ETV Bharat / bharat

ಆರ್ಯ ಸಮಾಜ ಪ್ರಮಾಣ ಪತ್ರ ವಿವಾಹದ ಪುರಾವೆಯಲ್ಲ: ಅಲಹಾಬಾದ್‌ ಹೈಕೋರ್ಟ್

ಪ್ರಕರಣವೊಂದರ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್, ಆರ್ಯ ಸಮಾಜದವರು ನೀಡುವ ವಿವಾಹ ಪ್ರಮಾಣ ಪತ್ರಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

ಆರ್ಯ ಸಮಾಜ ಪ್ರಮಾಣ ಪತ್ರ ವಿವಾಹದ ಪುರಾವೆಯಲ್ಲ: ಹೈಕೋರ್ಟ್
Arya Samaj certificate does not prove marriage: Allahabad HC
author img

By

Published : Sep 6, 2022, 11:26 AM IST

ಪ್ರಯಾಗರಾಜ್ (ಉತ್ತರ ಪ್ರದೇಶ): ವಿವಾಹ ಪ್ರಮಾಣ ಪತ್ರಗಳನ್ನು ನೀಡುತ್ತಿರುವ ಆರ್ಯ ಸಮಾಜ ಸೊಸೈಟಿಗಳ ನಡವಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಅಲಹಾಬಾದ್ ಹೈಕೋರ್ಟ್, ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅವರು ಸಾಂಪ್ರದಾಯಿಕ ನಂಬಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದೆ. ಹೇಬಿಯಸ್ ಕಾರ್ಪಸ್ ಅರ್ಜಿಯೊಂದರ ವಿಚಾರಣೆ ನಡೆಸಿದ ನ್ಯಾಯಾಲಯ, ಆರ್ಯ ಸಮಾಜ ಸಂಘಗಳು ವಿವಾಹಗಳನ್ನು ಸರಿಯಾಗಿ ನಡೆಸದೆ ವಿವಾಹ ಪ್ರಮಾಣಪತ್ರಗಳನ್ನು ನೀಡುತ್ತಿವೆ ಮತ್ತು ಈ ಪ್ರಮಾಣಪತ್ರದ ಆಧಾರದ ಮೇಲೆ ಮದುವೆಯನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿತು.

ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಂಶೇರಿ ಅವರು, ವಿವಿಧ ಆರ್ಯ ಸಮಾಜಗಳು ನೀಡಿದ ವಿವಾಹ ಪ್ರಮಾಣಪತ್ರಗಳ ಪ್ರವಾಹವೇ ನ್ಯಾಯಾಲಯಕ್ಕೆ ಹರಿದು ಬರುತ್ತಿದೆ. ಇವುಗಳ ಸತ್ಯಾಸತ್ಯತೆಯನ್ನು ಈ ನ್ಯಾಯಾಲಯದ ವಿವಿಧ ವಿಚಾರಣೆಗಳಲ್ಲಿ ಮತ್ತು ಇತರ ಹೈಕೋರ್ಟ್‌ಗಳ ವಿಚಾರಣೆಗಳ ಸಂದರ್ಭಗಳಲ್ಲಿ ಗಂಭೀರವಾಗಿ ಪ್ರಶ್ನಿಸಲಾಗಿದೆ. ಸಂಸ್ಥೆಯು ಮದುವೆಗಳನ್ನು ಆಯೋಜಿಸುವಲ್ಲಿ ದಾಖಲೆಗಳ ನೈಜತೆಯನ್ನು ಪರಿಗಣಿಸದೆ ನಂಬಿಕೆಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿದರು.

ಘಜಿಯಾಬಾದ್‌ನ ಆರ್ಯ ಸಮಾಜ ಮಂದಿರದಿಂದ ನೀಡಲಾದ ಪ್ರಮಾಣಪತ್ರವನ್ನು ಹಾಜರುಪಡಿಸಿರುವ ಭೋಲಾ ಸಿಂಗ್ ಎಂಬುವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ತಾನು ಕಾನೂನುಬದ್ಧವಾಗಿ ಅರ್ಜಿದಾರ ಸಂಖ್ಯೆ-2 ಇವರನ್ನು ಮದುವೆಯಾಗಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಮದುವೆಯನ್ನು ನೋಂದಾಯಿಸಲಾಗಿಲ್ಲ ಮತ್ತು ಎರಡೂ ಪಕ್ಷಗಳು ಸಲ್ಲಿಸಿರುವ ಮದುವೆ ಪ್ರಮಾಣಪತ್ರದ ಆಧಾರದ ಮೇಲೆ ಮದುವೆಯಾಗಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಆದರೆ, ಪ್ರಸ್ತುತ ಪ್ರಕರಣದಲ್ಲಿ, ಪ್ರಶ್ನೆಯಲ್ಲಿರುವ ವ್ಯಕ್ತಿಯು ಪ್ರೌಢಾವಸ್ಥೆಯವರಾಗಿದ್ದು, ಅವರ ಪತಿಯ ವಿರುದ್ಧ ಪತ್ನಿಯ ತಂದೆಯಿಂದ ಎಫ್​ಐಆರ್ ದಾಖಲಿಸಲಾಗಿದೆ ಮತ್ತು ಈ ವಿಷಯದಲ್ಲಿ ತನಿಖೆ ನಡೆಯುತ್ತಿದೆ. ಹೀಗಾಗಿ ಇದರಲ್ಲಿ ಅಕ್ರಮ ಬಂಧನದ ಯಾವುದೇ ಕೇಸ್ ಆಗುವುದಿಲ್ಲ ಎಂದು ಕೋರ್ಟ್ ತಿಳಿಸಿದೆ.

ಇದನ್ನೂ ಓದಿ: ಮಹಿಳೆಯರ ವಿವಾಹದ ಕಾನೂನು ಬದ್ಧ ವಯಸ್ಸು; ಕಾನೂನು ನಡೆದು ಬಂದ ಹಾದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.