ETV Bharat / bharat

ದಂಪತಿ ಮಹತ್ಕಾರ್ಯ: 300ಕ್ಕೂ ಹೆಚ್ಚು ಅನಾಥರ ಅಂತ್ಯಸಂಸ್ಕಾರ

ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಜುವಿನ್ ಮತ್ತು ಮರಿಯಾ ದಂಪತಿ ಅನ್ಬು ಜ್ಯೋತಿ ಆಶ್ರಮ ನಡೆಸುತ್ತಿದ್ದು, 2004ರಿಂದ 300ಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯ ಸಂಸ್ಕಾರವನ್ನು ವಿಧಿ ವಿಧಾನದೊಂದಿಗೆ ನೆರವೇರಿಸಿದ್ದಾರೆ

an-inspiring-couple-who-were-burring-the-orphans-death-bodies
ದಂಪತಿಯ ಮಹತ್ಕಾರ್ಯ: 300ಕ್ಕೂ ಹೆಚ್ಚು ಅನಾಥರ ಅಂತ್ಯಸಂಸ್ಕಾರ
author img

By

Published : Nov 8, 2022, 8:29 PM IST

ವಿಲ್ಲುಪುರಂ (ತಮಿಳುನಾಡು): ತಮಿಳುನಾಡಿನ ದಂಪತಿಯೊಬ್ಬರು 300ಕ್ಕೂ ಹೆಚ್ಚು ಅನಾಥರ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಅನಾಥರು, ನಿರ್ಗತಿಕರು, ಮಾನಸಿಕ ಅಸ್ವಸ್ಥರನ್ನು ರಕ್ಷಿಸಿ, ಅವರನ್ನು ಆರೈಕೆ ಮಾಡುವ ಮಹತ್ಕಾರ್ಯದಲ್ಲೂ ದಂಪತಿ ತೊಡಗಿಸಿಕೊಂಡಿದ್ದಾರೆ.

ನಮ್ಮೆಲ್ಲರಿಂದಲೂ ಮಹತ್ತರವಾದ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಆದರೆ, ಪ್ರೀತಿಯಿಂದ ಸಣ್ಣ ಕೆಲಸಗಳನ್ನು ಮಾಡಬಹುದು ಎಂಬುವುದು ಮಾನವತಾವಾದಿ ಮದರ್ ತೆರೇಸಾ ಮಾತು. ಈ ಧ್ಯೇಯವಾಕ್ಯದಂತೆ ವಿಲ್ಲುಪುರಂ ಜಿಲ್ಲೆಯ ಗುಂಡಲಪುಲಿಯೂರು ಗ್ರಾಮದ ಜುವಿನ್ ಮತ್ತು ಮರಿಯಾ ದಂಪತಿ 18 ವರ್ಷಗಳಿಂದಲೂ ನಡೆಯುತ್ತಿದ್ದಾರೆ.

ಜುವಿನ್ ಮತ್ತು ಮರಿಯಾ ದಂಪತಿ ಅನ್ಬು ಜ್ಯೋತಿ ಹೆಸರಿನ ಆಶ್ರಮ ನಡೆಸುತ್ತಿದ್ದಾರೆ. ಈ ಆಶ್ರಮದಲ್ಲಿ ಅನಾಥರು, ನಿರ್ಗತಿಕರು, ಮಾನಸಿಕ ಅಸ್ವಸ್ಥರು ಹಾಗೂ ದೈಹಿಕವಾಗಿ ಅಶಕ್ತರು, ನೊಂದವರು, ರೋಗಿಗಳು, ನಿರ್ಗತಿಕ ವಿಧವೆಯರು ಮತ್ತು ವೃದ್ಧರಿಗೆ ಆಶ್ರಯ ನೀಡಲಾಗುತ್ತಿದೆ. ಆಶ್ರಮದಲ್ಲಿ ನಿರಂತರವಾಗಿ ಆರೈಕೆ ಮಾಡಿ ಪುನರ್ವಸತಿಯನ್ನೂ ಕಲ್ಪಿಸಲಾಗುತ್ತಿದೆ.

ದಂಪತಿಯ ಮಹತ್ಕಾರ್ಯ: 300ಕ್ಕೂ ಹೆಚ್ಚು ಅನಾಥರ ಅಂತ್ಯಸಂಸ್ಕಾರ

ತಮಿಳುನಾಡು ಮತ್ತು ಪುದುಚೇರಿಯಾದ್ಯಂತ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಅಸಹಾಯಕರಾಗಿ ಅಲೆದಾಡುವ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಅವರನ್ನು ರಕ್ಷಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲಾಗುತ್ತದೆ. ನಂತರ ಆಶ್ರಮಕ್ಕೆ ತಂದು ಆಶ್ರಯ ನೀಡಿ, ಸೂಕ್ತ ಉದ್ಯೋಗ ಕಲ್ಪಿಸುವಲ್ಲೂ ಈ ದಂಪತಿ ಶ್ರಮಿಸುತ್ತಿದ್ದಾರೆ. ಅಸಹಾಯಕರಿಗೆ ಅನ್ನ, ವಸತಿ ಕಲ್ಪಿಸುವ ಮೂಲಕ ಸೇವಾ ಮನೋಭಾವನೆಯಿಂದ ಕಾರ್ಯ ನಿರ್ವಹಿಸುತ್ತಾರೆ.

ಜುವಿನ್ ಮತ್ತು ಮರಿಯಾ ದಂಪತಿಯ ಮುಖ್ಯವಾದ ಮಹತ್ಕಾರ್ಯ ಎಂದರೆ ಅನಾಥರ ಅಂತ್ಯ ಸಂಸ್ಕಾರವನ್ನೂ ಇದೇ ಮಾಡುತ್ತಾರೆ. 2004ರಿಂದ ಇದುವರೆಗೂ ಈ ದಂಪತಿ 300ಕ್ಕೂ ಹೆಚ್ಚು ಅನಾಥ ಶವಗಳ ಅಂತ್ಯ ಸಂಸ್ಕಾರವನ್ನು ವಿಧಿ ವಿಧಾನದೊಂದಿಗೆ ನೆರವೇರಿಸಿದ್ದಾರೆ. ವಿಲ್ಲುಪುರಂ ಜಿಲ್ಲೆಯ ಜನತೆ ಈ ದಂಪತಿಯ ಕಾರ್ಯದ ಬಗ್ಗೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.

ಇದೀಗ ಜುವಿನ್ ಮತ್ತು ಮಾರಿಯಾ ದಂಪತಿ ಸರ್ಕಾರದ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ. ಅನಾಥ ಶವಗಳನ್ನು ಹೂಳಲು ಜಾಗದ ಕೊರತೆಯಿದ್ದು, ಅನಾಥ ಶವಗಳನ್ನು ಹೂಳಲು ಸ್ಥಳಾವಕಾಶ ಕಲ್ಪಿಸಬೇಕು ಎಂಬುದು ಈ ದಂಪತಿಯ ಮನವಿಯಾಗಿದೆ.

ಇದನ್ನೂ ಓದಿ: ಏಕಾಂಗಿಯಾಗಿ ಕಾನೂನು ಹೋರಾಟ ಮಾಡಿ ಪಿಎಸ್​ಐ ಹುದ್ದೆಯ ಮೀಸಲಾತಿ ಗಿಟ್ಟಿಸಿಕೊಂಡ ತೃತೀಯ ಲಿಂಗಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.