ಗುವಾಹಟಿ: ಟೀ ಮತ್ತು ಅಸ್ಸಾಂ ಎಂಬ ಪದಗಳು ಒಂದೊಂದು ಬೆಸೆದು ಕೊಂಡಿದೆ. ಯಾವಾಗಲೇ ಅಸ್ಸಾಂ ಎಂಬ ಪದ ಮನಸಿಗೆ ಬಂದಾಕ್ಷಣ ನೆನಪಿಗೆ ಬರುವುದು ಹಸಿರಿನಿಂದ ಕೂಡಿರುವ ಚಹಾ ತೋಟಗಳು. 200 ವರ್ಷಗಳ ಇತಿಹಾಸವನ್ನು ಹೊಂದಿರುವ ಅಸ್ಸಾಂ ಚಹಾ ತಮ್ಮ ಕಳೆ ಕಳೆದುಕೊಳ್ಳುತ್ತಿದೆ. ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಒಟ್ಟು ಪ್ರಮಾಣದಲ್ಲಿ ಚಹಾದಲ್ಲಿ ಶೇ 50ರಷ್ಟು ಟೀ ಉತ್ಪಾದನೆ ಅಸ್ಸೋಂನಲ್ಲೇ ಆಗುತ್ತಿತ್ತು. ಆದರೆ, ಇದೀಗ ಈ ವಿಸ್ತಾರ ಮಾರುಕಟ್ಟೆ ಕುಸಿದಿದೆ.
ಅಸ್ಸಾಂನ 200 ವರ್ಷದ ಚಹಾ ಉದ್ಯಮ ಇದೀಗ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿದೆ. ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಅವರು ತಮ್ಮ ರಾಜ್ಯದ ಚಹಾ ಉದ್ಯಮದ ಬಗ್ಗೆ ಚಿಂತಿತರಾಗಿದ್ದಾರೆ. ಅಸ್ಸೋಂ ಸರ್ಕಾರ ಇದೀಗ ಈ ಬಿಕ್ಕಟ್ಟಿನಲ್ಲಿರುವ ಚಹಾ ಉದ್ಯಮದ ಉಳಿಸಲು ಬಾಬಾ ರಾಮ್ದೇವ್ ಜೊತೆಗೆ ಕೈ ಜೋಡಿಸಲು ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮುಖ್ಯಮಂತ್ರಿಗಳು ಬಾಬಾ ರಾಮ್ದೇವ್ ಅವರೊಂದಿಗೆ ಸಂಪರ್ಕ ಸಾಧಿಸಿದ್ದು, ಅಸ್ಸಾಂ ಟೀ ಉತ್ಪಾದನೆ ಮತ್ತು ಉದ್ಯಮದ ರಕ್ಷಣೆಗೆ ಮಾರುಕಟ್ಟೆ ಬ್ರಾಂಡಿಂಗ್ ಜವಾಬ್ದಾರಿಯನ್ನು ನೀಡಲಿದ್ದಾರೆ. ಇದು ಆದಲ್ಲಿ ಈ ಬಾರಿ ಅಸ್ಸಾಂನಲ್ಲಿ ಟೀ ಮಾರ್ಕೆಟ್ ಅನ್ನು ಬಾಬಾ ರಾಮ್ದೇವ್ ಅವರ ಪತಂಜಲಿ ನಿಯಂತ್ರಣ ಮಾಡಲಿದೆ.
ಅಸ್ಸೋಂ ಸರ್ಕಾರ ಕೂಡ ಬಾಬಾ ರಾಮ್ ದೇವ್ ಚಹಾದ ಬ್ರಾಂಡ್ ಮಾರ್ಕೆಟ್ ಮಾಡುವಂತೆ ಬಯಸಿದೆ. ಅವರನ್ನು ಹೊರಾತಾಗಿ ಬೇರೆ ಯಾರನ್ನು ಮಾಡುವ ಉದ್ದೇಶವನ್ನು ಹೊಂದಿಲ್ಲ. ಇದೇ ಪ್ರಸ್ತಾವನೆಯನ್ನು ಬಾಬಾ ರಾಮ್ದೇವ್ ಮುಂದೆ ಮುಖ್ಯಮಂತ್ರಿ ಹಿಮವಂತ್ ಬಿಸ್ವಾ ಶರ್ಮಾ ಕೂಡ ಇಟ್ಟಿದ್ದಾರೆ. ಈ ಕುರಿತು ಇತ್ತೀಚಿಗೆ ಅಸ್ಸೋಂ ಕಾರ್ಮಿಕ ಮತ್ತು ಉದ್ಯೋಗ ಸಚಿವ ಸಂಜಯ್ ಕಿಸನ್ ಕೂಡ ದೃಢಪಡಿಸಿದ್ದಾರೆ.
ಬಾಬಾ ರಾಮ್ದೇವ್ ತಮ್ಮ ಉದ್ಯಮವನ್ನು ರಾಜ್ಯದಲ್ಲಿ ವಿಸ್ತರಿಸಲು ನೋಡಿರುವುದು ಇದೇ ಮೊದಲ ಬಾರಿಯಲ್ಲ. ಇತ್ತೀಚಿಗೆ ಪತಂಜಲಿಗೆ ಅಸ್ಸೋಂನ ಟಿನ್ಸುಕಿಯ ಜಿಲ್ಲೆಯ ಸಡಿಯಾದಲ್ಲಿ ಪಾಮ್ ಆಯಿಲ್ ಕೃಷಿಗೆ 20 ಸಾವಿರ ಹೆಕ್ಟೇರ್ ಭೂಮಿಯನ್ನು ನೀಡಿದೆ. ಅನೇಕ ರಾಜಕೀಯ ಪಕ್ಷಗಳು, ಸಂಘಟನೆ ಮತ್ತು ಸಾರ್ವಜನಿಕರು ಭಾರೀ ವಿರೋಧವನ್ನು ವ್ಯಕ್ತಪಡಿಸಿದ್ದವು. ಇದರಿಂದ ಧೃತಿಗೆಡದೇ, ಯೋಗ ಗುರು ತಮ್ಮ ಉದ್ಯಮವನ್ನು ರಾಜ್ಯದಲ್ಲಿ ವಿಸ್ತರಿಸಿದ್ದಾರೆ. ರಾಜ್ಯದಲ್ಲಿ ಬಾಬಾ ರಾಮ್ದೇವ್ ಪತಂಜಲಿ ತಾಳೆ ಎಣ್ಣೆಯ ಕೃಷಿಯನ್ನು ದೊಡ್ಡ ಮಟ್ಟದಲ್ಲಿ ವಿಸ್ತರಿಸಿದ್ದು. ಸೋನಿತ್ಪುರ್ನ ಅರಣ್ಯದಲ್ಲಿ ವಾಣಿಜ್ಯ ಪಾರ್ಕ್ ಹೊಂದಿದ್ದಾರೆ. ಇದೀಗ ಅವರ ಕಣ್ಣು ಚಹಾ ಉದ್ಯಮದ ಮೇಲೆ ಇದೆ.
ಸದ್ಯ ಅಸ್ಸೋಂ ಉತ್ಪಾದಿಸುವಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯನ್ನು ಹೊಂದಿಲ್ಲ. ಟೀ ಉತ್ಪಾದನೆಯನ್ನು ಮಾರಾಟ ಮಾಡಲು ಆಗುತ್ತಿಲ್ಲ. ಫಲಿತಾಂಶವಾಗಿ ಚಹಾದ ಉದ್ಯಮ ಸವಾಲಿನಿಂದ ಕೂಡಿದೆ. ಚಹಾ ಬೆಳೆಗಾರರಿಗೆ ಉತ್ತಮ ದರವು ಸಿಗುತ್ತಿಲ್ಲ. ಕೀನ್ಯಾ ಮತ್ತು ಶ್ರೀಲಂಕಾದ ಟೀಯಿಂದಾಗಿ ಇಲ್ಲಿನ ಉದ್ಯಮ ಮಾರುಕಟ್ಟೆಯಲ್ಲಿ ಸ್ಪರ್ಧೆ ಎದುರಿಸುವಂತಾಗಿದೆ ಎಂದು ಸಂಜಯ್ ಕಿಸನ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಹಿಮಾಂತ್ ಬಿಸ್ವಾಸ್ ಶರ್ಮಾ ಬಾಬಾ ರಾಮ್ ದೇವ್ ಅವರನ್ನು ಸಂಪರ್ಕಿಸಿದ್ದು, ಯೋಗ ಗುರು ಗುರು ಕೂಡ ಉದ್ಯಮದ ಸಹಾಯಕ್ಕೆ ಕೈಜೋಡಿಸುವ ಭರವಸೆ ನೀಡಿದ್ದಾರೆ. ಅವರು ಅಸ್ಸೋಂನಿಂದ ಚಹಾ ಖರೀದಿಸಿ, ಪತಂಜಲಿ ಮೂಲಕ ಜಗತ್ತಿನ ನಾನಾ ಭಾಗದಲ್ಲಿ ಮಾರುಕಟ್ಟೆ ನೀಡುವ ಭರವಸೆ ನೀಡಿದ್ದಾರೆ. ಇದಕ್ಕಾಗಿ ಪತಂಜಲಿ ದೊಡ್ಡ ಮಟ್ಟದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ನಡೆಸಲಿದೆ. ಪತಂಜಲಿ ಮೂಲಕ ಅಸ್ಸಾಂ ಚಹ ಜಾಗತಿಕ ಮಾರುಕಟ್ಟೆಯಲ್ಲಿ ವಿಸ್ತರಿಸಲಿದೆ.
ಅಸ್ಸೋಂನ ಈ ಚಹಾದ ಉದ್ಯಮವನ್ನು ರಾಮ್ದೇವ್ ವ್ಯವಸ್ಥಿತವಾಗಿ ನಿರ್ವಹಣೆ ಮಾಡಲಿದ್ದಾರೆಯೇ? 200 ವರ್ಷದ ಅಸ್ಸಾಂ ಚಹಾ ಪತಂಜಲಿ ಚಹಾವಾಗಲಿದೆಯಾ ಎಂಬ ಮಾತು ಸದ್ಯ ಚರ್ಚಿತ ವಿಷಯವಾಗಿದೆ
(ಪ್ರಶಾಂತ್ ಕುಮಾರ್ ಬರುವ)
ಇದನ್ನೂ ಓದಿ: ಹವಾಮಾನ ಬದಲಾವಣೆ: ಅಸ್ಸೋಂನಲ್ಲಿ ಗಣನೀಯವಾಗಿ ಇಳಿಕೆ ಕಂಡ ಟೀ ಉತ್ಪಾದನೆ