ETV Bharat / bharat

ರೈತರ ಗೆಲುವು ಪ್ರಜಾಪ್ರಭುತ್ವದ ಗೆಲುವು, ನಾವು ಅವರೊಂದಿಗೆ ಇದ್ದೇವೆ : ಸಿಎಂ ಅರವಿಂದ್ ಕೇಜ್ರಿವಾಲ್ - ವಿವಾದಿತ ಕೃಷಿ ಕಾನೂನು ರದ್ದು

ರೈತರು ಕೋವಿಡ್, ಪ್ರತಿಕೂಲ ಹವಾಮಾನ ಮತ್ತು ಡೆಂಘೀ ಅಡೆತಡೆಗಳನ್ನು ಎದುರಿಸಿ ಯಶಸ್ಸು ಸಾಧಿಸಿದ್ದಾರೆ. ಇದು ಅತ್ಯಂತ ಸುದೀರ್ಘವಾದ ಅಹಿಂಸಾತ್ಮಕ ಚಳವಳಿಯಾಗಿದೆ. ಆಡಳಿತ ಪಕ್ಷವು (ಬಿಜೆಪಿ) ಹೋರಾಟವನ್ನು ನಿಲ್ಲಿಸಲು ಷಡ್ಯಂತ್ರವನ್ನು ಮಾಡಿತ್ತು..

arvind-kejriwal
ಅರವಿಂದ್ ಕೇಜ್ರಿವಾಲ್
author img

By

Published : Nov 26, 2021, 6:34 PM IST

ನವದೆಹಲಿ : ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸುವುದು, ಪ್ರತಿಭಟನೆಯ ವೇಳೆ ಮೃತಪಟ್ಟ 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ಪರಿಹಾರ ಮತ್ತು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತರಿಗಾಗಿ ದೆಹಲಿ ವಿಧಾನಸಭೆ ಶುಕ್ರವಾರ ನಿರ್ಣಯವನ್ನು ಅಂಗೀಕರಿಸಿದೆ.

ವಿವಾದಿತ ಕೃಷಿ ಕಾನೂನುಗಳನ್ನು ರದ್ದುಪಡಿಸಲು ಸದನದಲ್ಲಿ ಮಂಡಿಸಲಾದ ನಿರ್ಣಯದ ಮೇಲಿನ ಚರ್ಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಉತ್ತರಿಸಿದರು. 'ರೈತರ ಗೆಲುವು ಪ್ರಜಾಪ್ರಭುತ್ವದ ಗೆಲುವು. ಅವರ ಬಾಕಿ ಇರುವ ಬೇಡಿಕೆಗಳನ್ನು ನಾವು ಬೆಂಬಲಿಸುತ್ತೇವೆ. ನಾವು ಅವರೊಂದಿಗೆ ಇದ್ದೇವೆ' ಎಂದು ಹೇಳಿದರು.

ಸದನದೊಳಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತನಾಡಿರುವುದು..

'ಲೋಕಸಭೆಯಲ್ಲಿ ಬಹುಮತದ ದುರಹಂಕಾರದಿಂದ ರೈತ ವಿರೋಧಿ ಕಾನೂನುಗಳು ಅಂಗೀಕರಿಸಲ್ಪಟ್ಟವು. ಆದರೆ, ರೈತರು ಹೋರಾಟದಿಂದ ಯಶಸ್ಸು ಗಳಿಸಿದ್ದಾರೆ. ಅವರಿಗೆ ನಾನು ಅಭಿನಂದನೆಯನ್ನು ಸಲ್ಲಿಸುತ್ತೇನೆ.

ದೇಶವಾಸಿಗಳು, ಮಹಿಳೆಯರು, ಯುವಕರು, ವ್ಯಾಪಾರಿಗಳು ರೈತರ ಹೋರಾಟವನ್ನು ಬೆಂಬಲಿಸಿದ್ದಾರೆ. ಈ ಆಂದೋಲನದ ನೇತೃತ್ವ ವಹಿಸಿದ ಪಂಜಾಬ್‌ನ ರೈತರನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ' ಎಂದು ತಿಳಿಸಿದರು.

'ರೈತರು ಕೋವಿಡ್, ಪ್ರತಿಕೂಲ ಹವಾಮಾನ ಮತ್ತು ಡೆಂಘೀ ಅಡೆತಡೆಗಳನ್ನು ಎದುರಿಸಿ ಯಶಸ್ಸು ಸಾಧಿಸಿದ್ದಾರೆ. ಇದು ಅತ್ಯಂತ ಸುದೀರ್ಘವಾದ ಅಹಿಂಸಾತ್ಮಕ ಚಳವಳಿಯಾಗಿದೆ. ಆಡಳಿತ ಪಕ್ಷವು (ಬಿಜೆಪಿ) ಹೋರಾಟವನ್ನು ನಿಲ್ಲಿಸಲು ಷಡ್ಯಂತ್ರವನ್ನು ಮಾಡಿತ್ತು.

ಅಲ್ಲದೇ, ಹೋರಾಟನಿರತ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು, ಚೀನಾ ಮತ್ತು ಪಾಕಿಸ್ತಾನದ ಏಜೆಂಟ್‌ಗಳು ಎಂದು ಕರೆದು ಅವಮಾನಿಸಿತ್ತು.

ಹೋರಾಟದ ವೇಳೆ ಜಲ ಫಿರಂಗಿ ಬಳಸಲಾಯಿತು. ಮೊಳೆಗಳನ್ನು ಬಳಸಲಾಯಿತು. ಆದರೆ, ಅವರು ಎಲ್ಲವನ್ನೂ ಜಯಿಸಿದ್ದಾರೆ. ಈ ಆಂದೋಲನವು ಪ್ರಜಾಪ್ರಭುತ್ವದಲ್ಲಿನ ಜನರ ವಿಶ್ವಾಸವನ್ನು ಹೆಚ್ಚಿಸಿದೆ' ಎಂದು ಅವರು ಹೇಳಿದ್ದಾರೆ.

ಲಖೀಂಪುರ ಖೇರಿ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಎಂದು ನಿರ್ಣಯವು ಒತ್ತಾಯಿಸಿದೆ.

'ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಕೂಡಲೇ ವಜಾಗೊಳಿಸಬೇಕು. ಅವರನ್ನು ವಜಾಗೊಳಿಸದಿರಲು ಕಾರಣ ಏನೆಂಬುದು ನನಗೆ ಅರ್ಥವಾಗುತ್ತಿಲ್ಲ. ಅಲ್ಲದೇ, ರೈತರ ಮೇಲಿನ ಪ್ರಕರಣಗಳನ್ನು ಹಿಂಪಡೆಯಬೇಕು' ಎಂದು ಕೇಜ್ರಿವಾಲ್​ ಒತ್ತಾಯಿಸಿದರು.

ಕಳೆದ ಒಂದು ವರ್ಷದಿಂದ ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಸುದೀರ್ಘ ಹೋರಾಟ ನಡೆಸಿದ್ದರು. ಒಂದು ವರ್ಗದ ರೈತರ ಮನವೊಲಿಕೆ ಸಾಧ್ಯವಾಗಲಿಲ್ಲ ಎಂದಿರುವ ಪ್ರಧಾನಿ ಮೋದಿ ಅವರು, ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು.

ಈ ಬಗ್ಗೆ ನವೆಂಬರ್ 19ರಂದು ಮಾತನಾಡಿದ್ದ ಅವರು, 'ಇಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ, ನಾವು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ.

ಈ ತಿಂಗಳ ಅಂತ್ಯದಲ್ಲಿ ಪ್ರಾರಂಭವಾಗುವ ಸಂಸತ್ತಿನ ಅಧಿವೇಶನದಲ್ಲಿ ಕೃಷಿ ಕಾನೂನುಗಳನ್ನ ಹಿಂಪಡೆಯುವ ಪ್ರಕ್ರಿಯೆಯನ್ನ ಪೂರ್ಣಗೊಳಿಸುತ್ತೇವೆ. ಹೋರಾಟ ಮಾಡುತ್ತಿರುವ ಎಲ್ಲ ರೈತರು ತಮ್ಮ ತಮ್ಮ ಮನೆಗಳಿಗೆ ಹಿಂದಿರುಗಿ ಹೊಸ ಜೀವನ ಆರಂಭಿಸಲು ಒತ್ತಾಯಿಸುತ್ತೇನೆ' ಎಂದು ಮನವಿ ಮಾಡಿಕೊಂಡಿದ್ದರು.

ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ಚಳಿಗಾಲದ ಸಂಸತ್ತಿನ ಅಧಿವೇಶನದಲ್ಲಿ ಅಧಿಕೃತವಾಗಿ ಹಿಂಪಡೆದ ನಂತರವೇ ನಾವು ಪ್ರತಿಭಟನೆಯನ್ನು ಕೈಬಿಡುತ್ತೇವೆ ಎಂದು ಭಾರತೀಯ ಕಿಸಾನ್ ಒಕ್ಕೂಟದ ನಾಯಕ ರಾಕೇಶ್ ಟಿಕಾಯತ್​ ಹೇಳಿದ್ದರು.

ಓದಿ: Farm Laws repealed: ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ: ಮೂರೂ ಕೃಷಿ ಕಾನೂನುಗಳು ರದ್ದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.