲ್ಲಿ ಮತದಾನ ನಡೆದಿದೆ. ಶೇ.76.31ರಷ್ಟು ಮತದಾನವಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳು ಸೇರಿದಂತೆ ರಾಜ್ಯದ 33 ಜಿಲ್ಲೆಗಳಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರತಿ ಮತ ಎಣಿಕೆ ಕೇಂದ್ರದಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ. 33 ಜಿಲ್ಲಾ ಕೇಂದ್ರಗಳಲ್ಲೂ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಶುರುವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ರೀನಾ ಬಾಬಾ ಸಾಹೇಬ್ ಕಂಗಳೆ ತಿಳಿಸಿದ್ದಾರೆ.

ಎಣಿಕೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಒಟ್ಟು 90 ಚುನಾವಣಾಧಿಕಾರಿಗಳು, 416 ಸಹಾಯಕ ಚುನಾವಣಾಧಿಕಾರಿಗಳು, 4,596 ಎಣಿಕೆ ಸಿಬ್ಬಂದಿ ಮತ್ತು 1,698 ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಪ್ರತಿ ಎಣಿಕೆ ಹಾಲ್‌ನಲ್ಲಿ 14 ಟೇಬಲ್‌ಗಳನ್ನು ಏಳು ಸುತ್ತುಗಳಲ್ಲಿ ಜೋಡಿಸಲಾಗಿದೆ. ಪಾಂಡರಿಯಾ, ಕವರ್ಧಾ, ಸಾರಂಗಢ, ಬಿಲೈಗಢ, ಕಸ್ಡೋಲ್ ಮತ್ತು ಭರತ್‌ಪುರ್-ಸೋನ್ಹತ್ ವಿಧಾನಸಭಾ ಕ್ಷೇತ್ರಗಳನ್ನು ಹೊರತುಪಡಿಸಿ, ಎಲ್ಲ ಕ್ಷೇತ್ರಗಳ ಮರ ಎಣಿಕೆಗೆ 21 ಟೇಬಲ್‌ಗಳನ್ನು ಹಾಕಲಾಗಿದೆ ಎಂದು ಅವರು ಹೇಳಿದ್ದಾರೆ.

ತೆಲಂಗಾಣ-ಮತ ಎಣಿಕೆಗೆ ಸಿದ್ಧತೆ: ತೆಲಂಗಾಣದ 119 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 30 ರಂದು ಮತದಾನವಾಗಿದೆ. ಡಿ.3ರಂದು ಬೆಳಗ್ಗೆ 8 ಗಂಟೆಯಿಂದ ಎಲ್ಲ ಕ್ಷೇತ್ರಗಳ ಮತ ಎಣಿಕೆ ಆರಂಭವಾಗಿದೆ. ಬೆಳಗ್ಗೆ 8 ಗಂಟೆಗೆ ಅಂಚೆ ಮತಪತ್ರಗಳೊಂದಿಗೆ ಎಣಿಕೆ ಶುರುವಾಗಲಿದ್ದು, ಬೆಳಗ್ಗೆ 8.30ರಿಂದ ಇವಿಎಂಗಳಲ್ಲಿನ ಮತ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ವಿಕಾಸ್ ರಾಜ್ ಹೇಳಿದ್ದಾರೆ.

500ಕ್ಕಿಂತ ಹೆಚ್ಚು ಮತಗಟ್ಟೆಗಳಿರುವ ಆರು ಕ್ಷೇತ್ರಗಳನ್ನು ಹೊರತುಪಡಿಸಿ ಪ್ರತಿ ಎಣಿಕೆ ಕೇಂದ್ರದಲ್ಲಿ 14 ಎಣಿಕೆ ಟೇಬಲ್‌ಗಳನ್ನು ಅಳವಡಿಸಲಾಗಿದೆ. ಜೊತೆಗೆ ಅಂತಹ ಸ್ಥಳಗಳಲ್ಲಿ 28 ಎಣಿಕೆ ಟೇಬಲ್‌ಗಳನ್ನು ಬಳಸಲಾಗುವುದು. ಕೇಂದ್ರ ಭದ್ರತಾ ಪಡೆಗಳು ಮತ್ತು ರಾಜ್ಯ ಸಶಸ್ತ್ರ ಪೊಲೀಸ್ ಪಡೆಗಳನ್ನು ಒಳಗೊಂಡಿರುವ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣದಲ್ಲಿ ಪುಟಿದೆದ್ದ ಬೆನ್ನಲ್ಲೇ ನೆರೆಯ ಒಡಿಶಾದತ್ತ ಕಾಂಗ್ರೆಸ್​ ದೃಷ್ಟಿ: ಪುನಶ್ಚೇತನ ಕಾರ್ಯತಂತ್ರ ಏನು?

Last Updated : Dec 3, 2023, 8:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.