ETV Bharat / bharat

ಉತ್ತರಕಾಶಿಯಲ್ಲಿ 400 ಎಕರೆ ಅರಣ್ಯ ಭೂಮಿ ಸ್ವಾಧೀನಕ್ಕೆ ಮುಂದಾದ ಸೇನೆ: ಪಂಚಾಯತ್ ಆಕ್ಷೇಪ

author img

By

Published : Dec 1, 2022, 3:57 PM IST

ಹರ್ಶಿಲ್​​ನಲ್ಲಿ ಸೇನಾ ಬೆಟಾಲಿಯನ್ ಬೀಡುಬಿಟ್ಟಿದ್ದು, ತಾತ್ಕಾಲಿಕ ಶಿಬಿರ ಸ್ಥಾಪಿಸಿ ಸೇನಾ ಸಮರಾಭ್ಯಾಸ ನಡೆಸಲು ಸಂಕಷ್ಟ ಎದುರಿಸುತ್ತಿದೆ. ಹರ್ಷಿಲ್ ನಲ್ಲಿ ಅರಣ್ಯ ಭೂಮಿ ಹಸ್ತಾಂತರಕ್ಕೆ ಸೇನೆಯು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ವಿವಿಧ ಸ್ಥಳಗಳಲ್ಲಿ ಒಟ್ಟು 476.75 ಎಕರೆ ಅರಣ್ಯ ಭೂಮಿಯನ್ನು ಸೇನೆಗೆ ಹಸ್ತಾಂತರಿಸಲಾಗುವುದು ಎಂದು ಅರಣ್ಯಾಧಿಕಾರಿ ಗಂಗೋತ್ರಿ ರೇಂಜ್ ರಾಹುಲ್ ಪನ್ವಾರ್ ತಿಳಿಸಿದ್ದಾರೆ.

ಭಾರತೀಯ ಸೇನೆ
ಭಾರತೀಯ ಸೇನೆ

ಉತ್ತರಕಾಶಿ (ಉತ್ತರಾಖಂಡ್​): ಉತ್ತರಕಾಶಿ ಜಿಲ್ಲೆಯ ಹರ್ಷಿಲ್ ಪ್ರದೇಶದಲ್ಲಿ ಸೇನಾ ಸಮರಾಭ್ಯಾಸ ನಡೆಸಲು ಭಾರತೀಯ ಸೇನೆ 476.75 ಎಕರೆ ಸ್ವಾಧೀನಪಡಿಸಿಕೊಳ್ಳಲು ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರದೇಶವು ಭಾರತ-ಚೀನಾ ಗಡಿಯಲ್ಲಿ ನೆಲೆಗೊಂಡಿರುವುದರಿಂದ ಅಭಿವೃದ್ಧಿಯು ಕಾರ್ಯತಂತ್ರದ ಮಹತ್ವದ್ದಾಗಿದೆ. ಮುಂದಿನ ನಾಲ್ಕೈದು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿರುವ ಕಾಯ್ದಿರಿಸಿದ ಅರಣ್ಯ ಭೂಮಿ ಹಸ್ತಾಂತರಕ್ಕೆ ಸೇನೆಯು ಅರಣ್ಯ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

ಒಂದೇ ಒಂದು ಮರವನ್ನು ಕಡಿಯುವುದಿಲ್ಲ: ಡಿಎಫ್‌ಒ ಪುನೀತ್ ತೋಮರ್ ಪ್ರಕಾರ, ಮಾರ್ಚ್-ಏಪ್ರಿಲ್ 2023 ರೊಳಗೆ ಹಸ್ತಾಂತರ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅರಣ್ಯದ ಮರಗಳ ಸಮೀಕ್ಷೆಯನ್ನು ನಡೆಸಲಾಗುತ್ತಿದೆ ಮತ್ತು ಅರಣ್ಯ ಭೂಮಿಯಲ್ಲಿ ಒಂದೇ ಒಂದು ಮರವನ್ನು ಕಡಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಅರಣ್ಯ ಭೂಮಿ ಹಸ್ತಾಂತರಿಸಲು ಹರ್ಶಿಲ್ ವಾನ್ ಪಂಚಾಯತ್ ಆಕ್ಷೇಪಣೆ ಎತ್ತಿದೆ.

ಗ್ರಾಮಸ್ಥರ ಹಕ್ಕುಗಳ ಮೇಲೆ ಪರಿಣಾಮ : ವ್ಯಾನ್ ಪಂಚಾಯತ್ ಅಧ್ಯಕ್ಷ ಮಾಧವೇಂದ್ರ ರಾವತ್ ಮಾತನಾಡಿ, ಸೇನೆಯೂ ಭೂಮಿ ಸ್ವಾಧೀನದ ಬಗ್ಗೆ ವ್ಯಾನ್ ಪಂಚಾಯತ್​ಗೆ ಮಾಹಿತಿ ನೀಡಿಲ್ಲ. ಎನ್​ಒಸಿಯನ್ನೂ ತೆಗೆದುಕೊಂಡಿಲ್ಲ. ವ್ಯಾನ್ ಪಂಚಾಯತ್ ಹರ್ಷಿಲ್‌ನಲ್ಲಿ 124 ಹೆಕ್ಟೇರ್ ಭೂಮಿಯನ್ನು ನೋಡಿಕೊಳ್ಳುತ್ತದೆ. ಸ್ಥಳೀಯ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಅರಣ್ಯ ಭೂಮಿ ಹಸ್ತಾಂತರ ಮಾಡುವುದರಿಂದ ಜಾನುವಾರುಗಳಿಗೆ ಉರುವಲು ಮತ್ತು ಮೇವಿನ ಪೂರೈಕೆಯನ್ನು ನಿರ್ಬಂಧಿಸುವ ಮೂಲಕ ಗ್ರಾಮಸ್ಥರ ಹಕ್ಕುಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ಓದಿ: ರಾಣೆಬೆನ್ನೂರು: ಅನಧಿಕೃತವಾಗಿ ಒತ್ತುವರಿ ಮಾಡಿದ ಅರಣ್ಯ ಇಲಾಖೆ ಜಾಗ ತೆರವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.