ಜಮ್ಮು (ಜಮ್ಮು ಮತ್ತು ಕಾಶ್ಮೀರ): ಜಮ್ಮುವಿನ ವಾಯುಪಡೆ ನಿಲ್ದಾಣದ (ಎಐಎಫ್) ಮೇಲೆ ದಾಳಿ ಮಾಡಲು ಭಯೋತ್ಪಾದಕರು ಸಶಸ್ತ್ರ ಡ್ರೋನ್‌ಗಳನ್ನು ಬಳಸಿದ್ದರು. ಈ ಬೆನ್ನಲ್ಲೇ ಬುಧವಾರ ಮಧ್ಯರಾತ್ರಿ ಅದೇ ಪ್ರದೇಶದಲ್ಲಿ ಮತ್ತೊಂದು Drone ಪತ್ತೆಯಾಗಿದೆ. ಈ ಕುರಿತು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ಕಳೆದ ಕೆಲವು ವಾರಗಳಲ್ಲಿ ಈ ಪ್ರದೇಶದಲ್ಲಿ ಡ್ರೋನ್‌ಗಳ ಹಾರಾಟವನ್ನು ಪತ್ತೆ ಹಚ್ಚಲಾಗಿದೆ. ಶ್ರೀನಗರ, ಕುಪ್ವಾರಾ, ರಾಜೌರಿ ಮತ್ತು ಬಾರಾಮುಲ್ಲಾ ಪ್ರದೇಶಗಳಲ್ಲಿ ಡ್ರೋನ್‌ಗಳ ಸಂಗ್ರಹಣೆ, ಮಾರಾಟ, ಬಳಕೆ ಮತ್ತು ಸಾಗಣೆಗೆ ಹಾಗೂ ಇತರೆ ಮಾನವ ರಹಿತ ವೈಮಾನಿಕ ವಸ್ತುಗಳ ಹಾರಾಟವನ್ನು (ಯುಎವಿ) ನಿಷೇಧಿಸಿದೆ.
ಕಳೆದ ತಿಂಗಳು ನಡೆದ ದಾಳಿಯಲ್ಲಿ ವಾಯುಪಡೆ ನಿಲ್ದಾಣಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಇದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸುತ್ತಿದೆ.
ಇದನ್ನೂ ಓದಿ:ಅಪಘಾತಕ್ಕೀಡಾದ ಸೇನಾ ವಾಹನ : ಜವಾನ ಸಾವು, ಏಳು ಮಂದಿಗೆ ಗಾಯ