ETV Bharat / bharat

ಜಮ್ಮುವಿನ ಅರ್ನಿಯಾ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ: 11 ಜನರ ಬಂಧನ - ETV Bharath Kannada news

ಸೇನಾ ಕ್ಷೇತ್ರಗಳ ಛಾಯಚಿತ್ರ ತೆಗೆಯುತ್ತಿದ್ದ ಮತ್ತು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ 11 ಜನರನ್ನು ಜಮ್ಮು ಪೊಲೀಸರು ಬಂಧಿಸಿದ್ದಾರೆ.

Army detain 11 for suspicious activities
ಜಮ್ಮುವಿನ ಅರ್ನಿಯಾ ಪ್ರದೇಶದಲ್ಲಿ ಅನುಮಾನಾಸ್ಪದ ಚಟುವಟಿಕೆ
author img

By

Published : Jan 28, 2023, 8:44 PM IST

ಜಮ್ಮು: ನಗರದ ಹೊರವಲಯದಲ್ಲಿರುವ ಅರ್ನಿಯಾ ಪ್ರದೇಶದಲ್ಲಿ ಸೇನೆಗೆ ಸಂಬಂಧಿಸಿದ ಜಾಗಗಳ ಫೋಟೋಗಳನ್ನು ತೆಗೆಯುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ. 11 ಅನುಮಾನಾಸ್ಪದವಾಗಿ ನಡೆದು ಕೊಂಡಿರುವುದು ಕಂಡು ಬಂದ ಹಿನ್ನೆಲೆ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸ್​ ಮೂಲಗಳು ದೃಢ ಪಡಿಸಿರುವಂತೆ, ಸೇನೆ (ಟೆರಿಟೋರಿಯಲ್ ಆರ್ಮಿ) ಪಡೆಗಳು ಶುಕ್ರವಾರ ಜಮ್ಮು ಜಿಲ್ಲೆಯ ಅರ್ನಿಯಾ ಬೆಲ್ಟ್‌ನ ಗಡಿಯಿಂದ 11 ವ್ಯಕ್ತಿಗಳನ್ನು ತಮ್ಮ ಅನುಮಾನಾಸ್ಪದ ಚಟುವಟಿಕೆಗಳಿಗಾಗಿ ಬಂಧಿಸಿದ್ದು, ಅವರು ಪ್ರದೇಶದಲ್ಲಿನ ಕೆಲವು ಪ್ರಮುಖ ಸೇನಾ ಕ್ಷೇತ್ರದ ಚಿತ್ರಗಳನ್ನು ಕ್ಲಿಕ್ಕಿಸುತ್ತಿದ್ದರು" ಎಂದು ತಿಳಿಸಿದೆ. ಆದರೆ ಬಂಧಿತರ ಹೆಚ್ಚಿನ ವಿವರವನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.

"ಬಂಧಿತರ ಮೊಬೈಲ್ ಫೋನ್‌ಗಳಲ್ಲಿ ಪಾಕಿಸ್ತಾನದ ಕೆಲವು ಸಂಪರ್ಕ ಸಂಖ್ಯೆಗಲು ಸಿಕ್ಕಿವೆ. ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಎಲ್ಲರನ್ನೂ ವಿಚಾರಣೆಗಾಗಿ ಸೇನಾ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಐವರು ಕಾರ್ಮಿಕರು ಮತ್ತು ಉಳಿದ ಆರು ಮಂದಿ ಪೂಂಚ್ ಜಿಲ್ಲೆಗಳ ವಿವಿಧ ಪ್ರದೇಶಗಳಿಗೆ ಸೇರಿದವರು" ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು,"ಕಳೆದ ವರ್ಷ 180 ಉಗ್ರರನ್ನು ತಟಸ್ಥಗೊಳಿಸಲಾಗಿದೆ. ನಾಗರಿಕ ಹತ್ಯೆಗಳಲ್ಲಿ ಶೇಕಡಾ 55 ರಷ್ಟು ಮತ್ತು ಭದ್ರತಾ ಪಡೆಗಳ ಹುತಾತ್ಮತೆಯಲ್ಲಿ ಶೇಕಡಾ 58 ರಷ್ಟು ಇಳಿಕೆಯಾಗಿದೆ. ಭದ್ರತಾ ಗ್ರಿಡ್ ಅನ್ನು ಬಲಪಡಿಸಲಾಗಿದೆ. ಭಯೋತ್ಪಾದನೆಯನ್ನು ಬೆಂಬಲಿಸುವ ಮತ್ತು ಹಣಕಾಸು ಒದಗಿಸುವ ಮೇಲೆ ನೇರ ದಾಳಿಯ ಮೂಲಕ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಲಾಗಿದೆ" ಎಂದು ಗುರುವಾರ ಹೇಳಿದ್ದಾರೆ.

ಬುಧವಾರ, ಭದ್ರತಾ ಪಡೆಗಳು ಪೂಂಚ್‌ನಲ್ಲಿ ಎರಡು ಅಡಗುತಾಣಗಳನ್ನು ಭೇದಿಸಿದ್ದು, ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆಯಲ್ಲಿ ಎರಡು ಎಕೆ ರೈಫಲ್‌ಗಳು ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೇನಾ ಪಡೆಗಳಿಂದ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಮತ್ತು ಕಲೈ ಟಾಪ್, ಶೀಂದ್ರಾ, ರಟ್ಟಾ ಜಬ್ಬಾರ್ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿ ಪೋಲಿಸ್ ಮತ್ತು ಸಿಆರ್‌ಪಿಎಫ್‌ ಕಾರ್ಯಾಚರಣೆ ಮಾಡದೆ. ರಟ್ಟಾದ ಅರಣ್ಯದಲ್ಲಿ ಒಂದು ಅಡಗುತಾಣ ಹಾಗೂ ಧೋಬಾ ಅರಣ್ಯದಲ್ಲಿ ಮತ್ತೊಂದು ಅಡಗುತಾಣವನ್ನು ಭೇದಿಸಲಾಗಿದೆ. ಶೋಧ ಕಾರ್ಯಾಚರಣೆಯಲ್ಲಿ ಎರಡು ಎಕೆ ರೈಫಲ್‌ಗಳು, ಮೂರು ಮ್ಯಾಗಜೀನ್‌ಗಳು ಮತ್ತು 35 ಸುತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಯೋತ್ಪಾದಕರ ಹತ್ಯೆ: ಜನವರಿ 17ರಂದು ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್​ ಜಿಲ್ಲೆಯಲ್ಲಿಂದು ನಡೆದ ಎನ್​ಕೌಂಟರ್​ನಲ್ಲಿ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಭಯೋತ್ಪಾದಕರನ್ನು ಸೇನೆ ಹೊಡೆದುರುಳಿಸಿದೆ. ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆ ಮಾಡಿ ಬುದ್ಗಾಮ್‌ನ ನ್ಯಾಯಾಲಯದ ಸಂಕೀರ್ಣದ ಬಳಿ ಅನುಮಾನಾಸ್ಪದ ವಾಹನವನ್ನು ತಡೆಯಲು ಪ್ರಯತ್ನಿಸಿದಾಗ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡು ಹಾರಿಸಿದ್ದಾರೆ.

ಈ ವೇಳೆ ಪ್ರತೀಕಾರದ ಗುಂಡಿನ ದಾಳಿಯನ್ನು ಸೇನೆ ನಡೆಸಿ ಇಬ್ಬರು ಉಗ್ರರನ್ನು ಕೊಂದು ಹಾಕಿದೆ. ಅವರಲ್ಲಿದ್ದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಭಯೋತ್ಪಾದಕರನ್ನು ಪುಲ್ವಾಮಾದ ಅರ್ಬಾಜ್ ಮೀರ್ ಮತ್ತು ಶಾಹಿದ್ ಶೇಖ್ ಎಂದು ಗುರುತಿಸಲಾಗಿದೆ. ಇವರಿಬ್ಬರು ನಿಷೇಧಿತ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಎಡಿಜಿಪಿ ಮಾಹಿತಿ ನೀಡಿದರು.

ಇದನ್ನೂ ಓದಿ: ಬುದ್ಗಾಮ್​ ಎನ್​ಕೌಂಟರ್​: ಇಬ್ಬರು ಉಗ್ರರ ಹತ್ಯೆಗೈದ ಭಾರತೀಯ ಸೇನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.