ETV Bharat / bharat

ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಲು ವಾಜೆ ಮೇಲೆ ಅನಿಲ್​ ದೇಶಮುಖ್​ ಒತ್ತಡ: ಪರಮ್​ ಬೀರ್​ ಸಿಂಗ್ - ಸಚಿನ್​ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ

ಮುಖೇಶ್​ ಅಂಬಾನಿ ಮನೆ ಮುಂದೆ ನಿಲ್ಲಿಸಿd್ದ ಸ್ಫೋಟಕ ತುಂಬಿದ್ದ ಕಾರು ಪತ್ತೆ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದ್ದು, ಗೃಹ ಸಚಿವ ಅನಿಲ್ ದೇಶ್​ಮುಖ್​ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.

Anil Deshmukh
Anil Deshmukh
author img

By

Published : Mar 20, 2021, 9:57 PM IST

Updated : Mar 20, 2021, 10:46 PM IST

ಮುಂಬೈ: ಪ್ರತಿ ತಿಂಗಳು 100 ಕೋಟಿ ರೂ. ಹಣ ಸಂಗ್ರಹ ಮಾಡುವಂತೆ ಮುಂಬೈ ಪೊಲೀಸ್​​ ಅಧಿಕಾರಿ ಸಚಿನ್​ ವಾಜೆಗೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​ಮುಖ್​​ ಒತ್ತಡ ಹೇರಿದ್ದರು ಎಂದು ಮುಂಬೈ ಮಾಜಿ ಪೊಲೀಸ್​ ಆಯುಕ್ತ​ ಪರಮ್​​ ಬೀರ್​​ ಸಿಂಗ್​ ಆರೋಪ ಮಾಡಿದ್ದಾರೆ.

  • मुकेश अंबानी प्रकरणी तसेच मनसुख हिरेन हत्याप्रकरणी सचिन वाजे यांचा सहभाग स्पष्ट होत असताना व त्याचे धागेदोरे तत्कालीन पोलिस आयुक्त श्री परमबिर सिंग यांच्यापर्यंत पोहोचणार असल्याची शक्यता तपासातून होत असताना

    — ANIL DESHMUKH (@AnilDeshmukhNCP) March 20, 2021 " class="align-text-top noRightClick twitterSection" data=" ">

ಮುಂಬೈ ನಗರ ಪೊಲೀಸ್​ ಆಯುಕ್ತರಾಗಿದ್ದ ಪರಮ್ ಬೀರ್​ ಸಿಂಗ್​​ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದಾರೆ.

  • Allegations levelled against me by Param Bir Singh are false & conspiracy to defame me & Maha Vikas Aghadi govt to defend himself. Why was he quiet for so many days after Sachin Waze was arrested? Why didn't he speak earlier?: Maharashtra Home Minister Anil Deshmukh (File photo) pic.twitter.com/SNRJH6A7FQ

    — ANI (@ANI) March 20, 2021 " class="align-text-top noRightClick twitterSection" data=" ">

ಪ್ರಮುಖವಾಗಿ ಬಾರ್​​ ಅಂಡ್ ರೆಸ್ಟೋರೆಂಟ್​ಗಳಿಂದ 100 ಕೋಟಿ ರೂ. ಹಣ ವಸೂಲಿ ಮಾಡುವಂತೆ ಒತ್ತಡ ಹೇರಿದ್ದರು ಎಂದಿರುವ ಅವರು, ಸುಮಾರು 1,750 ಬಾರ್​​ ಹಾಗೂ ರೆಸ್ಟೋರೆಂಟ್​​ಗಳ ಮೇಲೆ ಟಾರ್ಗೆಟ್ ಮಾಡುವಂತೆ ಹೇಳಿದ್ದರು ಎಂದಿದ್ದಾರೆ. ಜತೆಗೆ ಪ್ರತಿ ಒಂದು ಕಡೆಯಿಂದ 2ರಿಂದ 3 ಲಕ್ಷ ಹಣ ಸಂಗ್ರಹ ಮಾಡಿದರೆ 40-50 ಕೋಟಿ ಆಗಲಿದ್ದು, ಉಳಿದ ಹಣ ಬೇರೆ ಮೂಲಗಳಿಂದ ಸಂಗ್ರಹ ಮಾಡುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ.

  • #WATCH | "..We demand Home Minister's resignation. If he doesn't then CM must remove him. Impartial probe must be conducted..Letter also states that CM was intimated about this earlier so why didn't he act on it?" says Maharashtra LoP Devendra Fadnavis on Param Bir Singh's letter pic.twitter.com/ue7xWbslDt

ಆದರೆ ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪವನ್ನು ದೇಶ್​ಮುಖ್​ ಅಲ್ಲಗಳೆದಿದ್ದಾರೆ. ಇನ್ನು ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಜನತಾ ಪಾರ್ಟಿ, ತಕ್ಷಣವೇ ದೇಶ್​ಮುಖ್​ ಅವರನ್ನ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿದೆ. ಮುಂಬೈ ಪೊಲೀಸ್ ಅಧಿಕಾರಿಯಾಗಿದ್ದ ಸಚಿನ್​ ವಾಜೆ ಹೆಸರು ಮುಖೇಶ್ ಅಂಬಾನಿ ಅವರ ಮನೆ ಮುಂದೆ ನಿಲ್ಲಿಸಿದ ಸ್ಫೋಟಕ ತುಂಬಿದ್ದ ವಾಹನ ಪ್ರಕರಣದಲ್ಲಿ ಕೇಳಿ ಬಂದಿದೆ.

Last Updated : Mar 20, 2021, 10:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.