ETV Bharat / bharat

ಪಂಜಾಬ್​ ಅಧಿಕಾರಿಗಳೊಂದಿಗೆ ದೆಹಲಿ ಸಿಎಂ ಸಭೆ; ವಿವಾದಕ್ಕೆ ಕಾರಣವಾದ ಕೇಜ್ರಿವಾಲ್​ ನಡೆ

ಪಂಜಾಬ್​ ಮುಖ್ಯಮಂತ್ರಿ ಭಗವಂತ್ ಮಾನ್​​ ಅನುಪಸ್ಥಿತಿಯಲ್ಲಿ ಅಲ್ಲಿನ ಅಧಿಕಾರಿಗಳೊಂದಿಗೆ ಆಮ್​​ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಸಭೆ ನಡೆಸಿದ್ದು, ಇದು ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ARVIND KEJRIWAL MEETS PUNJAB OFFICERS
ARVIND KEJRIWAL MEETS PUNJAB OFFICERS
author img

By

Published : Apr 12, 2022, 9:25 PM IST

ಚಂಡೀಗಢ(ಪಂಜಾಬ್​): ಪಂಜಾಬ್​​ನ ವಿದ್ಯುತ್​ ಇಲಾಖೆ ಅಧಿಕಾರಿಗಳೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಸಭೆ ನಡೆಸಿದ್ದು, ಇದಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್​​ ಗೈರು ಹಾಜರಾಗಿರುವುದು ಅನೇಕ ವಿವಾದಕ್ಕೆ ಕಾರಣವಾಗಿದೆ. ಎಎಪಿ ಮುಖ್ಯಸ್ಥರ ನಡೆ ವಿರುದ್ಧ ಪಂಜಾಬ್​, ದೆಹಲಿ ಕಾಂಗ್ರೆಸ್​​ ಸೇರಿದಂತೆ ಅನೇಕ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಪಂಜಾಬ್​​ ಸರ್ಕಾರ ಎಎಪಿ ಪಕ್ಷದ ಮುಖ್ಯಸ್ಥರ ರಿಮೋಟ್ ಕಂಟ್ರೋಲ್​​ ಆಗಿದೆ ಎಂದು ವಿರೋಧ ಪಕ್ಷ ಕಾಂಗ್ರೆಸ್​ ವಾಗ್ದಾಳಿ ನಡೆಸಿದೆ.

ಪಂಜಾಬ್​ ವಿಧಾನಸಭೆ ಚುನಾವಣೆ ವೇಳೆ ಆಮ್​ ಆದ್ಮಿ ಪಕ್ಷ ಅನೇಕ ರೀತಿಯ ಭರವಸೆ ನೀಡಿದ್ದು, ಅಲ್ಲಿನ ಜನರಿಗೆ ಉಚಿತವಾಗಿ ವಿದ್ಯುತ್​ ನೀಡುವುದಾಗಿ ಘೋಷಣೆ ಮಾಡಿದ್ದರು. ಈ ವಿಚಾರವಾಗಿ ಪಂಜಾಬ್ ರಾಜ್ಯ ವಿದ್ಯುತ್​ ನಿಗಮ ನಿಯಮಿತದ ಉನ್ನತ ಅಧಿಕಾರಿಗಳನ್ನ ಭೇಟಿ ಮಾಡಿದ ಕೇಜ್ರಿವಾಲ್​​ ಅವರೊಂದಿಗೆ ಸಭೆ ನಡೆಸಿದರು.

ಇದನ್ನೂ ಓದಿ: ಪಿಂಚಣಿಗಾಗಿ 56 ವರ್ಷ ಹೋರಾಡಿ ಕೊನೆಗೂ ಗೆದ್ದ ಹುತಾತ್ಮ ಯೋಧನ ಪತ್ನಿ!

ಪಂಜಾಬ್​ನಲ್ಲಿ ಆಮ್​ ಆದ್ಮಿ ಸರ್ಕಾರ ರಚನೆಯಾಗಿ ಕೆಲ ದಿನಗಳಲ್ಲಿ ಪಂಜಾಬ್ ಮೇಲೆ ಅರವಿಂದ್ ಕೇಜ್ರಿವಾಲ್ ಹಿಡಿತ ಸಾಧಿಸಿದ್ದು, ಇದರ ವಿರುದ್ಧ ಪಂಜಾಬ್​ ಕಾಂಗ್ರೆಸ್​ ​ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಕೂಡ ವಾಗ್ದಾಳಿ ನಡೆಸಿದ್ದಾರೆ. ಭಗವಂತ್ ಮಾನ್​ ಗೈರಿನಲ್ಲಿ ಅರವಿಂದ್ ಕೇಜ್ರಿವಾಲ್​ ಸಭೆ ನಡೆಸಿದ್ದು, ಪಂಜಾಬ್​​ ರಿಮೋಟ್ ಕಂಟ್ರೋಲ್ ದೆಹಲಿಯಲ್ಲಿರುವುದನ್ನ ಬಹಿರಂಗಪಡಿಸಿದೆ.ಇದು ಪಂಜಾಬ್​ಗೆ ಮಾಡಿರುವ ಅವಮಾನ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ತಕ್ಷಣವೇ ಸ್ಪಷ್ಟೀಕರಣ ನೀಡಬೇಕು ಎಂದಿದ್ದಾರೆ.

  • चलने दो आंधियाँ हकीकत की, न जाने कौन से झोंके से बहरूपियों के मुखौटे उड़ जाएं
    Punjabs IAS officers summoned by @ArvindKejriwal in CM @BhagwantMann’s absence. This exposes the Defacto CM & Delhi remote control. Clear breach of federalism, insult to Punjabi pride. Both must clarify

    — Navjot Singh Sidhu (@sherryontopp) April 12, 2022 " class="align-text-top noRightClick twitterSection" data=" ">

ಮಾಜಿ ಸಿಎಂ ಕ್ಯಾಪ್ಟನ್​ ಅಮರೀಂದರ್ ಸಿಂಗ್ ಕೂಡ ವಾಗ್ದಾಳಿ ನಡೆಸಿದ್ದು, ನಾವು ನಿರೀಕ್ಷೆ ಮಾಡಿರುವುದಕ್ಕಿಂತಲೂ ಮಿಂಚಿತವಾಗಿ ಪಂಜಾಬ್​ ಮೇಲೆ ಅರವಿಂದ್ ಕೇಜ್ರಿವಾಲ್​ ನಿಯಂತ್ರಣ ತೆಗೆದುಕೊಂಡಿದ್ದಾರೆ. ಭಗವಂತ್ ಮಾನ್ ಕೇವಲ ರಬ್ಬರ್​​ ಸ್ಟಾಂಪ್​ ಎನ್ನುವುದು ಸಾಬೀತುಗೊಂಡಿದೆ ಎಂದಿದ್ದಾರೆ.

  • Worst was feared, worst happened. @ArvindKejriwal has taken over Punjab much before it was expected to happen. That @BhagwantMann is a rubber stamp was a foregone conclusion already, now Kejriwal has proved it right by chairing Punjab officers' meeting in Delhi.

    — Capt.Amarinder Singh (@capt_amarinder) April 12, 2022 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.