ಗುವಾಹಟಿ (ಅಸ್ಸೋಂ): ರೈಲುಗಳಲ್ಲಿ ಮತ್ತು ರೈಲ್ವೆ ಸ್ಟೇಷನ್ಗಳಲ್ಲಿ ಪ್ರಯಾಣಿಕರ ಬಳಿ ಒತ್ತಾಯಪೂರ್ವಕವಾಗಿ ಹಣ ಕೀಳುವುದು, ದುಡ್ಡು ಕೊಡದೇ ಇದ್ದರೆ ಇನ್ನಿಲ್ಲದ ಕಾಟ ಕೊಡುವುದನ್ನು ಮಂಗಳಮುಖಿಯರು ಮಾಡುತ್ತಾರೆ. ತಮ್ಮ ಬಳಿ ದುಡ್ಡು ಇಲ್ಲ, ಎಲ್ಲಿಯಾದರು ಕೆಲಸ ಮಾಡಿ ಹಣ ಸಂಪಾದಿಸಿ ಎಂದು ಕೆಲ ಪ್ರಯಾಣಿಕರು ಗದರುತ್ತಾರೆ. ಆಗ ಮಂಗಳಮುಖಿಯರು ತಮ್ಮನ್ಯಾರೂ ಕೆಲಸಕ್ಕೆ ಕರೆಯೊಲ್ಲ, ನಮ್ಮನ್ನು ಬೇರೆ ರೀತಿಯಲ್ಲಿ ಕಾಣುತ್ತಾರೆ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಇದೀಗ ನೊಂದವರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದೆ ರೈಲ್ವೆ ಇಲಾಖೆ.
ಹೌದು, ತೃತೀಯಲಿಂಗಿ ಸಮುದಾಯವನ್ನು ಮತ್ತಷ್ಟು ಸಬಲೀಕರಣಗೊಳಿಸುವ ಪ್ರಯತ್ನದಲ್ಲಿ ಶುಕ್ರವಾರ ಗುವಾಹಟಿಯಲ್ಲಿ ರೈಲ್ವೆ ಇಲಾಖೆ ಒಂದು ಹೆಜ್ಜೆ ಮುಂದಿಟ್ಟಿದೆ. ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ವಿಶೇಷ 'ಟ್ರಾನ್ಸ್ ಟೀ ಸ್ಟಾಲ್' ಅನ್ನು ತೆರೆಯುವ ಮೂಲಕ ಈ ಸಮುದಾಯವನ್ನು ಬೆಳಕಿಗೆ ತರುವ ಹೊಸ ಪ್ರಯತ್ನ ಮಾಡಿದೆ.
-
Assam: Guwahati railway station gets first-of-its-kind transgender tea stall
— ANI Digital (@ani_digital) March 10, 2023 " class="align-text-top noRightClick twitterSection" data="
Read @ANI Story | https://t.co/rjR0Aze4sY#Assam #Transgender #Guwahatirailwaystation pic.twitter.com/b5jwUsIMCt
">Assam: Guwahati railway station gets first-of-its-kind transgender tea stall
— ANI Digital (@ani_digital) March 10, 2023
Read @ANI Story | https://t.co/rjR0Aze4sY#Assam #Transgender #Guwahatirailwaystation pic.twitter.com/b5jwUsIMCtAssam: Guwahati railway station gets first-of-its-kind transgender tea stall
— ANI Digital (@ani_digital) March 10, 2023
Read @ANI Story | https://t.co/rjR0Aze4sY#Assam #Transgender #Guwahatirailwaystation pic.twitter.com/b5jwUsIMCt
ಇದನ್ನೂ ಓದಿ: ಯುಗಾದಿ ಹಬ್ಬದ ಪ್ರಯುಕ್ತ ‘ಬೆಂಗಳೂರು ಉತ್ಸವ’; ಸ್ಯಾಂಡಲ್ವುಡ್ ತಾರೆಯರಿಂದ ಚಾಲನೆ
ಈ ಟೀ ಸ್ಟಾಲ್ ಅನ್ನು ತೃತೀಯಲಿಂಗಿಗಳ ಸಮುದಾಯವೇ ಸಂಪೂರ್ಣವಾಗಿ ನಿರ್ವಹಿಸುತ್ತದೆ ಎಂದು ಈಶಾನ್ಯ ಗಡಿ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಟ್ರಾನ್ಸ್ ಟೀ ಸ್ಟಾಲ್ ಹೆಸರಿನ ಟೀ ಸ್ಟಾಲ್ ಅನ್ನು ಆಲ್ ಅಸ್ಸೋಂ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್‌ನ ಸಕ್ರಿಯ ಸಹಯೋಗದೊಂದಿಗೆ ಗುವಾಹಟಿಯ ಕಮ್ರೂಪ್ (ಎಂ) ಡೆಪ್ಯುಟಿ ಕಮಿಷನರ್ ಕಚೇರಿ ಕಾಂಪೌಂಡ್‌ನಲ್ಲಿ ಪ್ರಾರಂಭ ಮಾಡಲಾಗಿದೆ. ಇದು ಗುವಾಹಟಿ ರೈಲು ನಿಲ್ದಾಣದ ಮೊದಲ ಟ್ರಾನ್ಸ್‌ಜೆಂಡರ್ ಟೀ ಸ್ಟಾಲ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಅಸ್ಸೋಂನ ಟ್ರಾನ್ಸ್‌ಜೆಂಡರ್ ಕಲ್ಯಾಣ ಮಂಡಳಿಯ ಸಹಾಯಕ ಉಪಾಧ್ಯಕ್ಷ ಸ್ವಾತಿ ಬಿಧನ್ ಬರುವಾ ಅವರ ಉಪಸ್ಥಿತಿಯಲ್ಲಿ ಶುಕ್ರವಾರ ಗುವಾಹಟಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಈಶಾನ್ಯ ಗಡಿ ರೈಲ್ವೆಯ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ ಅವರು ಈ "ಟ್ರಾನ್ಸ್ ಟೀ ಸ್ಟಾಲ್" ಅನ್ನು ಉದ್ಘಾಟನೆ ಮಾಡಿದರು. ಉದ್ಘಾಟನೆ ಬಳಿಕ ಈಶಾನ್ಯ ಗಡಿ ರೈಲ್ವೆ ಅಧಿಕಾರಿಗಳು ಈ 'ಟ್ರಾನ್ಸ್ ಟೀ ಸ್ಟಾಲ್' ವಿಶೇಷತೆ ಬಗ್ಗೆ ಮಾಹಿತಿ ನೀಡಿದರು.
ಈ ಸಮಾರಂಭದಲ್ಲಿ ಮಾತನಾಡಿದ ಈಶಾನ್ಯ ಗಡಿ ರೈಲ್ವೆಯ ಜನರಲ್ ಮ್ಯಾನೇಜರ್ ಅನ್ಶುಲ್ ಗುಪ್ತಾ, ಟ್ರಾನ್ಸ್‌ಜೆಂಡರ್‌ಗಳ ಸಬಲೀಕರಣಕ್ಕಾಗಿ ಈಶಾನ್ಯ ಗಡಿ ರೈಲ್ವೆ ಒಂದು ಹೊಸ ಹೆಜ್ಜೆ ಇಟ್ಟಿದೆ. ಇದು ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲಿ ಮೊದಲ ಪ್ರಯತ್ನವಾಗಿದೆ. ತೃತೀಯಲಿಂಗಿ ಸಮುದಾಯದವರ ಆರ್ಥಿಕವಾಗಿ ಉತ್ತೇಜನ ನೀಡುವಲ್ಲಿ ಜಾರಿಗೆ ತರಲಾಗಿದ್ದು, ಇದನ್ನು ಸಂಪೂರ್ಣವಾಗಿ ಸದ್ಭಳಿಕೆ ಮಾಡಿಕೊಳ್ಳಬೇಕು. ಕೇಂದ್ರ ಸರ್ಕಾರದಿಂದ ಮುಂಬರುವ ದಿನಗಳಲ್ಲಿ ಟ್ರಾನ್ಸ್‌ಜೆಂಡರ್ ಕಲ್ಯಾಣ ಅವರ ಅವರ ಏಳಿಗೆಗಾಗಿ ಇಂತಹ ಯೋಜನೆಗಳನ್ನು ಮತ್ತಷ್ಟು ತರಲಾಗುವುದು ಎಂದು ಅವರು ಹೇಳಿದರು.
ಸದ್ಯ ಈಶಾನ್ಯ ಗಡಿ ಲ್ವೆಯು ಈ ಪ್ರದೇಶದ ಇತರೆ ರೈಲ್ವೆ ನಿಲ್ದಾಣಗಳಲ್ಲಿಯೂ ಇಂತಹ ಟ್ರಾನ್ಸ್ ಟೀ ಸ್ಟಾಲ್ಗಳನ್ನು ತೆರೆಯಲು ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ: ಸಾವಿರಾರು ಉದ್ಯೋಗಿಗಳನ್ನ ವಜಾಗೊಳಿಸಲು ಮುಂದಾದ ಫೇಸ್‌ಬುಕ್ ಮಾತೃ ಕಂಪನಿ ಮೆಟಾ