ETV Bharat / bharat

Army chopper crash case: ಗಾಯಗೊಂಡಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ವಿಧಿವಶ - ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ವಿಧಿವಶ

Group Captain Varun Singh passes away: ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ.

Group Captain Varun Singh passes away
ಸೇನಾ ಹೆಲಿಕಾಪ್ಟರ್‌ ದುರಂತ ಪ್ರಕರಣ; ಬೆಂಗಳೂರಿನಲ್ಲಿ ಗ್ರೂಪ್‌ ಕ್ಯಾಪ್ಟನ್‌ ವರಣ್‌ ಸಿಂಗ್‌ ವಿಧಿವಶ
author img

By

Published : Dec 15, 2021, 12:55 PM IST

Updated : Dec 15, 2021, 5:42 PM IST

ಬೆಂಗಳೂರು: ದೇಶದ ಜನರ ಪ್ರಾರ್ಥನೆ ಫಲಿಸಿಲ್ಲ. ಇತ್ತೀಚೆಗೆ ತಮಿಳುನಾಡಿನಲ್ಲಿ ಸೇನಾ ಸಂಭವಿಸಿದ್ದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಗಾಯಗೊಂಡಿದ್ದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರು ಚಿಕಿತ್ಸೆ ಫಲಿಸದೇ ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ನಿಧನದ ಬಗ್ಗೆ ಟ್ವೀಟ್‌ ಮಾಡಿರುವ ಭಾರತೀಯ ವಾಯುಸೇನೆ, ಇದು ಅತ್ಯಂತ ದುಃಖಕರ ಘಟನೆ ಎಂದು ಕಂಬನಿ ಮಿಡಿದಿದೆ.

  • IAF is deeply saddened to inform the passing away of braveheart Group Captain Varun Singh, who succumbed this morning to the injuries sustained in the helicopter accident on 08 Dec 21. IAF offers sincere condolences and stands firmly with the bereaved family.

    — Indian Air Force (@IAF_MCC) December 15, 2021 " class="align-text-top noRightClick twitterSection" data=" ">

ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್‌, ಅವರ ಪತ್ನಿ ಮಧುಲಿಕಾ ರಾವತ್‌ ಹಾಗೂ ಸಿಬ್ಬಂದಿ ಸೇರಿ 14 ಮಂದಿ ಇದ್ದ ಹೆಲಿಕಾಪ್ಟರ್‌ ತಮಿಳುನಾಡಿನ ಕುನೂರು ಬಳಿ ಇದೇ ಡಿಸೆಂಬರ್​ 8 ರಂದು ಪತನವಾಗಿತ್ತು. ದುರಂತದಲ್ಲಿ 12 ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಸಿಡಿಎಸ್‌ ಬಿಪಿನ್‌ ರಾವತ್‌ ಹಾಗೂ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ತೀವ್ರವಾಗಿ ಗಾಯಗೊಂಡಿದ್ದರು. ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಬಿಪಿನ್‌ ರಾವತ್‌ ವೆಲ್ಲಿಂಗ್ಟನ್‌ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲಿಂಗ್ಟನ್‌ ಆಸ್ಪತ್ರೆಯಿಂದ ಬೆಂಗಳೂರಿನ ಕಮಾಂಡ್‌ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ವಾರದ ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಇಂದು ಮೃತಪಟ್ಟಿದ್ದಾರೆ.

ವರುಣ್‌ ಸಿಂಗ್‌ ಪಾರ್ಥಿವ ಶರೀರವನ್ನು ನಾಳೆ ಅವರ ಊರಿಗೆ ತೆಗೆದುಕೊಂಡುಹೋಗಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ: ತಮಿಳುನಾಡಿನ ಊಟಿ ಬಳಿ ಭೀಕರ ದುರಂತ; ಸಿಡಿಎಸ್‌ ಬಿಪಿನ್ ರಾವತ್‌ ಸೇರಿ ಹಲವರಿದ್ದ ಹೆಲಿಕಾಪ್ಟರ್‌ ಪತನ

ಇದನ್ನೂ ಓದಿ: Exclusive Interview : ಸೇನಾ ಹೆಲಿಕಾಪ್ಟರ್ ಪತನಕ್ಕೂ ಮುಂಚಿನ ಕೊನೆಯ ದೃಶ್ಯ ಸೆರೆ ಹಿಡಿದ ವ್ಯಕ್ತಿ ಹೇಳಿದ್ದೇನು?

Last Updated : Dec 15, 2021, 5:42 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.