ETV Bharat / bharat

ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ನಿರಾಶಾದಾಯಕ: ಎಎಸ್​ಇಆರ್​ ವರದಿ

9, 10ನೇ ತರಗತಿಯಲ್ಲಿ ಓದುತ್ತಿರುವ 69 ಶೇ. ವಿದ್ಯಾರ್ಥಿಗಳು ಮಾತ್ರ 2ನೇ ತರಗತಿಯ ಪಠ್ಯಪುಸ್ತಕ ಓದುವ, ಹಾಗೂ 59 ಶೇ. ವಿದ್ಯಾರ್ಥಿಗಳು ಮಾತ್ರ ಕನಿಷ್ಠ ಒಂದು ಇಂಗ್ಲಿಷ್​ ವಾಕ್ಯ ಓದುವ ಸಾಮರ್ಥ್ಯ ಹೊಂದಿದ್ದು, ರಾಜ್ಯದ ಶಿಕ್ಷಣದ ಗುಣಮಟ್ಟ ಗಣನೀಯವಾಗಿ ಸುಧಾರಿಸುವ ಅಗತ್ಯವಿದೆ ಎಂದು ಎಎಸ್​ಇಆರ್ ವರದಿ ಹೇಳಿದೆ.

Annual Status of Education Report (ASER) 2023
ಕರ್ನಾಟಕದಲ್ಲಿ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ನಿರಾಶದಾಯಕ: ಎಎಸ್​ಇಆರ್​ ವರದಿ
author img

By ETV Bharat Karnataka Team

Published : Jan 18, 2024, 8:20 PM IST

ನವದೆಹಲಿ: ಪ್ರಥಮ್​ ಫೌಂಡೇಶನ್​ ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿಯನ್ನು ಬುಧವಾರ ಪ್ರಕಟಿಸಿದೆ. ಎಎಸ್​ಇಆರ್​ 2023ರ 'ಬಿಯಾಂಡ್​ ಬೇಸಿಕ್ಸ್'​ ಸಮೀಕ್ಷೆಯನ್ನು 26 ರಾಜ್ಯಗಳ 28 ಜಿಲ್ಲೆಗಳಲ್ಲಿ ನಡೆಸಲಾಗಿದೆ. ಅದರಲ್ಲಿ ಈ ಬಾರಿ ಸಮೀಕ್ಷೆಗಾಗಿ ನಮ್ಮ ಕರ್ನಾಟಕದಿಂದ ಮೈಸೂರು ಜಿಲ್ಲೆಯನ್ನು ಆಯ್ಕೆ ಮಾಡಲಾಗಿತ್ತು. ಜಿಲ್ಲೆಯ 60 ಹಳ್ಳಿಗಳ 1,194 ಮನೆಗಳಿಗೆ ಭೇಟಿ ನೀಡಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಈ ಗ್ರಾಮಗಳಲ್ಲಿ 14 - 18 ವರ್ಷ ವಯಸ್ಸಿನ 1,300 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಪ್ರಥಮ್​ ಫೌಂಡೇಶನ್ ನಡೆಸಿದ ಈ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ಕಲಿಕೆಯ ಮಟ್ಟ ನಿರಾಶದಾಯಕವಾಗಿದ್ದು, ಶಿಕ್ಷಣದ ಗುಣಮಟ್ಟ ಗಣನೀಯವಾಗಿ ಸುಧಾರಿಸಬೇಕಿದೆ ಎನ್ನುವ ಅಂಶವನ್ನು ಎಎಸ್​ಇಆರ್​ ವರದಿಯಲ್ಲಿ ಬಹಿರಂಗಗೊಳಿಸಿದೆ.

ರಾಜ್ಯದಲ್ಲಿ ಒಟ್ಟಾರೆಯಾಗಿ 14-18 ವರ್ಷ ವಯಸ್ಸಿನ 77.6 ಶೇಕಡಾದಷ್ಟು ಮಕ್ಕಳು ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾಗಿದ್ದಾರೆ. ಆದರೆ ಅವರಲ್ಲಿ ಕಲಿಕೆಯ ಗುಣಮಟ್ಟ ನಿರಾಶದಾಯಕವಾಗಿದೆ. 14-16 ವಯಸ್ಸಿನ ವಿದ್ಯಾರ್ಥಿಗಳ ಗುಂಪಿನಲ್ಲಿ 69 ಶೇಕಡಾದಷ್ಟು ಮಕ್ಕಳು ಮಾತ್ರ 2ನೇ ತರಗತಿ ಪಠ್ಯಪುಸ್ತಕವನ್ನು ನಿರರ್ಗಳವಾಗಿ ಓದಬಲ್ಲರು. 38 ಶೇಕಡಾದಷ್ಟು ಮಕ್ಕಳು ಮಾತ್ರ ಭಾಗಾಕಾರ ಲೆಕ್ಕವನ್ನು ಬಿಡಿಸಬಲ್ಲರು. ಇನ್ನು 59 ಶೇಕಡಾದಷ್ಟು ವಿದ್ಯಾರ್ಥಿಗಳು ಮಾತ್ರ ಕನಿಷ್ಠ ಒಂದು ಇಂಗ್ಲಿಷ್​ ವಾಕ್ಯವನ್ನಷ್ಟೇ ಓದುವ ಸಾಮರ್ಥ್ಯ ಹೊಂದಿದ್ದಾರೆ. 17-18 ವಯಸ್ಸಿನ ವಿದ್ಯಾರ್ಥಿಗಳ ಗುಂಪಿನಲ್ಲಿ ಸುಮಾರು 77 ಶೇಕಡಾದಷ್ಟು ವಿದ್ಯಾರ್ಥಿಗಳು ಮಾತ್ರ 2ನೇ ತರಗತಿಯ ಪಠ್ಯಪುಸ್ತಕವನ್ನು ಓದಬಲ್ಲರು. ಕೇವಲ 35 ಶೇಕಡಾದಷ್ಟು ವಿದ್ಯಾರ್ಥಿಗಳು ಮಾತ್ರ ಭಾಗಾಕಾರ ಲೆಕ್ಕವನ್ನು ಬಿಡಿಸುವಷ್ಟು ಸಾಮರ್ಥ್ಯ ಹೊಂದಿದ್ದಾರೆ.

ಮೈಸೂರು ಜಿಲ್ಲೆಯ 14-18 ವರ್ಷ ವಯಸ್ಸಿನ ವಿದ್ಯಾರ್ಥಿಗಳ ಪೈಕಿ ಶೇಕಡಾ 71.5 ರಷ್ಟು ವಿದ್ಯಾರ್ಥಿಗಳು 2ನೇ ತರಗತಿಯ ಪಠ್ಯಪುಸ್ತಕವನ್ನು ಓದಬಲ್ಲರು. 37.4 ಶೇಕಡಾದಷ್ಟು ವಿದ್ಯಾರ್ಥಿಗಳು ಮಾತ್ರ ಭಾಗಾಕಾರ ಲೆಕ್ಕವನ್ನು ಬಿಡಿಸಬಲ್ಲರು. 61.2 ಶೇಕಡಾದಷ್ಟು ವಿದ್ಯಾರ್ಥಿಗಳು ಮಾತ್ರ ಕನಿಷ್ಠ ಒಂದು ಇಂಗ್ಲಿಷ್​ ವಾಕ್ಯವನ್ನು ಓದುವ ಸಾಮರ್ಥ್ಯ ಹೊಂದಿದ್ದಾರೆ ಎನ್ನುವ ಅಂಶವನ್ನು ವರದಿ ವಿವರಿಸಿದೆ.

ರಾಷ್ಟ್ರೀಯ ಸರಾಸರಿಯಾದ 43.3 ಶೇಕಡಾ, 73.6 ಶೇಕಡಾ ಹಾಗೂ 57.3 ಶೇಕಡಾಕ್ಕಿಂತ ತುಲನಾತ್ಮಕವಾಗಿ ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಕಡಿಮೆ ಹೊಂದಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ತೆಲಂಗಾಣದ ಖಮ್ಮಂ ಜಿಲ್ಲೆಯ ನಂತರ ಎರಡನೆಯ ಕಾರ್ಯಕ್ಷಮತೆ ಕಡಿಮೆ ಇರುವ ಜಿಲ್ಲೆ ಮೈಸೂರು ಆಗಿದೆ. ಈ ಸಮೀಕ್ಷೆಯು ಮುಖ್ಯವಾಗಿ ಗ್ರಾಮೀಣ ಭಾರತದ 14 ರಿಂದ 18 ವರ್ಷ ವಯಸ್ಸಿನ ಯುವಕರ ಮೇಲೆ ಬೆಳಕು ಚೆಲ್ಲಿದೆ.

ತಂತ್ರಜ್ಞಾನ ಆಧರಿತ ಕೋರ್ಸ್​ಗಳಿಗೆ ಶೇ 20 ರಷ್ಟು ಯುವಕರ ಆಸಕ್ತಿ: ಮೈಸೂರು ಜಿಲ್ಲೆಯ 14-18 ವಯಸ್ಸಿನ ವಿದ್ಯಾರ್ಥಿಗಳು ದೈನಂದಿನ ಲೆಕ್ಕಾಚಾರಗಳನ್ನು ಮಾಡುವಲ್ಲಿ ಸರಾಸರಿಗಿಂತ ಮುಂದಿದ್ದಾರೆ. ಜಿಲ್ಲೆಯಲ್ಲಿ ವಿಜ್ಞಾನ, ಇಂಜಿನಿಯರಿಂಗ್​ ಹಾಗೂ ಮಾಹಿತಿ ತಂತ್ರಜ್ಞಾನ ವಿಷಯಗಳ ಕೋರ್ಸ್​ಗಳಿಗೆ ಕೇವಲ ಶೇಕಡಾ 20.2 ರಷ್ಟು ಯುವಕರು ಮಾತ್ರ ದಾಖಲಾಗಿದ್ದಾರೆ ಎಂದು ವರದಿ ಹೇಳಿದೆ.

ಅದಾಗ್ಯೂ ಜಿಲ್ಲೆ ಕಲೆ ಹಾಗೂ ಮಾನವಿಕ ವಿಷಯಗಳನ್ನು ಆಯ್ಕೆ ಮಾಡಿಕೊಂಡ ಯುವಕರನ್ನು ಹೆಚ್ಚು ಹೊಂದಿದ್ದು, 44.3 ಶೇಕಡಾ ವಿದ್ಯಾರ್ಥಿಗಳು ಈ ಎರಡು ವಿಭಾಗಗಳಿಗೆ ದಾಖಲಾಗಿದ್ದಾರೆ. 34.4 ಶೇಕಡಾದಷ್ಟು ವಿದ್ಯಾರ್ಥಿಗಳು ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. 14.16 ವಯಸ್ಸಿನ ವಿಭಾಗದ ವಿದ್ಯಾರ್ಥಿಗಳ ಕಾರ್ಯಕ್ಷಮತೆ ಕಡಿಮೆಯಾಗಿದ್ದರೆ, 17-18 ವಯಸ್ಸಿನ ವಿದ್ಯಾರ್ತೀಗಳ ಕಾರ್ಯಕ್ಷಮತೆ ತುಲನಾತ್ಮಕವಾಗಿ ಸುಧಾರಿಸಿದೆ. ರಾಷ್ಟ್ರೀಯ ಸರಾಸರಿ ಹಾಗೂ ಕೆಲವು ದಕ್ಷಿಣ ಭಾರತದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ, ಸೂಚನೆಗಳನ್ನು ಓದುವ ಹಾಗೂ ನಾಲ್ಕು ಪ್ರಶ್ನೆಗಳಲ್ಲಿ ಕನಿಷ್ಠ ಮೂರು ಪ್ರಶ್ನೆಗಳಿಗೆ ಉತ್ತರಿಸುವ ಸಾಮರ್ಥ್ಯ ಹೊಂದಿರುವ ಶೇ 84.5ರಷ್ಟು ವಿದ್ಯಾರ್ಥಿಗಳನ್ನು ಹೊಂದುವ ಮೂಲಕ ಮೈಸೂರು ಜಿಲ್ಲೆ ಅಗ್ರಸ್ಥಾನದಲ್ಲಿದೆ.

ಕುತೂಹಲಕಾರಿ ಎಂದರೆ 7.6 ಶೇಕಡಾದಷ್ಟು 14-18 ವಯಸ್ಸಿನ ನಡುವಿನ ಯುವಕರು ಯಾವುದೇ ಶಾಲೆ ಅಥವಾ ಕಾಲೇಜಿಗೆ ದಾಖಲಾಗಿಲ್ಲ. ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಸರ್ಕಾರಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 4.8ರಷ್ಟು ವಿದ್ಯಾರ್ಥಿಗಳು ಮಾತ್ರ ವೃತ್ತಿಪರ ತರಬೇತಿ ಅಥವಾ ಇತರ ಕೋರ್ಸ್​ಗಳಿಗೆ ದಾಖಲಾಗಿದ್ದಾರೆ.

ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ ಶೇಕಡಾ 96.1ರಷ್ಟು ವಿದ್ಯಾರ್ಥಿಗಳು ಸ್ಮಾರ್ಟ್​ ಫೋನ್​ ಬಳಸುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲಿ 86.6 ಶೇಕಡಾ ವಿದ್ಯಾರ್ಥಿಗಳು ಉಲ್ಲೇಖಿತ ವಾರದಲ್ಲಿ ಕನಿಷ್ಠ ಒಂದು ಶಿಕ್ಷಣ ಸಂಬಂಧಿತ ಚಟುವಟಿಕೆಯನ್ನು ಆನ್​ಲೈನ್​ನಲ್ಲಿ ಮಾಡಿದವರಾಗಿದ್ದಾರೆ. ಈ ವಿಭಾಗದಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆ ರಾಷ್ಟ್ರೀಯ ಸರಾಸರಿ 66.1 ಕ್ಕಿಂತ ಉತ್ತಮವಾಗಿದೆ.

ಡಿಜಿಟಲ್​ ಕಾರ್ಯಗಳಿಗೆ ಸಂಬಂಧಿಸಿದಂತೆ, ಕೇವಲ 47.5 ಶೇಕಡಾದಷ್ಟು ವಿದ್ಯಾರ್ಥಿಗಳು ಮಾತ್ರ ಗೂಗಲ್​ ನಕ್ಷೆಗಳನ್ನು ಹೇಗೆ ಬಳಸಬೇಕು ಎನ್ನುವುದನ್ನು ತಿಳಿದಿದ್ದಾರೆ. 91.2 ಪ್ರತಿಶತದಷ್ಟು ವಿದ್ಯಾರ್ಥಿಗಳು ಯೂಟ್ಯೂಬ್​ ವಿಡಿಯೋಗಳನ್ನು ಹುಡುಕಿ ನೋಡುವುದನ್ನು ತಿಳಿದಿದ್ದಾರೆ.

ಶೇ 85 ರಷ್ಟು ವಿದ್ಯಾರ್ಥಿಗಳ ಬಳಿ ಸ್ಮಾರ್ಟ್​ಫೋನ್​; ಮೈಸೂರು ಜಿಲ್ಲೆಯಲ್ಲಿ ಸಮೀಕ್ಷೆಗೊಳಗಾದ ವಿದ್ಯಾರ್ಥಿಗಳಲ್ಲಿ ಶೇ. 85 ರಷ್ಟು ಸ್ಟುಡೆಂಟ್ಸ್​ ಸ್ಮಾರ್ಟ್​ಫೋನ್​ ಹೊಂದಿದ್ದಾರೆ. ಅದರಲ್ಲಿ ಶೇ. 95 ರಷ್ಟು ವಿದ್ಯಾರ್ಥಿಗಳಿಗೆ ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ಗೊತ್ತಿದೆ. ಅವರಲ್ಲಿ 90 ಶೇ ವಿದ್ಯಾರ್ಥಿಗಳ ಕನಿಷ್ಠ ವಾರಕ್ಕೊಮ್ಮೆ ಶೈಕ್ಷಣಿಕ ಉದ್ದೇಶಕ್ಕಾಗಿ ಬಳಸಿದರೆ, 93 ಶೇ ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಗಳಿಗಾಗಿ ಬಳಸುತ್ತಾರೆ. ಸಾಮಾಜಿಕ ಮಾಧ್ಯಮಗಳನ್ನು ಬಳಸುವ ವಿದ್ಯಾರ್ಥಿಗಳಲ್ಲಿ ಶೇ. 39 ಮಂದಿಗಷ್ಟೇ ಪ್ರೊಫೈಲ್​ ಅನ್ನು ಹೇಗೆ ಬ್ಲಾಕ್​ ಮಾಡಬೇಕು ಹಾಗೂ 47 ಶೇ ಮಂದಿಗೆ ಖಾತೆಯನ್ನು ಖಾಸಗಿ ಹೇಗೆ ಮಾಡುವುದು ಎನ್ನುವುದು ತಿಳಿದಿದೆ.

ಶೇ 2 ರಷ್ಟು ವಿದ್ಯಾರ್ಥಿಗಳು ಯಾವುದೇ ಕೋರ್ಸ್​ಗೆ ಸೇರಿಲ್ಲ: ಸಮೀಕ್ಷೆಯ ಪ್ರಕಾರ, ಮೈಸೂರಿನಲ್ಲಿ 44 ಶೇಕಡಾ ವಿದ್ಯಾರ್ಥಿಗಳು ಕಲೆ ಅಥವಾ ಮಾನವಶಾಸ್ತ್ರ, 34 ಶೇಕಡಾ ವಾಣಿಜ್ಯ ಮತ್ತು 20 ಶೇಕಡಾ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳನ್ನು ತೆಗೆದುಕೊಂಡಿದ್ದಾರೆ. 14-16 ವಯೋಮಾನದ ಸರಾಸರಿ ಶೇಕಡಾ 7ಕ್ಕೆ ಹೋಲಿಸಿದರೆ ಮೈಸೂರಿನಲ್ಲಿ ಕೇವಲ 2 ಶೇಕಡಾದಷ್ಟು ಯುವಜನರು ಯಾವುದೇ ಶಿಕ್ಷಣ ಸಂಸ್ಥೆಗೆ ದಾಖಲಾಗಿಲ್ಲ. 14-16 ವಯಸ್ಸಿನ ವಿಭಾಗದಲ್ಲಿ ಶೇ.71 ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ದಾಖಲಾಗಿದ್ದರೆ, 17-18 ಗುಂಪಿನ ಅರ್ಧದಷ್ಟು ಜನರು ಸರ್ಕಾರಿ ಸಂಸ್ಥೆಗಳಲ್ಲಿ ದಾಖಲಾಗಿದ್ದಾರೆ ಎಂದು ವರದಿ ತಿಳಿಸಿದೆ.

ಶೇ 20 ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಕರಾಗುವ ಬಯಕೆ; ಸಮೀಕ್ಷೆಯ ಪ್ರಕಾರ, 29.3 ಶೇಕಡಾ ಪುರುಷ ವಿದ್ಯಾರ್ಥಿಗಳು ಪೊಲೀಸರಾಗಲು ಬಯಸಿದ್ದು, 20.9 ಶೇಕಡಾ ಮಹಿಳಾ ವಿದ್ಯಾರ್ಥಿಗಳು ಶಿಕ್ಷಕರಾಗಲು ಬಯಸಿದ್ದಾರೆ. ಪುರುಷ ವಿದ್ಯಾರ್ಥಿಗಳು ಪೊಲೀಸ್​ ಆಯ್ಕೆಯ ನಂತರ ಶೇ. 15ರಷ್ಟು ವಿದ್ಯಾರ್ಥಿಗಳು ಎಂಜಿನಿಯರ್, 8.6 ಶೇಕಡಾ ಸೇನೆ, ಮತ್ತು ಶೇ. 5.8ರಷ್ಟು ಶಿಕ್ಷಕರಾಗಲು ಬಯಸಿದ್ದಾರೆ.ಮಹಿಳಾ ವಿದ್ಯಾರ್ಥಿಗಳಲ್ಲಿ ಶಿಕ್ಷಕಿಯ ನಂತರ, ಶೇ.19.1 ರಷ್ಟು ವೈದ್ಯರು, ಶೇ.11.6 ರಷ್ಟು ಪೊಲೀಸ್, ಶೇ.11.1ರಷ್ಟು ಎಂಜಿನಿಯರ್ ಆಗುವ ಆಸಕ್ತಿ ಹೊಂದಿದ್ದಾರೆ ಎಂದು ವರದಿ ಹೇಳಿದೆ.

ದೇಶಾದ್ಯಂತ 28 ಜಿಲ್ಲೆಗಳ 14-18 ವರ್ಷ ವಯಸ್ಸಿನ ಒಟ್ಟು 34,745 ಮಕ್ಕಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ ಹೊರತುಪಡಿಸಿ, ಉಳಿದ 24 ರಾಜ್ಯಗಳಲ್ಲಿ ತಲಾ ಒಂದೊಂದು ಗ್ರಾಮಾಂತರ ಜಿಲ್ಲೆಗಳಲ್ಲಿ ಹಾಗೂ ಆ ಎರಡು ರಾಜ್ಯಗಳಲ್ಲಿ ತಲಾ ಎರಡೆರಡು ಜಿಲ್ಲೆಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ಈ ಸಮೀಕ್ಷೆಯಲ್ಲಿ ಯುವಕರ ಪ್ರಸ್ತುತ ಚಟುವಟಿಕೆ, ಮೂಲಭೂತ ಮತ್ತು ಅನ್ವಯಿಕ ಕಾರ್ಯಗಳನ್ನು ಮಾಡುವ ಅವರ ಸಾಮರ್ಥ್ಯದ ಕುರಿತು ಡಾಟಾ ಸಂಗ್ರಹಿಸಲಾಗಿದೆ. ಅದರಲ್ಲೂ ಸಮೀಕ್ಷೆ ವೇಳೆ ಡಿಜಿಟಲ್​ ಸಾಧನಗಳಿಗೆ ಯುವಕರ ಪ್ರವೇಶ ಹಾಗೂ ಡಿಜಿಟಲ್​ ಕಾರ್ಯಗಳನ್ನು ಮಾಡುವ ಅವರ ಕೌಶಲಗಳ ಬಗ್ಗೆ ವಿಶೇಷ ಗಮನವನ್ನು ಹರಿಸಲಾಗಿದೆ. ಭವಿಷ್ಯದ ಬಗ್ಗೆ ಯುವಕರ ಆಕಾಂಕ್ಷೆಗಳ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.

ಇದನ್ನೂ ಓದಿ: ಶೇ.42ರಷ್ಟು ಗ್ರಾಮೀಣ ಮಕ್ಕಳು ಸುಲಭ ಇಂಗ್ಲಿಷ್​ ವಾಕ್ಯ ಓದಲು ಅಸಮರ್ಥ: ASER ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.