ಔರಂಗಾಬಾದ್ (ಮಹಾರಾಷ್ಟ್ರ): ಪ್ರೀತಿಸಿದ ಮುಸ್ಲಿಂ ಗೆಳತಿಯನ್ನು ಮದುವೆಯಾಗಲು ಅನ್ಯ ಧರ್ಮಕ್ಕೆ ಮತಾಂತರವಾಗಬೇಕು ಎಂದು ಯುವತಿಯ ಕುಟುಂಬಸ್ಥರು ಹಿಂಸೆ ನೀಡಿದ್ದು ,ಇದಕ್ಕೆ ನಿರಾಕರಿಸಿದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಔರಂಗಬಾದ್ನಲ್ಲಿ ನಡೆದಿದೆ.
ಸಂತ್ರಸ್ತನನ್ನು ದೀಪಕ್ ಸೋನ್ವಾನೆ ಎಂದು ಗುರುತಿಸಲಾಗಿದ್ದು, ಈತ ಔರಂಗಾಬಾದ್‌ನಲ್ಲಿ ಬಿಇ ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದಾನೆ. ಇವರಿಗೆ 2018ರಲ್ಲಿ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಮುಸ್ಲಿಂ ಹುಡುಗಿಯೊಬ್ಬಳ ಪರಿಚಯವಾಗಿತ್ತು. ಆ ಪರಿಚಯ ಪ್ರೀತಿಗೆ ತಿರುಗಿತ್ತು ಮತ್ತು 2021 ರಲ್ಲಿ ಇವರು ಮದುವೆಯಾಗಲು ನಿರ್ಧರಿಸಿದರು.
ಹಾಗಾಗಿ ಈ ಜೋಡಿಗಳು ವಿಷಯವನ್ನು ಹುಡುಗಿಯ ಕುಟುಂಬಕ್ಕೆ ತಿಳಿಸಿದಾಗ, ದೀಪಕ್‌ನನ್ನು ಇಸ್ಲಾಂಗೆ ಮತಾಂತರಿಸುವಂತೆ ಕೇಳಲಾಯಿತು. ಆದರೆ ದೀಪಕ್ ಮತಾಂತರಗೊಳ್ಳಲು ನಿರಾಕರಿಸಿದಾಗ ಯುವತಿಯ ಮನೆಯವರು ಥಳಿಸಿದ್ದಾರೆ. ಈ ಚಿತ್ರಹಿಂಸೆ ಒಂದೆ ದಿನಕ್ಕೆ ನಿಲ್ಲದೆ ದಿನಗಟ್ಟಲೆ ಮುಂದುವರೆಯಿತು.
ಇಷ್ಟಲ್ಲದೇ, ದೀಪಕ್‌ನನ್ನು ಅವರ ಮನೆಯಿಂದಲೇ ಅಪಹರಿಸಿ ಔರಂಗಾಬಾದ್ ಸಂಸದ ಇಮ್ತಿಯಾಜ್ ಜಲೀಲ್ ಅವರ ಕಾರ್ಯಕರ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತನಗೆ ಬಲವಂತವಾಗಿ ಸುನ್ನತಿ ಮಾಡಿಸಲಾಗಿದೆ, ತನ್ನನ್ನು ಸುಳ್ಳು ಪ್ರಕರಣಗಳಲ್ಲಿ ಜೈಲಿನಲ್ಲಿ ಬಂಧಿಸಿ 11 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎಂದು ಯುವಕ ದೀಪಕ್ ಆರೋಪಿಸಿದ್ದಾನೆ.
ಪೊಲೀಸ್ ಕಮಿಷನರ್ ನಿಖಿಲ್ ಗುಪ್ತಾ ಅವರು, ಎಸಿಪಿ ಮಟ್ಟದ ಅಧಿಕಾರಿಯೊಬ್ಬರು ಇಡೀ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ, ಈ ಪ್ರಕರಣದ ಬಗ್ಗೆ ತನಿಖೆಯ ವರದಿ ಬಂದ ನಂತರವಷ್ಟೇ ಸತ್ಯಾಂಶ ತಿಳಿಯಬೇಕಿದೆ ಎಂದು ಹೇಳಿದ್ದಾರೆ. ಹಾಗೆ ಇದೇ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯ ಸಹಕಾರ ಸಚಿವ ಅತುಲ್ ಸೇವ್ ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಇದು ಗಂಭೀರ ವಿಷಯವಾಗಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; ಕ್ರೈಂ ಬ್ರಾಂಚ್ ಪೊಲೀಸ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ, ಕಾರಿನೊಂದಿಗೆ ಪರಾರಿ