ETV Bharat / bharat

ಸ್ಕಿಲ್​ ಡೆವಲಪ್​ಮೆಂಟ್​ ಹಗರಣ.. ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಂಧನ

ತೆಲುಗು ದೇಶಂ ಪಕ್ಷದ ಅಧ್ಯಕ್ಷ ಮತ್ತು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಶನಿವಾರ ಮುಂಜಾನೆ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿದೆ.

Andhra Pradesh fromer chief minister  TDP president N Chandrababu  Chandrababu was arrested in Nandyal  ತೆಲುಗು ದೇಶಂ ಪಕ್ಷದ ಅಧ್ಯಕ್ಷ  ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ  ಆಂಧ್ರಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ  ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಬಂಧನ
ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಬಂಧನ
author img

By ETV Bharat Karnataka Team

Published : Sep 9, 2023, 6:49 AM IST

Updated : Sep 9, 2023, 7:21 AM IST

ನಂದ್ಯಾಲ(ಆಂಧ್ರ ಪ್ರದೇಶ): ಸ್ಕಿಲ್​ ಡೆವಲಪ್​ಮೆಂಟ್​ ಹಗರಣಕ್ಕೆ ಸಂಬಂಧಿಸಿದಂತೆ ತೆಲುಗು ದೇಶಂ ಪಕ್ಷದ ಅಧ್ಯಕ್ಷ, ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರನ್ನು ಇಂದು ಮುಂಜಾನೆ ನಂದ್ಯಾಲ್ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಚಂದ್ರಬಾಬು ನಾಯ್ಡು ಅವರು ತಂಗಿದ್ದ ಬಸ್‌ಗೆ ಪೊಲೀಸರು ಸುತ್ತುವರಿದು ಬಂಧಿಸಿದ ಕಾರಣ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.

ನಡೆದಿದ್ದೇನು?: ರಾತ್ರಿ ನಂದ್ಯಾಲದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಚಂದ್ರಬಾಬು ಆರ್​ಕೆ ಫಂಕ್ಷನ್ ಹಾಲ್​ನಲ್ಲಿ ತಂಗಿದ್ದರು. ಬೆಳಗಿನ ಜಾವ ಎರಡೂವರೆ ಗಂಟೆ ಸುಮಾರಿಗೆ ಅನಂತಪುರ ಡಿಐಜಿ ರಘುರಾಮಿ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದರು.

ಅಕ್ಕಪಕ್ಕದಲ್ಲಿರುವ ತೆಲುಗುದೇಶಂ ನಾಯಕರು ಈ ಸಮಯದಲ್ಲಿ ಯಾಕೆ ಭೇಟಿಯಾಗಬೇಕು ಎಂದು ಪ್ರಶ್ನಿಸಿದರು. ಅದಕ್ಕೆ ರಘುರಾಮಿ ರೆಡ್ಡಿ ನೀಮಗೇಕೆ ಹೇಳಬೇಕು ಎಂದು ಮರು ಪ್ರಶ್ನಿಸಿದರು. ಪ್ರಕರಣವೇನು ಎಂದು ಕೇಳಿದಾಗ ಪೊಲೀಸರು ಉತ್ತರಿಸಲಿಲ್ಲ. ಆದರೆ.. ಪ್ರಕರಣದ ವಿವರಗಳ ಬಗ್ಗೆ ಮಾತನಾಡದ ಡಿಐಜಿ ರಘುರಾಮಿ ರೆಡ್ಡಿ, ಚಂದ್ರಬಾಬು ಅವರು ತಂಗಿದ್ದ ಬಸ್ಸಿನ ಬಾಗಿಲ ಬಳಿ ತೆರಳಿದರು. ಇವರ ವರ್ತನೆಗೆ ತೆಲುಗುದೇಶಂ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು, ಪೊಲೀಸರು ಮತ್ತು ತೆಲುಗು ದೇಶಂ ಪದಾಧಿಕಾರಿಗಳ ನಡುವೆ ತೀವ್ರ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆಯಿತು. ಮಧ್ಯರಾತ್ರಿ ಚಂದ್ರಬಾಬು ಅವರನ್ನು ಎಬ್ಬಿಸಿದ್ದು ಸರಿಯಲ್ಲ ಎಂದು ಪೊಲೀಸರೊಂದಿಗೆ ಟಿಡಿಪಿ ನಾಯಕರು ವಾಗ್ವಾದ ನಡೆಸಿದರು. ನಸುಕಿನಜಾವ 3 ಗಂಟೆಗೆ ಏಕೆ ಬರಬೇಕು ಎಂದು ಪೊಲೀಸರ ವರ್ತನೆಗೆ ಟಿಡಿಪಿ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬೆಳಗ್ಗೆ 6 ಗಂಟೆಗೆ ಬಂಧನ: ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಟಿಡಿಪಿ ಕಾರ್ಯಕರ್ತರಿಂದ ತೀವ್ರ ಪ್ರತಿರೋಧ ವ್ಯಕ್ತವಾಯಿತು. ಬೆಳಗ್ಗೆ 5.30 ರ ವರೆಗೆ ನಾಯ್ಡು ಅವರನ್ನು ಭೇಟಿ ಆಗಲು ಯಾರಿಗೂ ಅವಕಾಶ ನೀಡಲಾಗುತ್ತಿಲ್ಲ ಎಂದು ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಪಟ್ಟು ಹಿಡಿದರು. ಬೆಳಗ್ಗೆ 6 ಗಂಟೆ ಸುಮಾರಿಗೆ ನಾಯ್ಡು ಅವರ ವಾಹನದ ಬಾಗಿಲು ಬಡಿದು ಕೆಳಗಿಳಿಸಿ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇನ್ನು ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಿಐಡಿ ಜಾಮೀನು ರಹಿತ ಬಂಧನ ಆದೇಶ ಹೊರಡಿಸಿದೆ. ಈ ಹಿನ್ನೆಲೆ ಪೊಲೀಸರು ನಸುಕಿನ ಜಾವದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲು ಆರ್​ಕೆ ಫಂಕ್ಷನ್​ ಹಾಲ್​ಗೆ ಡಿಐಜಿ ಮತ್ತು ಪೊಲೀಸರ ತಂಡ ಬಂದಿತ್ತು. ಆರಂಭಿಕ ಪ್ರತಿರೋಧದ ನಂತರ ನಾಯ್ಡು ಅವರನ್ನು ಬಂಧಿಸಿ ಕರೆದೊಯ್ಯಲಾಯಿತು. ಅವರನ್ನು ವಿಜಯವಾಡಕ್ಕೆ ಶಿಫ್ಟ್ ಮಾಡಲಾಗುತ್ತಿದೆ ಎನ್ನಲಾಗುತ್ತಿದೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.

ವಕೀಲರು ಹೇಳಿದ್ದೇನು?: ಕೌಶಲ್ಯಾಭಿವೃದ್ಧಿ (skill development)​ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ. ಅಪರಾಧ ಸಂ. 29/2021 ರ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ. ಇನ್ನು ಚಂದ್ರಬಾಬು ನಾಯ್ಡು ವಿರುದ್ಧ ವಿಧಿ 120(B), 166, 167, 418, 420, 465, 468, 471, 409, 201, 109 ರೆಡ್‌ವಿತ್ 34, 37 ಸೆಕ್ಷನಗಳು ಮತ್ತು ಸಿಐಡಿ ಕಾಯಿದೆಯ ಸೆಕ್ಷನ್ 12, 13(2) ರೆಡ್ ವಿತ್ 13(1)(ಸಿ)(ಡಿ) ಅಡಿಯಲ್ಲಿ ಚಂದ್ರಬಾಬು ನಾಯ್ಡು ಅವರ ಬಂಧನವಾಗಿದೆ ಎಂದು ತಿಳಿದುಬಂದಿದೆ.

ಇನ್ನು, ಚಂದ್ರಬಾಬು ನಾಯ್ಡು ಬಂಧನದ ಬಳಿಕ ವೈದ್ಯಕೀಯ ಪರೀಕ್ಷೆಗೆ ಒಳಗಾದರು. ಚಂದ್ರಬಾಬು ಅವರಿಗೆ ವೈದ್ಯಕೀಯ ಪರೀಕ್ಷೆಯಲ್ಲಿ ಅಧಿಕ ಬಿಪಿ ಮತ್ತು ಶುಗರ್ ಇರುವುದು ತಿಳಿದುಬಂದಿದೆ. ಚಂದ್ರಬಾಬು ಆರೋಗ್ಯ ಸ್ಥಿತಿ ಸರಿಯಿಲ್ಲ. ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಅವರ ಪರ ವಕೀಲರು ಮತ್ತು ಪಕ್ಷದ ಮುಖಂಡರು ಹೇಳಿದ್ದಾರೆ.

ಓದಿ: ಬಳ್ಳಾರಿಯಲ್ಲಿ ಎನ್​ಟಿಆರ್​ ಪ್ರತಿಮೆ ಅನಾವರಣ ಮಾಡಿದ ಮಾಜಿ ಸಿಎಂ ಚಂದ್ರಬಾಬು ನಾಯ್ಡು: ವಿಡಿಯೋ

Last Updated : Sep 9, 2023, 7:21 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.