ETV Bharat / bharat

ಅಪ್ರಾಪ್ತ ಹುಡುಗಿಯರ ವಿವಾಹವಾದ ಗಂಡಂದಿರಿಗೆ ಜೈಲು: ಅಸ್ಸಾಂ ಸಿಎಂ ಹಿಮಂತ್​ - ಬಾಲ್ಯವಿವಾಹ ತಡೆಗೆ ಕಠಿಣ ಕಾನೂನು

ತಾಯಿ-ಶಿಶು ಮರಣ, ಬಾಲ್ಯ ವಿವಾಹಗಳು ಅಧಿಕವಿರುವ ಅಸ್ಸಾಂನಲ್ಲಿ ಕಠಿಣ ನಿಯಮ ರೂಪಿಸಲು ಸರ್ಕಾರ ಮುಂದಾಗಿದೆ. 18ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ವಿವಾಹವಾದ ಗಂಡಂದಿರನ್ನು ಬಂಧಿಸಲಾಗುವುದು ಎಂದು ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.

assam-cm-himanta-biswa-sharma
ಅಸ್ಸಾಂ ಸಿಎಂ ಹಿಮಂತ್​
author img

By

Published : Jan 29, 2023, 9:22 AM IST

ಗುವಾಹಟಿ: ಅಸ್ಸಾಂನಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ವಿವಾಹಗಳು ವಿಪರೀತ ಹೆಚ್ಚಾಗುತ್ತಿವೆ. ಈ ಬೆಳವಣಿಗೆಯನ್ನು ತಡೆಯಲು ಅಲ್ಲಿನ ಸರ್ಕಾರ ಕಠಿಣ ನಿಯಮ ರೂಪಿಸಿದೆ. ಕಾನೂನುಬದ್ಧ 18 ವರ್ಷ ವಯಸ್ಸಿಗಿಂತ ಕಡಿಮೆ ಇರುವ ಹೆಣ್ಣುಮಕ್ಕಳನ್ನು ವಿವಾಹವಾದ ಪುರುಷರು ಜೈಲು ಸೇರೋದು ಗ್ಯಾರಂಟಿ ಎಂದು ಮುಖ್ಯಮಂತ್ರಿ ಹಿಮಂತ್​ ಬಿಸ್ವಾ ಶರ್ಮಾ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ರಾಜ್ಯದಲ್ಲಿ ಶೇ. 31ರಷ್ಟು ವಿವಾಹಗಳು ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಆಗುತ್ತಿವೆ. ಇದು ತಾಯಂದಿರು ಮತ್ತು ಶಿಶು ಮರಣಕ್ಕೆ ಕಾರಣವಾಗಿದೆ. ಹೀಗಾಗಿ 14 ವಯಸ್ಸಿನ ಹುಡುಗಿಯರೊಂದಿಗೆ ದೈಹಿಕ ಸಂಪರ್ಕ ಸಾಧಿಸುವುದು ಅಪರಾಧ. ಕಾನೂನುಬದ್ಧವಾಗಿ ವಿವಾಹವಾಗಿದ್ದರೂ ಅವರನ್ನು ಜೈಲಿಗಟ್ಟಲಾಗುವುದು" ಎಂದು ತಿಳಿಸಿದ್ದಾರೆ.

ಬಾಲ್ಯವಿವಾಹ ತಡೆಗೆ ಕಠಿಣ ಕಾನೂನು: "ರಾಜ್ಯದಲ್ಲಿ ಬಾಲ್ಯ ವಿವಾಹಗಳು ಹೆಚ್ಚಾಗಿವೆ. ಬಾಲ್ಯವಿವಾಹ ಮತ್ತು ಅಪ್ರಾಪ್ತ ವಯಸ್ಸಿನ ತಾಯ್ತನವನ್ನು ತಡೆಗಟ್ಟಲು ಸರ್ಕಾರ ಕಠಿಣ ಕಾನೂನುಗಳನ್ನು ತರುತ್ತಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಬಲಪಡಿಸಿ, ಇದರಡಿ ದಾಖಲಾದ ಪ್ರಕರಣಗಳಲ್ಲಿ ವಿವಾಹಿತ ಪುರುಷರಿಗೂ ಶಿಕ್ಷೆ ಕೊಡಿಸಲಾಗುವುದು" ಎಂದು ಸಿಎಂ ಬಿಸ್ವಾ ಶರ್ಮಾ ಹೇಳಿದರು.

ಸಾವಿರಾರು ಗಂಡಂದಿರ ಬಂಧನ: "ಮುಂದಿನ ಐದಾರು ತಿಂಗಳಲ್ಲಿ ಸಾವಿರಾರು ಗಂಡಂದಿರನ್ನು ಬಂಧಿಸಲಾಗುವುದು. 14ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದುವುದು ಅಪರಾಧ. ಅದು ಕಾನೂನುಬದ್ಧವಾಗಿ ವಿವಾಹವಾಗಿದ್ದರೂ ಸರಿ ಅಂಥವರನ್ನು ಬಂಧಿಸಲಾಗುವುದು. 18 ವರ್ಷ ಕಾನೂನುಬದ್ಧ ವಿವಾಹಕ್ಕೆ ಅನುಮತಿಸುತ್ತದೆ. ಅದಕ್ಕಿಂತಲೂ ಕಡಿಮೆ ವಯಸ್ಸಿನಲ್ಲಿ ವಿವಾಹ ಅಪರಾಧ" ಎಂದು ಹೇಳಿದರು. "ಎಲ್ಲ ಮಹಿಳೆಯರಿಗೆ ಕಾನೂನಿನ ರಕ್ಷಣೆ ನೀಡಲಾಗುವುದು. 18 ಮತ್ತು ಅದಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯರನ್ನು ವಿವಾಹವಾದಲ್ಲಿ ಅಂತಹ ಗಂಡಂದಿರಿಗೆ ಜೀವಾವಧಿ ಶಿಕ್ಷೆಯಾಗುವಂತೆ ಮಾಡಲಾಗುವುದು" ಎಂದು ತಿಳಿಸಿದರು.

22 ರಿಂದ 30 ತಾಯ್ತನದ ಸಮೃದ್ಧ ಅವಧಿ: "ಎಲ್ಲ ಮಹಿಳೆಯರು 22 ರಿಂದ 30 ವರ್ಷಗಳ ನಡುವೆ ತಾಯ್ತನದ ಸಮೃದ್ಧ ಅವಧಿಯನ್ನು ಹೊಂದಿರುತ್ತಾರೆ. ಸೂಕ್ತವಾದ ವಯಸ್ಸಿನಲ್ಲಿ ಅವರು ತಾಯಿಯಾಗುವ ಆಯ್ಕೆ ಹೊಂದಿರುತ್ತಾರೆ. ಇಲ್ಲದಿದ್ದರೆ, ಅದು ವೈದ್ಯಕೀಯ ತೊಡಕುಗಳಿಗೆ ಕಾರಣವಾಗುತ್ತದೆ. ಇದಕ್ಕಿಂತಲೂ ಅಧಿಕ ವಯಸ್ಸಿನಲ್ಲಿ ತಾಯಿಯಾಗುವುದೂ ಕೂಡ ಸಮಸ್ಯೆಯೇ" ಎಂದು ಅಸ್ಸಾಂ ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ತಾಯಿ- ಶಿಶು ಮರಣ ಹೆಚ್ಚಳ: ತಾಯಿ ಮತ್ತು ಶಿಶು ಮರಣ ಪ್ರಮಾಣದಲ್ಲಿ ಅಸ್ಸಾಂ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿ ಪ್ರತಿವರ್ಷ ಶೇ. 31 ರಷ್ಟು ಬಾಲ್ಯ ವಿವಾಹಗಳು ಸಂಭವಿಸುತ್ತವೆ. ಹೀಗಾಗಿ ಅಧಿಕ ಪ್ರಮಾಣದಲ್ಲಿ ಪ್ರಸವ ಮರಣಗಳು ದಾಖಲಾಗುತ್ತಿವೆ. ಇದರ ವಿರುದ್ಧ ಕೂಗು ಕೇಳಿ ಬಂದ ಹಿನ್ನೆಲೆಯಲ್ಲಿ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಅಸ್ಸಾಂ ಚಹಾ ಪುಡಿ ಉತ್ಪಾದನೆಗೆ ಖ್ಯಾತಿ. ಇಲ್ಲಿ ಕೆಲಸ ಮಾಡುವ ಕಾರ್ಮಿಕರಲ್ಲಿ ಬಾಲ್ಯವಿವಾಹಗಳು ಅಧಿಕ ಪ್ರಮಾಣದಲ್ಲಿ ಜರುಗುತ್ತವೆ. ಅಲ್ಲದೇ, 18 ವಯಸ್ಸಿನ ಕಡಿಮೆ ಹೆಣ್ಣು ಮಕ್ಕಳು ಗರ್ಭಧರಿಸುವುದೂ ಹೆಚ್ಚಾಗಿದೆ. ಇದು ಪ್ರಸವ ಮರಣ ಪ್ರಮಾಣವನ್ನು ಹೆಚ್ಚಿಸಿದೆ.

ಇದನ್ನು ತಡೆಯಲು ಸಿಎಂ ಹಿಮಂತ್​ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಬಾಲ್ಯ ವಿವಾಹ ತಡೆಗೆ ಸಮರ ಸಾರಿದೆ. ಕಾನೂನು ಬಲಪಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳನ್ನು ಮದುವೆಯಾಗುವ ಪುರುಷರನ್ನು ಪೋಕ್ಸೊ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ವಿಚಾರಣೆಗೆ ಒಪ್ಪಿಗೆ ನೀಡಿದೆ.

ಇದನ್ನೂ ಓದಿ: ದೇಶದಲ್ಲಿ ತಾಯಂದಿರ ಮರಣ ಪ್ರಮಾಣ ಇಳಿಮುಖ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.