ETV Bharat / bharat

ವೈದ್ಯ ದಂಪತಿಗೆ ಅನಾರೋಗ್ಯ.. ಜಗನ್ ಸರ್ಕಾರದಿಂದ ನೆರವಿನ ಹಸ್ತ..! - Doctor N. Bhaskar Rao

ಭಾಸ್ಕರ್​ರಾವ್​​​​ ಅವರಿಗೆ ಶ್ವಾಸಕೋಶ ಸಮಸ್ಯೆ ಉಲ್ಬಣಿಸಿದ್ದು, ಕಸಿ ಮಾಡುವುದಕ್ಕೆ ಒಂದೂವರೆ ಕೋಟಿ ರೂ. ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದರು. ಆ ವೇಳೆ ಭಾಸ್ಕರ್​ ರಾವ್​ ನೆರವಿಗೆ ಬರುವಂತೆ ಸರ್ಕಾರಕ್ಕೆ ಮೊರೆಯಿಟ್ಟರು. ಕೂಡಲೇ ಸ್ಪಂದಿಸಿದ ಸಿಎಂ ಜಗನ್​ಮೋಹನ್​ರೆಡ್ಡಿ, ವೈದ್ಯ ದಂಪತಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ ಎಂದು ಸಚಿವ ಬಲಿನೇನಿ ಶ್ರೀನಿವಾಸ ರೆಡ್ಡಿಗೆ ಸೂಚಿಸಿದ್ದಾರೆ.

ವೈದ್ಯ ದಂಪತಿಗೆ ಅನಾರೋಗ್ಯ
ವೈದ್ಯ ದಂಪತಿಗೆ ಅನಾರೋಗ್ಯ
author img

By

Published : Jun 5, 2021, 9:00 PM IST

ಆಂಧ್ರಪ್ರದೇಶ: ಕೋವಿಡ್​​​ ಸೋಂಕು ತಗುಲಿ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ವೈದ್ಯರ ಚಿಕಿತ್ಸೆಗೆ ಸ್ಪಂದಿಸಲು ಆಂಧ್ರ ಸರ್ಕಾರ ಮುಂದಾಗಿದೆ. ಸರ್ಕಾರಿ ಆಸ್ಪತ್ರೆಯ ವೈದ್ಯರಾಗಿದ್ದ ಎನ್. ಭಾಸ್ಕರ್​ ರಾವ್​​ ದಂಪತಿ ಚಿಕಿತ್ಸೆ ಒಂದೂವರೆ ಕೋಟಿ ರೂಪಾಯಿಯನ್ನು ಸರ್ಕಾರ ಭರಿಸಲಿದೆ ಎಂದು ಸಿಎಂ ಜಗನ್​ಮೋಹನ್​ರೆಡ್ಡಿ ತಿಳಿಸಿದ್ದಾರೆ.

ಪ್ರಕಾಶಂ ಜಿಲ್ಲೆಯ ಪಿಎಚ್‌ಸಿ ಕರಮ್‌ಚೆಡುನಲ್ಲಿ ವೈದ್ಯರಾಗಿರುವ ಎನ್. ಭಾಸ್ಕರ್ ರಾವ್ ಮತ್ತು ಗುಂಟೂರು ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಅವರ ಪತ್ನಿ ಡಾ.ಭಾಗ್ಯಲಕ್ಷ್ಮಿ ಗೆ ಕೋವಿಡ್ ದೃಢಪಟ್ಟಿತ್ತು. ಇವರಿಬ್ಬರನ್ನು ಏಪ್ರಿಲ್ 30 ರಂದು ಗುಂಟೂರಿನ ಜಿಜಿಹೆಚ್‌ ಆಸ್ಪತ್ರೆಗೆ ದಾಖಲಿಸಲಾಯಿತು.

ಭಾಸ್ಕರ್ ರಾವ್ ಸ್ಥಿತಿ ಸಂಪೂರ್ಣ ಹದಗೆಟ್ಟಿದ್ದರಿಂದ ಮೇ 3 ರಂದು ವಿಜಯವಾಡದ ಆಯುಷ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆರೋಗ್ಯ ಮತ್ತಷ್ಟೂ ಬಿಗಡಾಯಿಸಿದಾಗ ಮೇ 9 ರಂದು ಸೋಮಾಜಿಗುಡದ ಯಶೋಧಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು. ಮೇ 10 ರಂದು ಅವರಿಗೆ ವೆಂಟಿಲೇಟರ್​ನಲ್ಲಿ ಚಿಕಿತ್ಸೆ ನೀಡಲಾಯಿತು. ನಂತರ ಗಚಿಬೌಲಿಯ ಕೋವಿಡ್​​ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಆದರೆ, ಕೆಲ ದಿನಗಳ ಬಳಿಕ ಅವರಿಗೆ ಶ್ವಾಸಕೋಶ ಸಮಸ್ಯೆ ಉಲ್ಬಣಿಸಿದ್ದು, ಕಸಿ ಮಾಡುವುದಕ್ಕೆ ಒಂದೂವರೆ ಕೋಟಿ ರೂ. ಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದರು. ಆ ವೇಳೆ ಭಾಸ್ಕರ್​ ರಾವ್​ ನೆರವಿಗೆ ಬರುವಂತೆ ಸರ್ಕಾರಕ್ಕೆ ಮೊರೆಯಿಟ್ಟರು. ಕೂಡಲೇ ಸ್ಪಂದಿಸಿದ ಸಿಎಂ ಜಗನ್​ಮೋಹನ್​ರೆಡ್ಡಿ, ವೈದ್ಯ ದಂಪತಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ ಎಂದು ಸಚಿವ ಬಲಿನೇನಿ ಶ್ರೀನಿವಾಸ ರೆಡ್ಡಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ:ಶಾಕಿಂಗ್ ನ್ಯೂಸ್​!: ಕೊರೊನಾ ಸೋಂಕಿತರಲ್ಲದಿದ್ದರೂ 40 ಮಂದಿಗೆ ಬ್ಲ್ಯಾಕ್ ಫಂಗಸ್ ದೃಢ!

ಸರ್ಕಾರದ ನೆರವಿನ ಹಸ್ತಕ್ಕೆ ವೈದ್ಯ ದಂಪತಿ ಧನ್ಯವಾದ ತಿಳಿಸಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.