ETV Bharat / bharat

ಅವ್ಯವಹಾರ ಆರೋಪ: ಆಂಧ್ರ ಸಿಎಂ ಜಗನ್, ಸಚಿವರು, ಅಧಿಕಾರಿಗಳು ಸೇರಿ 41 ಜನರಿಗೆ ಹೈಕೋರ್ಟ್ ನೋಟಿಸ್ - ಜಗನ್ ವಿರುದ್ಧದ ಅಕ್ರಮ ಆಸ್ತಿ ಆರೋಪ

AP High Court Issued Notice to CM Jagan: ಹಣಕಾಸು ಅವ್ಯವಹಾರ ಆರೋಪ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್ ರೆಡ್ಡಿ, ಸಚಿವರು ಮತ್ತು ಐಪಿಎಸ್​, ಐಎಎಸ್​ ಅಧಿಕಾರಿಗಳು ಸೇರಿದಂತೆ 41 ಜನರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

AP High Court issued notices to 41 people along with AP CM Jagan and ministers
ಆಂಧ್ರ ಸಿಎಂ ಜಗನ್, ಸಚಿವರು, ಅಧಿಕಾರಿಗಳು ಸೇರಿ 41 ಜನರಿಗೆ ಹೈಕೋರ್ಟ್ ನೋಟಿಸ್
author img

By ETV Bharat Karnataka Team

Published : Nov 23, 2023, 8:02 PM IST

ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ ಆರೋಪ ಸಂಬಂಧ ಅತೃಪ್ತ ವೈಎಸ್​ಆರ್​ ಕಾಂಗ್ರೆಸ್​ ಸಂಸದ ರಘುರಾಮ ಕೃಷ್ಣರಾಜು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಗುರುವಾರ ಹೈಕೋರ್ಟ್ ಕೈಗೆತ್ತಿಕೊಂಡಿದೆ. ಮುಖ್ಯಮಂತ್ರಿ ಜಗನ್​ ಮೋಹನ್ ರೆಡ್ಡಿ, ಸಚಿವರು ಮತ್ತು ಐಪಿಎಸ್​, ಐಎಎಸ್​ ಅಧಿಕಾರಿಗಳು ಸೇರಿದಂತೆ 41 ಜನರಿಗೆ ನೋಟಿಸ್ ಜಾರಿ ಮಾಡಲು ಉಚ್ಛ ನ್ಯಾಯಾಲಯ ಆದೇಶಿಸಿದೆ.

ಹಣಕಾಸು ಅವ್ಯವಹಾರದ ಕುರಿತು ಸಿಬಿಐ ತನಿಖೆಗೆ ಕೋರಿ ಸಂಸದ ರಘುರಾಮ ಅರ್ಜಿ ಸಲ್ಲಿಸಿದ್ದಾರೆ. ಇಂದು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಲು ಆದೇಶಿಸಿ, ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಿದೆ. ಇದಕ್ಕೂ ಮುನ್ನ ಸರ್ಕಾರದ ಪರವಾಗಿ ಅಡ್ವೋಕೆಟ್​ ಜನರಲ್​​ ಶ್ರೀರಾಮ್ ವಾದ ಮಂಡಿಸಿ, ಸಾರ್ವಜನಿಕ ಹಿತಾಸಕ್ತಿ ಇಲ್ಲದೆ ವೈಯಕ್ತಿಕ ಉದ್ದೇಶದಿಂದ ಅರ್ಜಿ ಸಲ್ಲಿಸಲಾಗಿದೆ. ಹೀಗಾಗಿ ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದರು. ಅಲ್ಲದೇ, ಅರ್ಜಿ ಸಲ್ಲಿಸಿದ ನಂತರವೂ ರಘುರಾಮ ಕೃಷ್ಣರಾಜು ಮಾಧ್ಯಮಗಳಲ್ಲಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ ಎಂದು ಆಕ್ಷೇಪಣೆ ಸಲ್ಲಿಸಿದರು.

ಅರ್ಜಿದಾರ ರಘುರಾಮ ಪರ ವಾದಿಸಿದ ಹಿರಿಯ ವಕೀಲ ಉನ್ನಂ ಮುರಳೀಧರ್, ಅರ್ಜಿ ಸಲ್ಲಿಸಿದ ನಂತರ ಸರ್ಕಾರ ಕೆಲವು ಸಾಕ್ಷ್ಯಗಳನ್ನು ನಾಶಪಡಿಸಲು ಯತ್ನಿಸಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು. ತಮ್ಮ ಹಿಂಬಾಲಕರಿಗೆ ಅನುಕೂಲವಾಗುವಂತೆ ಸಿಎಂ ನಡೆದುಕೊಂಡಿದ್ದಾರೆ. ಮರಳು, ಮದ್ಯ, ಆರೋಗ್ಯ ಇಲಾಖೆಗೆ ಕೆಲ ಉಪಕರಣಗಳು, ಸಿಮೆಂಟ್ ಖರೀದಿಯಲ್ಲಿ ಸಿಎಂ ಜಗನ್ ತಮ್ಮ ಸಂಬಂಧಿಕರು ಹಾಗೂ ಹಿಂಬಾಲಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಪೀಠಕ್ಕೆ ಮನವಿ ಮಾಡಿದರು.

ವಾದ - ಪ್ರತಿವಾದ ಆಲಿಸಿದ ಹೈಕೋರ್ಟ್​, ಅರ್ಜಿಯ ಅರ್ಹತೆಯನ್ನು ನಿರ್ಧರಿಸುವ ಮೊದಲು ಪ್ರತಿವಾದಿಗಳಿಗೆ ನೋಟಿಸ್ ನೀಡುವುದಾಗಿ ಹೇಳಿತು. ಪ್ರತಿವಾದಿಗಳಲ್ಲಿ ಸಿಎಂ ಜಗನ್​, ಸಂಸದ ವಿಜಯಸಾಯಿ ರೆಡ್ಡಿ, ಸಚಿವ ಪೆದ್ದಿರೆಡ್ಡಿ ರಾಮಚಂದ್ರ ರೆಡ್ಡಿ, ಸಜ್ಜಲ ರಾಮಕೃಷ್ಣ ರೆಡ್ಡಿ ಸೇರಿದಂತೆ ಹಲವು ಅಧಿಕಾರಿಗಳು ಸೇರಿದ್ದಾರೆ.

ಇದನ್ನೂ ಓದಿ: ಅಕ್ರಮ ಆಸ್ತಿ ಆರೋಪ ಪ್ರಕರಣದ ವರ್ಗಾವಣೆ ಕೋರಿ ಅರ್ಜಿ: ಆಂಧ್ರ ಸಿಎಂ ಜಗನ್, ಸಿಬಿಐಗೆ ಸುಪ್ರೀಂ ಕೋರ್ಟ್ ನೋಟಿಸ್‌

ಮತ್ತೊಂದೆಡೆ, ಜಗನ್ ವಿರುದ್ಧದ ಅಕ್ರಮ ಆಸ್ತಿ ಆರೋಪ ಪ್ರಕರಣದ ವಿಚಾರಣೆ ವರ್ಗಾವಣೆ ಕೋರಿ ಸಂಸದ ರಘು ರಾಮಕೃಷ್ಣ ರಾಜು ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಹೈದರಾಬಾದ್‌ ನ್ಯಾಯಾಲಯದ ಮುಂದೆ ಬಾಕಿ ಇರುವ ಜಗನ್​ ವಿರುದ್ಧದ ಅಕ್ರಮ ಆಸ್ತಿ ಆರೋಪ ಪ್ರಕರಣದ ವಿಚಾರಣೆಯನ್ನು ಬೇರೆ ರಾಜ್ಯದ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಸಿಎಂ ಜಗನ್ ಹಾಗೂ ಸಿಬಿಐಗೆ ನವೆಂಬರ್ 3ರಂದು ಸುಪ್ರೀಂ ಕೋರ್ಟ್​ ನೋಟಿಸ್​ ಜಾರಿ ಮಾಡಿತ್ತು.

ಇದನ್ನೂ ಓದಿ: ದಿವಾಳಿತನದ ಪ್ರಕ್ರಿಯೆಯಲ್ಲಿ ಸಾವಿರಾರು ಕೋಟಿ ಮೌಲ್ಯದ ಭೂಮಿ ಆಂಧ್ರ ಸಿಎಂ ಮತ್ತು ಕಂಪನಿ ಪಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.