ಲೂಧಿಯಾನ(ಪಂಜಾಬ್): 25 ವರ್ಷಗಳ ಸುದೀರ್ಘ ಅಂತರದ ಬಳಿಕ ಕೊನೆಗೂ ಡಿಜಿಪಿ ಆದೇಶದ ಮೇರೆಗೆ ಶಸ್ತ್ರಾಸ್ತ್ರಗಳ ನಾಪತ್ತೆಕ್ಕೆ ಸಂಬಂಧಿಸಿದಂತೆ ಲೂಧಿಯಾನದ 3 ಹೆಡ್ ಕಾನ್ಸ್ಸ್ಟೇಬಲ್ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪ್ರಕರಣ 2004ಕ್ಕಿಂತಲೂ ಹಳೆಯದಾಗಿದ್ದು, ಪೋಲಿಸ್ ಇಲಾಖೆ 2004 ರಲ್ಲಿ ಶಸ್ತ್ರಾಸ್ತ್ರಗಳನ್ನು ಪರಿಶೀಲಿಸಿದಾಗ, 20 ಗುಂಡುಗಳು ಮತ್ತು 1 ಸ್ಟನ್ ಗನ್ ನಾಪತ್ತೆಯಾಗಿರುವುದು ಕಂಡು ಬಂದಿದೆ. ತನಿಖೆ ನಂತರ ನಾಪತ್ತೆಯಾದ ಶಸ್ತ್ರಾಸ್ತ್ರಗಳು ಜಾಗರಾನ್ ರಸ್ತೆಯ ನಿವಾಸಿ ಮಂಜಿತ್ ಸಿಂಗ್ ಅವರಿಗೆ ಸೇರಿದವು ಎಂದು ತಿಳಿದು ಬಂದಿತ್ತು.
ಈ ಶಸ್ತ್ರಾಸ್ತ್ರಗಳ ಭದ್ರತೆಗೆ ಹೆಡ್ ಕಾನ್ಸ್‌ಟೇಬಲ್ ಜಗ್ರೂಪ್ ಸಿಂಗ್, ಹೆಡ್ ಕಾನ್‌ಸ್ಟೆಬಲ್ ರಾಜಿಂದರ್ ಪಾಲ್ ಸಿಂಗ್ ಮತ್ತು ಎಸ್‌ಪಿಒ ಅಜಿತ್ ಸಿಂಗ್ ಅವರನ್ನು ನೇಮಿಸಲಾಗಿತ್ತು. ಆ ಸಂದರ್ಭದಲ್ಲಿ ಮೂರು ಕಾನ್ಸ್ಟೇಬಲ್ಗಳು ಉದ್ದೇಶಪೂರ್ವಕವಾಗಿ ಈ ಶಸ್ತ್ರಾಸ್ತ್ರಗಳನ್ನು ಕಳೆದುಕೊಂಡಿಲ್ಲ ಎಂದು ಕ್ಲೀನ್ ಚಿಟ್ ನೀಡಲಾಗಿತ್ತು.
ಆದರೆ 2009 ರಲ್ಲಿ ಮತ್ತೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ತಿಳಿಸಲಾಗಿತ್ತಾದರೂ ಪೊಲೀಸರು ಮಾಡದೇ ಇದ್ದಾಗ ಎಸ್‌ಎಸ್‌ಪಿ ಹರ್ಜಿತ್ ಸಿಂಗ್ ಪ್ರಕರಣ ದಾಖಲಿಸಿದ್ದರು.
ಅದರಂತೆ ಮೂವರು ಆರೋಪಿಗಳಿಗೆ ಬುಲೆಟ್‌ಗಳ ಎರಡು ಪಟ್ಟು ಬೆಲೆ ಮತ್ತು ಶೇ 25ರಷ್ಟು ಆಯುಧವನ್ನು ದಂಡವಾಗಿ ಲುಧಿಯಾನ ಪೊಲೀಸ್ ಜಿಲ್ಲೆಯಿಂದ ಪಾವತಿಸಲು ಹೇಳಲಾಯಿತು. ಆದರೆ ಈ ಎಲ್ಲಾ ಆದೇಶಗಳನ್ನು ಪ್ರಸ್ತುತ ಡಿಜಿಪಿ ತೆಗದು ಹಾಕಿ ಶಸ್ತ್ರಾಸ್ತ್ರ ನಾಪತ್ತೆಯಾಗಲು ಮೂರು ಆರೋಪಿಗಳ ನಿರ್ಲಕ್ಷ್ಯವೇ ಕಾರಣ ಎಂದು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ:ಇಲಿ ಬಾಲಕ್ಕೆ ಕಲ್ಲು ಕಟ್ಟಿ ಕಾಲುವೆಗೆ ಎಸೆದ ವ್ಯಕ್ತಿ: ಪ್ರಾಣಿ ಹಿಂಸೆ ಕಾಯ್ದೆಯಡಿ ಕ್ರಮಕ್ಕೆ ಆಗ್ರಹ