ಜೈಸಲ್ಮೇರ್ (ರಾಜಸ್ಥಾನ) : ಐಸಿಐಸಿಐ ಬ್ಯಾಂಕ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಚಂದಾ ಕೊಚ್ಚರ್ ಹಾಗೂ ದೀಪಕ್ ಕೊಚ್ಚಾರ್ ದಂಪತಿ ಮಗ ಅರ್ಜುನ್ ವಿವಾಹ ರದ್ದಾಗಿದೆ ಎಂದು ವರದಿಯಾಗಿದೆ. ಕಳೆದ ಶುಕ್ರವಾರ ವಿಡಿಯೋ ಕಾನ್ ಕಂಪನಿಗೆ ಕೋಟ್ಯಂತರ ರೂ ಸಾಲ ನೀಡಿದ ಪ್ರಕರಣದಲ್ಲಿ ಚಂದಾ ಕೊಚ್ಚಾರ್, ಪತಿ ದೀಪಕ್ ಕೊಚ್ಚಾರ್ ಹಾಗೂ ವಿಡಿಯೋಕಾನ್ ಸಂಸ್ಥೆಯ ವೇಣುಗೋಪಾಲ್ ಧೂತ್ ಅವರನ್ನು ಸಿಬಿಐ ಬಂಧಿಸಿದೆ. ಈ ಸಂಬಂಧ ಕೊಚ್ಚಾರ್ ದಂಪತಿ ಪುತ್ರ ಅರ್ಜುನ್ ಕೊಚ್ಚಾರ್ ಮದುವೆ ರದ್ದಾಗಿದೆ ಎಂದು ತಿಳಿದುಬಂದಿದೆ.
ಇನ್ನು ಅರ್ಜುನ್ ವಿವಾಹವು ಅದ್ದೂರಿಯಾಗಿ ಜೈಸಲ್ಮೇರ್‌ನ ಎರಡು ಪ್ರತಿಷ್ಠಿತ ಹೋಟೆಲ್ಗಳಲ್ಲಿ ಜ.15 ರಿಂದ 18 ರವರೆಗೆ ನಡೆಯಲಿತ್ತು. ಮದುವೆಯ ಉಸ್ತುವಾರಿಯನ್ನು ಮುಂಬೈನ ಪ್ರಮುಖ ಇವೆಂಟ್ ಕಂಪನಿಯೊಂದಕ್ಕೆ ನೀಡಲಾಗಿತ್ತು. ಆದರೆ, ಇದೀಗ ಮದುವೆ ರದ್ದಾಗಿದೆ ಎಂದು ತಿಳಿದುಬಂದಿದೆ.
ಐಷಾರಾಮಿ ಹೋಟೆಲ್‌ಗೆ 2 ಕೋಟಿ ರೂ ಬಾಡಿಗೆ : ಅರ್ಜುನ್ ಮದುವೆಗೆ ಜೈಸಲ್ಮೇರ್‌ನ 2 ಪ್ರತಿಷ್ಠಿತ ಸ್ಟಾರ್ ಹೋಟೆಲ್ ಗಳನ್ನು ಆಯ್ಕೆ ಮಾಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಈ ಹೋಟೆಲ್‌ಗೆ 2 ಕೋಟಿ ರೂಪಾಯಿ ಬಾಡಿಗೆ ಎಂದು ಹೇಳಲಾಗಿದೆ. ಅಲ್ಲದೇ ಮದುವೆಗೆ ಆಗಮಿಸುವ ಅಥಿತಿಗಳಿಗೆ 150 ಐಷಾರಾಮಿ ಕಾರುಗಳನ್ನು ಸಹ ಕಾಯ್ದಿರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಏನಿದು ಚಂದಾ ಕೊಚ್ಚಾರ್ ಪ್ರಕರಣ: 2019ರಲ್ಲಿ ದಾಖಲಾದ ತನ್ನ ಎಫ್‌ಐಆರ್‌ನಲ್ಲಿ ಸಿಬಿಐ, ಚಂದಾ ಕೊಚ್ಚಾರ್ ಮತ್ತು ಧೂತ್ ಜೊತೆಗೆ ದೀಪಕ್ ಕೊಚ್ಚಾರ್ ನಿರ್ವಹಿಸುತ್ತಿದ್ದ ಎನ್‌ಆರ್‌ಎಲ್ , ಸುಪ್ರೀಂ ಎನರ್ಜಿ ಪ್ರೈವೇಟ್ ಲಿಮಿಟೆಡ್ಎಸ್ಇಪಿಎಲ್, ವಿಡಿಯೋಕಾನ್ ಇಂಟರ್ ನ್ಯಾಷನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ -ವಿಐಎಲ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ಅನ್ನು ಆರೋಪಿಗಳೆಂದು ಹೆಸರಿಸಿತ್ತು. ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು.
14 ದಿನಗಳ ನ್ಯಾಯಾಂಗ ಬಂಧನ: ಸಾಲ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್‌ನ ಮಾಜಿ ಸಿಇಒ ಮತ್ತು ಎಂಡಿ ಚಂದಾ ಕೊಚ್ಚಾರ್, ಅವರ ಪತಿ ದೀಪಕ್ ಕೊಚ್ಚಾರ್ ಮತ್ತು ವಿಡಿಯೋಕಾನ್ ಗ್ರೂಪ್ ಸಂಸ್ಥಾಪಕ ವೇಣುಗೋಪಾಲ್ ಧೂತ್ ಅವರನ್ನು ಸಿಬಿಐ ವಿಶೇಷ ನ್ಯಾಯಾಲಯ ಗುರುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇದನ್ನೂ ಓದಿ : ಐಸಿಐಸಿಐ ಬ್ಯಾಂಕ್ ಮಾಜಿ ಸಿಇಒ ಚಂದಾ ಕೊಚ್ಚಾರ್ ಸೇರಿ ಮೂವರಿಗೆ ಜನವರಿ 10ರವರೆಗೆ ನ್ಯಾಯಾಂಗ ಬಂಧನ