ETV Bharat / bharat

ಅಮರನಾಥ ಯಾತ್ರೆಗಾಗಿ 2,500 ಮೊಬೈಲ್ ಶೌಚಾಲಯಗಳ ವ್ಯವಸ್ಥೆ - etv bharat kannada

ಅಮರನಾಥ ಯಾತ್ರೆಗಾಗಿ ಬರುವ ಯಾತ್ರಾರ್ಥಿಗಳಿಗಾಗಿ 2,500 ಕ್ಕೂ ಹೆಚ್ಚು ಸಂಚಾರಿ ಶೌಚಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

arrangement-of-2500-mobile-toilets-for-amarnath-yatra
ಅಮರನಾಥ ಯಾತ್ರೆಗಾಗಿ 2,500 ಮೊಬೈಲ್ ಶೌಚಾಲಯಗಳ ವ್ಯವಸ್ಥೆ
author img

By

Published : May 12, 2023, 7:38 PM IST

ಜಮ್ಮು ಮತ್ತು ಕಾಶ್ಮೀರ: ಜುಲೈ 1ರಿಂದ ಆರಂಭಗೊಂಡು ಆಗಸ್ಟ್​ 31 ರಂದು ಮುಕ್ತಾಯಗೊಳ್ಳಲಿರುವ ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳೆಲ್ಲ ಕಾತರದಿಂದ ಕಾಯುತ್ತಿದ್ದು, ಯಾತ್ರೆಗೆ ಸಕಲ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ. ಅಮರನಾಥ ಯಾತ್ರೆಗಾಗಿ ಬರುವ ಯಾತ್ರಾರ್ಥಿಗಳ ಅನುಕೂಲಕ್ಕೆ 2,500 ಕ್ಕೂ ಹೆಚ್ಚು ಮೊಬೈಲ್ ಶೌಚಾಲಯಗಳನ್ನು ಸ್ಥಾಪಿಸಲಾಗುವುದು ಮತ್ತು ಹಿಮಾಲಯದಲ್ಲಿ 3,880 ಮೀಟರ್ ಎತ್ತರದಲ್ಲಿರುವ ಗುಹಾ ದೇಗುಲವನ್ನು ತಲುಪಲು ಇವರು ಎರಡು ಮಾರ್ಗಗಳಲ್ಲಿ ಹೆಚ್ಚಿನಸಂಖ್ಯೆಯಲ್ಲಿ ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಜುಲೈ 1 ರಂದು ಪ್ರಾರಂಭವಾಗಲಿರುವ 62 ದಿನಗಳ ಯಾತ್ರೆಗೆ ಈ ಬಾರಿ ಹೆಚ್ಚಿಸ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಆಗಮಿಸಲಿದ್ದಾರೆ. ಒಟ್ಟು 1,500 ಸಿಬ್ಬಂದಿ ಕಥುವಾ ಜಿಲ್ಲೆಯ ಲಖನ್‌ಪುರದಿಂದ ದೇಗುಲದ ವರೆಗಿನ ಶೌಚಾಲಯಗಳನ್ನು ನಿರ್ವಹಿಸಲಿದ್ದಾರೆ. ಬಾಲ್ಟಾಲ್ ಅಕ್ಷದಲ್ಲಿ 940 ಕ್ಕೂ ಹೆಚ್ಚು ಶೌಚಾಲಯಗಳನ್ನು ಮತ್ತು ಪಹ್ಲಾಗಮ್ ಅಕ್ಷದಲ್ಲಿ 1,345 ಶೌಚಾಲಯಗಳನ್ನು ಸ್ಥಾಪಿಸಲಾಗುವುದು" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನು ಓದಿ: ಸೀಟ್ ಬೆಲ್ಟ್ ಅಲಾರ್ಮ್ ಸ್ಟಾಪರ್ ಮಾರಾಟ ನಿಲ್ಲಿಸುವಂತೆ ಇ -ಕಾಮರ್ಸ್​ ಪ್ಲಾಟ್​ಫಾರ್ಮ್​ಗಳಿಗೆ ಆದೇಶ

ಶೌಚಾಲಯಗಳ ನಿರ್ವಹಣೆಗಾಗಿ 1,370 ಸಿಬ್ಬಂದಿ ನಿಯೋಜನೆ: ಈ ಶೌಚಾಲಯಗಳ ನಿರ್ವಹಣೆಗಾಗಿ ನೈರ್ಮಲ್ಯ ಕಾರ್ಯಕರ್ತರು ಮತ್ತು ಮೇಲ್ವಿಚಾರಕರು ಸೇರಿದಂತೆ 1,370 ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಮತ್ತು ಯಾತ್ರಿ ನಿವಾಸದಲ್ಲಿ ಮತ್ತು ಜಮ್ಮು ನಗರದ ಇತರ ಸ್ಥಳಗಳಲ್ಲಿ ಹೆಚ್ಚುವರಿಯಾಗಿ 120 ಶೌಚಾಲಯಗಳನ್ನು ಸ್ಥಾಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶ ದ್ವಾರವಾಗಿರುವ ಲಖನ್‌ಪುರದಲ್ಲಿ ಈ ಬಾರಿ ಹೆಚ್ಚಿನ ಶೌಚಾಲಯಗಳನ್ನು ನಿರ್ಮಿಸಲಾಗುವುದು ಮತ್ತು ಸಂಚಾರಿ ಶೌಚಾಲಯಗಳ ಸ್ಥಾಪನೆಗೆ ಟೆಂಡರ್‌ ಕರೆಯಲಾಗಿದೆ. ಕಥುವಾ, ಸಾಂಬಾ, ಜಮ್ಮು, ಉಧಮ್‌ಪುರ್, ರಾಂಬನ್, ಅನಂತ್‌ನಾಗ್, ಶ್ರೀನಗರ ಮತ್ತು ಗಂದರ್‌ಬಾಲ್ ಜಿಲ್ಲೆಗಳ ಡೆಪ್ಯೂಟಿ ಕಮಿಷನರ್‌ಗಳಿಗೆ ಶೌಚಾಲಯಗಳ ಅಗತ್ಯತೆ ವಿವರಗಳನ್ನು ನೀಡಲು ಕೇಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಆನೆ ಕಾಲಿಗೆ ಬಿದ್ದ ವ್ಯಕ್ತಿ: 10 ಸಾವಿರ ದಂಡ ವಿಧಿಸಿದ ಅರಣ್ಯ ಇಲಾಖೆ - ವಿಡಿಯೋ ವೈರಲ್​

ಯಾತ್ರೆಯ ವೇಳೆ ನೀರಿನ ಕೊರತೆಯಾಗದಂತೆ ಶೌಚಾಲಯಗಳ ಅಳವಡಿಕೆ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಎಂಜಿನಿಯರ್ ಗಳು ಸಹ ಭಾಗಿಯಾಗಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ಪ್ರತಿಕೂಲ ಹವಾಮಾನ ಅಥವಾ ಇತರ ಯಾವುದೇ ತುರ್ತು ಸಂದರ್ಭದಲ್ಲಿ ಕಥುವಾ ಜಿಲ್ಲೆಯಲ್ಲಿ 7,500 ಯಾತ್ರಿಕರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಸ್ಥಳಗಳಲ್ಲಿ ಕೌಂಟರ್‌ಗಳ ಸಂಖ್ಯೆ ಹೆಚ್ಚಳ: ನೋಂದಾಯಿತ ಯಾತ್ರಾರ್ಥಿಗಳಿಗೆ RFID ಟ್ಯಾಗ್‌ಗಳನ್ನು ಸುಗಮವಾಗಿ ವಿತರಿಸಲು ವಿವಿಧ ಸ್ಥಳಗಳಲ್ಲಿ ಕೌಂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಪ್ಲಾಸ್ಟಿಕ್ ತ್ಯಾಜ್ಯ ಸೇರಿದಂತೆ ಜೈವಿಕ ವಿಘಟನೀಯ ಮತ್ತು ಕೊಳೆಯದ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ:ಬಂಗಾಳಕೊಲ್ಲಿಯಲ್ಲಿ ತೀವ್ರಗೊಂಡ ಮೋಚಾ ಚಂಡಮಾರುತ, ವಿಪತ್ತು ಎದುರಿಸಲು ಎನ್‌ಡಿಆರ್‌ಎಫ್ ತಂಡ ಸಜ್ಜು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.