ಹೈದರಾಬಾದ್ : ಆನಂದ್ ಮಹೀಂದ್ರಾ ಅವರು ಟ್ವಿಟರ್‌ನಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಯಾವುದಾದರೊಂದು ಫೋಟೋ ಅಥವಾ ವಿಡಿಯೋ ಹಂಚಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ತಲೆಬರಹಗಳನ್ನು ನೀಡುತ್ತಾರೆ. ಈ ಕಾರಣಕ್ಕಾಗೆ ಅದೆಷ್ಟೋ ಜನ ಅವರ ಹಿಂಬಾಲಕರಾಗಿದ್ದಾರೆ.
ಇತ್ತೀಚೆಗೆ ಮ್ಯಾಂಡರಿನ್ ಬಾತುಕೋಳಿಗಳನ್ನು ಒಳಗೊಂಡ ಮನಮೋಹಕ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಮೂಲ ಟ್ವಿಟರ್ ಬಳಕೆದಾರ ಎರಿಕ್ ಸೊಲ್ಹೈಮ್ ಪೋಸ್ಟ್ ಮಾಡಿದ್ದಾರೆ. ಇದು 235.9ಕೆ ವೀಕ್ಷಣೆಗಳನ್ನು ಹೊಂದಿದೆ.
-
Exquisitely beautiful! And perhaps its return is a hopeful sign that nature hasn’t given up on us yet? https://t.co/wKlNo6Baq2
— anand mahindra (@anandmahindra) July 26, 2021 " class="align-text-top noRightClick twitterSection" data="
">Exquisitely beautiful! And perhaps its return is a hopeful sign that nature hasn’t given up on us yet? https://t.co/wKlNo6Baq2
— anand mahindra (@anandmahindra) July 26, 2021Exquisitely beautiful! And perhaps its return is a hopeful sign that nature hasn’t given up on us yet? https://t.co/wKlNo6Baq2
— anand mahindra (@anandmahindra) July 26, 2021
ಎರಿಕ್ ಸೊಲ್ಹೈಮ್ ತಮ್ಮ ಟ್ವೀಟ್‌ನಲ್ಲಿ ಬ್ರಾವೋ! ಮ್ಯಾಂಡರಿನ್ ಬಾತುಕೋಳಿ ಪೂರ್ವ ಚೀನಾ ಮತ್ತು ರಷ್ಯಾದಲ್ಲಿ ಕಂಡು ಬರುತ್ತವೆ. ಇವು 100 ವರ್ಷಗಳ ನಂತರ ಭಾರತದ ಅಸ್ಸೋಂನಲ್ಲಿ ಕಂಡಿವೆ ಎಂದು ಬರೆದುಕೊಂಡಿದ್ದಾರೆ.
ಇದನ್ನು ಹಂಚಿಕೊಂಡಿರುವ ಆನಂದ್ ಮಹೀಂದ್ರಾ, ಅತ್ಯಂತ ಅಂದವಾಗಿವೆ, ಬಹುಶಃ ಅವುಗಳ ಮರಳುವಿಕೆಯು ಪ್ರಕೃತಿ ಇನ್ನೂ ನಮ್ಮನ್ನು ಬಿಟ್ಟುಕೊಡದ ಭರವಸೆಯ ಸಂಕೇತವಾಗಿದೆ? ಎಂದು ಬರೆದುಕೊಂಡಿದ್ದಾರೆ.
ಈ ವಿಡಿಯೋ ನೋಡಿ ನೆಟ್ಟಿಗರು ಭಾರೀ ಖುಷಿಪಟ್ಟಿದ್ದಾರೆ. ಅವುಗಳ ನೈಸರ್ಗಿಕ ಆವಾಸಸ್ಥಾನ ಪೂರ್ವ ಚೀನಾ ಮತ್ತು ಜಪಾನ್ ಆಗಿದ್ದರೂ, ಮ್ಯಾಂಡರಿನ್ ಬಾತುಕೋಳಿಗಳು ಸ್ಥಳೀಯವಾಗಿ ಪ್ರಪಂಚದಾದ್ಯಂತ ಅನೇಕ ಸ್ಥಳಗಳಲ್ಲಿ ಸಾಕಲ್ಪಡುತ್ತವೆ.