ETV Bharat / bharat

ಹಾಲು ಸಾಗಾಣಿಕೆಗೆ 'ದೇಸಿ ಫೆರಾರಿ ಕಾರು'.. ತಯಾರಿಸಿದ ವ್ಯಕ್ತಿಯ ಭೇಟಿಗೆ ಮುಂದಾದ ಮಹೀಂದ್ರಾ!

ಕಪ್ತಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರೌತಿನ್‌ಪುರ ಗ್ರಾಮದ ನಿವಾಸಿ ಶಿವಪೂಜನ್ ಸ್ವದೇಶಿ ತಂತ್ರಜ್ಞಾನದ ಮೂಲಕ ಈ ಕಾರು ತಯಾರು ಮಾಡಿದ್ದಾರೆ. ಇವರ ಕಾರ್ಯಕ್ಕೆ ಮಹೀಂದ್ರಾ ಗ್ರೂಪ್​ ಸಿಇಒ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

desi Ferrari of shiv Poojan
desi Ferrari of shiv Poojan
author img

By

Published : May 4, 2022, 5:05 PM IST

ಬಸ್ತಿ(ಉತ್ತರ ಪ್ರದೇಶ): ಭಾರತದಲ್ಲಿ ಪ್ರತಿಭೆಗಳಿಗೆ ಯಾವುದೇ ರೀತಿಯ ಕೊರತೆ ಇಲ್ಲ. ಮೇಲಿಂದ ಮೇಲೆ ಹೊಸ ಹೊಸ ಅನ್ವೇಷನೆ ಮಾಡ್ತಿರುವ ಸುದ್ದಿ ಪ್ರಕಟವಾಗ್ತಾನೆ ಇರ್ತವೆ. ಇಂತಹ ವ್ಯಕ್ತಿಗಳಿಂದ ಪ್ರೇರಿತರಾಗಿ ಉದ್ಯಮಿ ಆನಂದ್ ಮಹೀಂದ್ರಾ ಅನೇಕ ವಿಡಿಯೋ ತುಣುಕುಗಳನ್ನ ತಮ್ಮ ಟ್ವಿಟರ್​​​​​​​​​​ನಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ, ವ್ಯಕ್ತಿಯೊಬ್ಬ ತಯಾರಿಸಿರುವ 'ದೇಸಿ ಫೆರಾರಿ ಕಾರು' ವಿಡಿಯೋ ತುಣುಕವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಬಸ್ತಿಯ ನಿವಾಸಿ ಶಿವಪೂಜನ್ ದೇಶಿ ಫೆರಾರಿ ಕಾರು ತಯಾರು ಮಾಡಿದ್ದು, ಇದಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಮಹೀಂದ್ರಾ ಗ್ರೂಪ್​ ಸಿಇಒ ಆನಂದ್ ಮಹೀಂದ್ರಾ ಅವರಿಗೂ ಈ ಕಾರು ತುಂಬಾ ಇಷ್ಟವಾಗಿದ್ದು, ತಮ್ಮ ಟ್ವಿಟರ್​​ ಅಕೌಂಟ್​​ನಲ್ಲಿ ಇದರ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ತಯಾರು ಮಾಡಿರುವ ವ್ಯಕ್ತಿಯನ್ನ ಭೇಟಿ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಹಾಲು ಸಾಗಾಣಿಕೆಗೆ 'ದೇಸಿ ಫೆರಾರಿ ಕಾರು'...

ಕಪ್ತಂಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರೌತಿನ್‌ಪುರ ಗ್ರಾಮದ ನಿವಾಸಿ ಶಿವಪೂಜನ್ ಸ್ವದೇಶಿ ತಂತ್ರಜ್ಞಾನದ ಮೂಲಕ ಈ ಕಾರು ತಯಾರು ಮಾಡಿದ್ದಾರೆ. ಬಾಲ್ಯದಿಂದಲೂ ಹೊಸ ಹೊಸ ವಿಷಯಗಳ ಬಗ್ಗೆ ಆಸಕ್ತಿ ಹೊಂದಿದ್ದ ಶಿವಪೂಜನ್​​, ಆರ್ಥಿಕ ತೊಂದರೆಯಿಂದಾಗಿ ಇಂಜಿನಿಯರ್​ ಆಗುವ ಕನಸು ನನಸಾಗಲಿಲ್ಲ. ಆರಂಭದಲ್ಲಿ ಪೇಂಟಿಂಗ್​ ಕೆಲಸ ಮಾಡ್ತಿದ್ದ ಇವರು ತದನಂತರ ಚಿತ್ರ ಬಿಡಿಸುವ ಕೆಲಸ ಸಹ ಮಾಡಲು ಆರಂಭಿಸಿದ್ದರು.

desi Ferrari of shiv Poojan
ದೇಸಿ ಫೆರಾರಿ ಕಾರು ತಯಾರಿಸಿದ ಉತ್ತರ ಪ್ರದೇಶದ ವ್ಯಕ್ತಿ

ಗೋಡೆಗೆ ಬಣ್ಣ ಬಳಿಯುವ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗ್ತಿದ್ದರೂ ಸಹ ಹೇಳಿಕೊಳ್ಳುವಂತಹ ಸಂಪಾದನೆ ಬರುತ್ತಿರಲಿಲ್ಲ. ಹೀಗಾಗಿ ಕಳೆದ ಐದು ವರ್ಷಗಳ ಹಿಂದೆ ವೆಲ್ಡಿಂಗ್ ಕಲಿತು ಮನೆಯ ಗೇಟ್, ಗ್ರಿಲ್ ತಯಾರಿಸಲು ಆರಂಭಿಸಿದ್ದಾರೆ. ಕಾರು ತಯಾರಿಸಬೇಕೆಂಬ ಆಲೋಚನೆ ಹುಟ್ಟಿದು ಸಹ ಇಲ್ಲೇ.

ಇದನ್ನೂ ಓದಿ: 'ಮಸೀದಿಗಳ ಎದುರು ಹನುಮಾನ್​ ಚಾಲೀಸಾ ಪಠಣ ಮುಂದುವರೆಯಲಿದೆ': ರಾಜ್​ ಠಾಕ್ರೆ

ಕಾರು ತಯಾರಿಸಲು ಈತನ ಬಳಿ ಹಣ ಇಲ್ಲದ ಕಾರಣ ಸಹೋದರರು 1 ಲಕ್ಷ ರೂಪಾಯಿ ನೀಡಿದ್ದಾರೆ. ಹೀಗಾಗಿ, ಮೂರು ತಿಂಗಳ ಪರಿಶ್ರಮದಿಂದ ಈ ಕಾರು ಸಿದ್ಧಗೊಂಡಿದೆ. ಕಾರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದ್ದಂತೆ ಇದಕ್ಕೆ ಮತ್ತಷ್ಟು ವಿನ್ಯಾಸ ಮಾಡಲಾಗಿದೆ.

ಹಾಲು ಸಾಗಿಸಲು ದೇಸಿ ಫೆರಾರಿ: ಶಿವಪೂಜನ್ ಬಸ್ತಿಯ ಮಾಳವೀಯ ರಸ್ತೆಯಲ್ಲಿ ಡೈರಿ ಹೊಂದಿದ್ದು, ನಿತ್ಯ ಹಳ್ಳಿಯಿಂದ ನಗರಕ್ಕೆ ಹಾಲು ಸಾಗಣೆ ಮಾಡಲು ಈ ದೇಸಿ ಕಾರು ಬಳಕೆ ಮಾಡಲಾಗ್ತಿದೆ. ಈ ಕಾರು ಗಂಟೆಗೆ 55 ರಿಂದ 60 ಕಿಲೋ ಮೀಟರ್ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದ್ದು, ಒಂದೂವರೆ ಕ್ವಿಂಟಲ್​ಗೂ ಹೆಚ್ಚು ಬಾರ ಹೊರುವ ಸಾಮರ್ಥ್ಯ ಹೊಂದಿದೆ. ಈ ಕಾರಿನಲ್ಲಿ ನಾಲ್ಕು ಬ್ಯಾಟರಿಗಳಿವೆ.

  • I’m not sure his vehicle meets road regulations, but I hope his passion for wheels remains unregulated…This is the coolest thing I’ve seen in a long while. I want to meet this road warrior… https://t.co/lZbDnge7mo

    — anand mahindra (@anandmahindra) April 29, 2022 " class="align-text-top noRightClick twitterSection" data=" ">

ಒಂದು ಸಲ ಚಾರ್ಜ್​​ ಮಾಡಿದರೆ ಸುಮಾರು 80 ಕಿಲೋ ಮೀಟರ್ ದೂರದವರೆಗೆ ಯಾವುದೇ ರೀತಿಯ ತೊಂದರೆ ಇಲ್ಲದ ರೀತಿಯಲ್ಲಿ ಈ ಕಾರಿನಲ್ಲಿ ಕ್ರಮಿಸಬಹುದಾಗಿದೆ. ಇವರನ್ನ ಭೇಟಿಯಾಗುವ ಉತ್ಸುಕತೆಯನ್ನ ಆನಂದ್ ಮಹೀಂದ್ರಾ ವ್ಯಕ್ತಪಡಿಸಿದ್ದು, ಸಮಯ ನಿಗದಿಯಾದರೆ ಖಂಡಿತವಾಗಿ ಭೇಟಿಯಾಗುವುದಾಗಿ ಶಿವಪೂಜನ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.