ಯವತ್ಮಾಲ್(ಮಹಾರಾಷ್ಟ್ರ): 18 ವರ್ಷದ ಯುಕವನೋರ್ವನ ಮೇಲೆ ದಾಳಿ ನಡೆಸಿದ್ದ ಹುಲಿ ಆತನನ್ನ ತಿಂದು ಹಾಕಿತ್ತು. ಇದಾದ ಕೆಲ ದಿನಗಳ ಬಳಿಕ ಮತ್ತೆ ಅದೇ ಸ್ಥಳದಲ್ಲಿ ಮತ್ತೊಂದು ಬೇಟೆಗೋಸ್ಕರ ಕಾಯ್ದು ಕುಳಿತಿತ್ತು. ಇದನ್ನ ನೋಡಿರುವ ಗ್ರಾಮಸ್ಥರು ಆಕ್ರೋಶದಲ್ಲಿ ಬೆನ್ನಟ್ಟಿ ಓಡಿಸಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಯವತ್ಮಾಲ್ನ ಜಮಾನಿ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕಳೆದ ಕೆಲ ದಿನಗಳ ಹಿಂದೆ ಯುವಕನೋರ್ವನ ಮೇಲೆ ದಾಳಿ ನಡೆಸಿ, ತಿಂದು ಹಾಕಿತ್ತು. ಇದಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರೂ ನರಭಕ್ಷಕ ಸೆರೆಗೆ ಬಿದ್ದಿರಲಿಲ್ಲ. ಇಂದು ಮತ್ತೆ ಅದೇ ಸ್ಥಳದಲ್ಲಿ ಕುಳಿತುಕೊಂಡಿದೆ. ಇದನ್ನ ನೋಡಿರುವ ಗ್ರಾಮಸ್ಥರು ಆಕ್ರೋಶದಿಂದ ಅದರ ಬೆನ್ನಟ್ಟಿ ಓಡಿಸಿದ್ದಾರೆ.
ಇದನ್ನೂ ಓದಿರಿ: ಕೇಂದ್ರ ಸಂಪುಟದಲ್ಲಿ ಶೇ.90ರಷ್ಟು ಸಚಿವರು ಕೋಟ್ಯಧಿಪತಿಗಳು; ಶೇ.42ರಷ್ಟು ಕ್ರಿಮಿನಲ್ಸ್: ADR ವರದಿ
ಈ ಸಮಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸೇರಿ ಹುಲಿಯನ್ನ ಸೆರೆಹಿಡಿದಿದ್ದಾರೆ. ಹುಲಿಯನ್ನ ಸೆರೆ ಹಿಡಿಯುವ ದೃಶ್ಯ ನೋಡಲು ನೂರಾರು ಜನರು ಜಮಾವಣೆಗೊಂಡಿದ್ದಾಗಿ ತಿಳಿದು ಬಂದಿದೆ.