ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಎಂ ಎಂ ನರವಾನೆ ಅವರು ನೇಪಾಳದ ಸೇನಾ ಮುಖ್ಯಸ್ಥ ಪೂರ್ಣ ಚಂದ್ರ ಥಾಪಾ ಅವರೊಂದಿಗೆ ದೂರವಾಣಿ ಸಂವಾದ ನಡೆಸಿದ್ದು, ದ್ವಿಪಕ್ಷೀಯ ರಕ್ಷಣಾ ಸಹಕಾರದ ವಿಷಯಗಳ ಬಗ್ಗೆ ನಿನ್ನೆ ಚರ್ಚಿಸಿದ್ದಾರೆ.
ಜನರಲ್ ಎಂಎಂ ನರವಾನೆ ಸಿಒಎಎಸ್ ನೇಪಾಳಿ ಸೇನೆಯ ಮುಖ್ಯಸ್ಥ ಜನರಲ್ ಪೂರ್ಣ ಚಂದ್ರ ಥಾಪಾ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ದ್ವಿಪಕ್ಷೀಯ ರಕ್ಷಣಾ ಸಹಕಾರದ ಅಂಶಗಳನ್ನು ಚರ್ಚಿಸಿದ್ದಾರೆ ಎಂದು ಭಾರತೀಯ ಸೇನೆ ಟ್ವೀಟ್ ಮಾಡಿದೆ. ಕಳೆದ ಗುರುವಾರ, ನರವಾನೆ ಗ್ರೀಸ್‌ನ ಲೆಫ್ಟಿನೆಂಟ್ ಜನರಲ್ ಚರಲಾಂಪೋಸ್ ಲಲೌಸಿಸ್‌ನೊಂದಿಗೆ ವಿಡಿಯೋ ಟೆಲಿಫೋನಿಕ್ ಸಂವಾದ ನಡೆಸಿದ್ದರು. ದ್ವಿಪಕ್ಷೀಯ ರಕ್ಷಣಾ ಸಹಕಾರದ ಅಂಶಗಳನ್ನು ಚರ್ಚಿಸಿದರು.
ಸೇನಾ ಮುಖ್ಯಸ್ಥ ಎಂ.ಎಂ. ನರವಾಣೆ ಯುಎಸ್ ವಿಶೇಷ ಕಾರ್ಯಾಚರಣೆ ಕಮಾಂಡರ್ ಜನರಲ್ ರಿಚರ್ಡ್ ಡಿ. ಕ್ಲಾರ್ಕ್ ಅವರನ್ನು ಭೇಟಿ ಮಾಡಿದ್ದರು. ಉಭಯ ದೇಶಗಳ ಆಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಕ್ಲಾರ್ಕ್ ದೆಹಲಿಯಲ್ಲಿ ಭಾರತೀಯ ರಕ್ಷಣಾ ಮತ್ತು ಮಿಲಿಟರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಸಭೆಗಳು ಏಷ್ಯಾದ ಅನೇಕ ದೇಶಗಳ ಮೂಲಕ ವಾಡಿಕೆಯ ಭೇಟಿಯ ಭಾಗವಾಗಿದೆ ಎಂದು ದೆಹಲಿಯಲ್ಲಿರುವ ಯುಎಸ್ ರಾಯಭಾರ ಕಚೇರಿ ಹೇಳಿದೆ.
ಇದನ್ನೂ ಓದಿ: ಲಿಂಗ ಸಮಾನತೆ-ಮಹಿಳಾ ಸಬಲೀಕರಣಕ್ಕೆ ಸೇನೆಯಲ್ಲಿ ಪ್ರಾಮುಖ್ಯತೆ: ಜನರಲ್ ಎಂ.ಎಂ ನರವಣೆ