ETV Bharat / bharat

ಭಾವಿ ಪತಿಯನ್ನೇ ಬಂಧಿಸಿ ಸುದ್ದಿಯಾಗಿದ್ದ ಲೇಡಿ ಎಸ್​ಐ ಅರೆಸ್ಟ್.. ಸೇವೆಯಿಂದಲೂ ಸಸ್ಪೆಂಡ್ - si junmoni rabha suspended from her job after arrest

ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಎಸ್​ಐ ಜುನ್ಮೋನಿ ರಾಭಾ ಬಂಧನವಾಗಿದ್ದು, ಬಂಧನವಾಗುತ್ತಿದ್ದಂತೆ ಅವರನ್ನು ಸೇವೆಯಿಂದಲೂ ಅಮಾನತು ಮಾಡಲಾಗಿದೆ.

Assam si junmoni rabha suspended from her job after arrest in Corruption Charges
ಭಾವಿ ಪತಿಯನ್ನೇ ಬಂಧಿಸಿ ಸುದ್ದಿಯಾಗಿದ್ದ ಲೇಡಿ ಎಸ್​ಐ ಅರೆಸ್ಟ್​​, ಸೇವೇಯಿಂದಲೂ ಸಸ್ಪೆಂಡ್​
author img

By

Published : Jun 5, 2022, 4:14 PM IST

ಗುವಾಹತಿ (ಅಸ್ಸೋಂ): ತನ್ನ ಭಾವಿ ಪತಿಯನ್ನೇ ಬಂಧಿಸಿ ಸುದ್ದಿಯಾಗಿದ್ದ ಅಸ್ಸೋಂ ಮಹಿಳಾ ಪೊಲೀಸ್​ ಅಧಿಕಾರಿ ಜುನ್ಮೋನಿ ರಾಭಾ ಕೂಡ ಈಗ ಜೈಲು ಹಕ್ಕಿಯಾಗಿದ್ದಾರೆ. ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜುನ್ಮೋನಿ ರಾಭಾ ಬಂಧನವಾಗಿದ್ದು, ಬಂಧನವಾಗುತ್ತಿದ್ದಂತೆ ಇವರನ್ನು ಸೇವೆಯಿಂದಲೂ ಅಮಾನತು ಮಾಡಲಾಗಿದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಕಳೆದ ತಿಂಗಳು ವಂಚನೆ ಪ್ರಕರಣದಲ್ಲಿ ತನ್ನ ಭಾವಿ ಪತಿ ಪೊಗಾಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅಲ್ಲದೇ, ನಂತರದಲ್ಲಿ ಆತನನ್ನು ಭಾವಿ ಪತ್ನಿಯೇ ಬಂಧಿಸಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಲೇಡಿ ಸಿಂಗಂ ಎಂದೇ ರಾಭಾ ಫೇಮಸ್‌ ಆಗಿದ್ದರು. ಇದೀಗ ಇದೇ ಲೇಡಿ ಸಿಂಗಂ ಭ್ರಷ್ಟಾಚಾರ ಆರೋಪದಲ್ಲಿ ಅರೆಸ್ಟ್​ ಆಗಿದ್ದಾರೆ.

ಮಜುಲಿಯಲ್ಲಿ ಕರ್ತವ್ಯದಲ್ಲಿದ್ದಾಗ ರಾಭಾ ತನ್ನ ಭಾವಿ ಪತಿಯೊಂದಿಗೆ ಸೇರಿ ಹಣಕಾಸು ವ್ಯವಹಾರದಲ್ಲಿ ಭಾಗಿಯಾಗಿ ವಂಚಿಸಿದ್ದಾರೆ ಎಂದು ಇಬ್ಬರು ಗುತ್ತಿಗೆದಾರರು ದೂರು ನೀಡಿದ್ದರು. ಹೀಗಾಗಿ ಪ್ರಸ್ತುತ ಕಲಿಯಾಬೋರ್ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದ ರಾಭಾ ಅವರನ್ನು ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿ ಬಳಿಕ ಬಂಧಿಸಲಾಗಿದೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆರೋಪಿ ಎಸ್​ಐ ಅವರನ್ನು ಒಪ್ಪಿಸಲಾಗಿದೆ.

ಇದನ್ನೂ ಓದಿ: ತನ್ನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಭಾವಿಪತಿಯನ್ನೇ ಜೈಲಿಗಟ್ಟಿದ ಲೇಡಿ ಸಬ್ ​​ಇನ್ಸ್​​​ಪೆಕ್ಟರ್!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.