ಮುಂಬೈ: ಆಂಟಿಲಿಯಾ ಬಾಂಬ್ ಪ್ರಕರಣದಲ್ಲಿ ಮುಂಬೈನ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆಯ ನ್ಯಾಯಾಲಯವು ಪೊಲೀಸ್ ಅಧಿಕಾರಿ ಸುನಿಲ್ ಮಾನೆ ಅವರನ್ನು ಕೇಂದ್ರ ತನಿಖಾ ಸಂಸ್ಥೆಯಡಿ ಏಪ್ರಿಲ್ 28ರವರೆಗೆ ಬಂಧಿಸಿ ವಿಚಾರಣೆ ನಡೆಸಲು ಅನುಮತಿ ನೀಡಿದೆ.
ಇದೇ ಪ್ರಕರಣದಲ್ಲಿ ಅಮಾನತುಗೊಂಡ ಸಹಾಯಕ ಇನ್ಸ್‌ಪೆಕ್ಟರ್ ಸಚಿನ್ ವಾಜೆ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಕೂಡ ಮೇ 5ರವರೆಗೆ ವಿಸ್ತರಿಸಿದೆ.
ಕೇಂದ್ರ ಏಜೆನ್ಸಿಯು ಮಾನೆ ಅವರನ್ನು ಪ್ರಶ್ನಿಸಲು ಮತ್ತು ಅವರ ಎಲೆಕ್ಟ್ರಾನಿಕ್ ಸಾಧನಗಳು, ಕರೆ ದಾಖಲೆಗಳು ಇತ್ಯಾದಿಗಳನ್ನು ಪಡೆಯುವುದು ಅಗತ್ಯವಾಗಿದೆ. ಹಿರೇನ್ ಅವರ ಹತ್ಯೆಯಲ್ಲಿ ಮಾನೆ ಭಾಗಿಯಾಗಿದ್ದಾನೆ ಎಂದು ಎನ್ಐಎ ಪರವಾಗಿ, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕಾಶ್ ಶೆಟ್ಟಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಹಿರೇನ್ ಹತ್ಯೆ ಸ್ಥಳದಲ್ಲಿ ಮಾನೆ ಬಹುಶಃ ಹಾಜರಿದ್ದಾನೆ ಎಂದು ಏಜೆನ್ಸಿ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಈ ಆರೋಪವನ್ನು ಮಾನೆ ಅವರ ವಕೀಲ, ಆದಿತ್ಯ ಗೋರ್ ನಿರಾಕರಿಸಿದ್ದಾರೆ. ಈ ಹಿಂದೆಯೂ ಮಾನೆ ಅವರನ್ನು ಎನ್ಐಎ ಪ್ರಶ್ನಿಸಿದೆ. ಅವರು ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಗೋರ್ ನ್ಯಾಯಾಲಯದ ಗಮನಕ್ಕೆ ತಂದರು.
ಈ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೂರನೇ ಪೊಲೀಸ್ ಅಧಿಕಾರಿ ಮಾನೆ, ವಾಜೆ ಮತ್ತು ಅಪರಾಧ ಶಾಖೆಯ ಸಹೋದ್ಯೋಗಿ ರಿಯಾಜ್ ಖಾಜಿ. ಈ ಇಬ್ಬರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ಬಳಿ ಸ್ಫೋಟಕಗಳಿಂದ ತುಂಬಿದ ವಾಹನವನ್ನು ನಿಲ್ಲಿಸಲಾಗಿತ್ತು. ಈ ಪ್ರಕರಣದ ಹಿಂದೆ ವಾಜೆ ಮತ್ತು ಇತರರು ಇದ್ದಾರೆ ಎಂದು ಎನ್ಐಎ ತನಿಖೆ ನಡೆಸುತ್ತಿದೆ. ಈ ಘಟನೆ ನಡೆದ ಕೆಲವು ದಿನಗಳ ನಂತರ ನೆರೆಯ ಥಾಣೆಯಲ್ಲಿ ಹಿರೇನ್ ಮೃತಪಟ್ಟಿದ್ದ.