ETV Bharat / bharat

ಹಗಲು ಬಸ್​ ಕಂಡಕ್ಟರ್​, ಸಂಜೆ ಟೀಚರ್​​​.. 1200 ಜನರಿಗೆ ಶಿಕ್ಷಣ ನೀಡಿದ ಶ್ಯಾಮಲಾ ಟೀಚರ್​ಗೆ ಸೆಲ್ಯೂಟ್​ - 1200 ಜನರಿಗೆ ಶಿಕ್ಷಣ

ಪ್ರತಿಯೊಬ್ಬರೂ ತಮ್ಮ ಸ್ವಾರ್ಥಕ್ಕಾಗಿಯೇ ಕಾಳಜಿ ವಹಿಸುವ ಇಂದಿನ ದಿನಗಳಲ್ಲಿ ಶ್ಯಾಮಲಾ ಎಂಬುವವರು ಮಾನವ ಸೇವೆಯೇ ಮಾಧವ ಸೇವೆ ಎಂದು ಪರಿಗಣಿಸಿ, ಅನಾಥರಿಗೆ, ಅಂಗಡಿಗಳಲ್ಲಿ ಕೆಲಸ ಮಾಡುವ, ಕಸ ತೆಗೆಯುವವರಿಗೆ ಶಿಕ್ಷಣ ನೀಡುತ್ತಿದ್ದಾರೆ. ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದರೂ, ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಲೇ ಅವರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಮಹಿಳಾ ಕಂಡಕ್ಟರ್‌
ಮಹಿಳಾ ಕಂಡಕ್ಟರ್‌
author img

By

Published : Nov 8, 2022, 4:46 PM IST

ತಿರುಪತಿ (ಆಂಧ್ರಪ್ರದೇಶ): ಆ ಮಹಿಳೆ ಪ್ರತಿ ಹೆಜ್ಜೆಯಲ್ಲೂ ಹಲವು ಕಷ್ಟಗಳನ್ನು ಎದುರಿಸಿದವರು. 19 ವರ್ಷದಿಂದ ಸರ್ಕಾರಿ ಉದ್ಯೋಗದಲ್ಲಿದ್ದ ಶ್ಯಾಮಲಾ ಅವರು ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಹೀಗಿದ್ದರೂ ಅವರು 1200 ಜನರಿಗೆ ಶಿಕ್ಷಣವನ್ನು ನೀಡುವ ಮೂಲಕ ಎಲ್ಲರಿಗೂ ಸ್ಫೂರ್ತಿ ಆಗಿದ್ದಾರೆ.

ತಿರುಪತಿ ಜಿಲ್ಲೆಯ ನಾಯ್ಡುಪೇಟೆ ಮಂಡಲದ ತರುಮಂಚಿ ಕಂಡ್ರಿಗಾ ಶ್ಯಾಮಲಾ ಅವರ ಹುಟ್ಟೂರಾಗಿದೆ. ಅವರು 19 ವರ್ಷದಿಂದ ಕಂಡಕ್ಟರ್​ ಆಗಿ ಸೇವೆ ಸಲ್ಲಿಸಿದ್ದಾರೆ. ಇವರ ತಂದೆ ತಾಯಿಗೆ ಐವರು ಹೆಣ್ಣು ಮಕ್ಕಳು, ಅದರಲ್ಲಿ ಇವರು ಕೂಡ ಒಬ್ಬರು. ಅವರು ಓದಲು ಬಯಸಿದ್ದರು. ಆದ್ರೆ ಅದು ಅವರಿಗೆ ಸಾಧ್ಯವಾಗಲಿಲ್ಲ. ಅವರ ಪತಿ ಕುರಿ ಕಾಯುತ್ತಿದ್ದರು. ಶ್ಯಾಮಲಾ ಅವರನ್ನು ಮದುವೆಯಾದ ಬಳಿಕ ಅವರನ್ನು ಓದಲು ಕಳುಹಿಸಿದರು. ಇದರಿಂದ ಗೌರವ ಸಿಗುತ್ತದೆ ಎಂದು ಅವರು ತಿಳಿದಿದ್ದರು.

ಮಹಿಳಾ ಕಂಡಕ್ಟರ್‌
ಮಹಿಳಾ ಕಂಡಕ್ಟರ್‌

ಕಂಡಕ್ಟರ್​​ ಕೆಲಸ ಪಡೆದ ಶ್ಯಾಮಲಾ: ಓದಿದ ನಂತರ ನಮ್ಮನ್ನು ತಲೆಯೆತ್ತಿ ನೋಡಿದರೆ ಸಾಕಲ್ಲ ಅನ್ನಿಸಿ, ಭಿಕ್ಷುಕರು, ಅಂಗಡಿಗಳಲ್ಲಿ ಕೆಲಸ ಮಾಡುವವರು, ಅನಾಥರು ಮತ್ತು ಕಸವನ್ನು ಸಂಗ್ರಹಿಸುವ ಮಕ್ಕಳನ್ನು ಗುರುತಿಸಿ ಶಿಕ್ಷಣ ನೀಡಲು ಪ್ರಾರಂಭಿಸಿದರು. ಶ್ಯಾಮಲಾ ಇದ್ದ ಬಾಡಿಗೆ ಮನೆಯಲ್ಲೇ ಶಿಕ್ಷಣ ನೀಡುತ್ತಿದ್ದರು. ಬಳಿಕ ಅವರ ಇಂಟರ್ ಮೀಡಿಯೇಟ್ ಮುಗಿದ ಮೇಲೆ ಕಂಡಕ್ಟರ್ ಕೆಲಸ ಸಿಕ್ಕಿತು. ನಂತರ ಸಂಬಳ ಬರುತ್ತದೆ ಎಂಬ ಧೈರ್ಯದಿಂದ ಇನ್ನೂ 50 ಅಸಹಾಯಕ ಮಕ್ಕಳನ್ನು ಒಟ್ಟುಗೂಡಿಸಿ ಶಾಲೆ ಆರಂಭಿಸಿದರು.

ಮಕ್ಕಳಿಗೆ ಪಾಠ: ಹಗಲು ಕಂಡಕ್ಟರ್ ಕೆಲಸ ಮಾಡಿ, ಸಂಜೆ ಮಕ್ಕಳಿಗೆ ಪಾಠ ಹೇಳಿ ಕೊಡುತ್ತಿದ್ದರು. ಮಕ್ಕಳು ಹೆಚ್ಚಾದಂತೆ ಮತ್ತೊಂದು ಕಟ್ಟಡವನ್ನು ಬಾಡಿಗೆಗೆ ಪಡೆದರು. ಅವರ ಸಂಬಳದ ಅರ್ಧದಷ್ಟು ಹಣ ಬಾಡಿಗೆಗೆ ಖರ್ಚಾಗುತ್ತಿತ್ತು. ಮಕ್ಕಳ ಊಟಕ್ಕೆ ಅನೇಕ ಜನ ಸರ್ಕಾರದ ರೇಷನ್​ ಅಕ್ಕಿಯನ್ನು ನೀಡುತ್ತಿದ್ದರು. ತರಕಾರಿ ಮಾರಾಟಗಾರರು ಸಂಜೆಯ ವೇಳೆಗೆ ಉಳಿದ ತರಕಾರಿಯನ್ನೂ ಕೊಡುತ್ತಿದ್ದರು. ಇತರ ಸಾಮಾನ್ಯ ಜನರ ಸಹಾಯದಿಂದ ಶಾಲೆಯನ್ನು ಶ್ಯಾಮಲಾ ನಡೆಸುತ್ತಿದ್ದರು. ಪ್ರತಿ ವರ್ಷ 20ರಿಂದ 50 ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಿ, ಗುರುಕುಲಕ್ಕೆ ದಾಖಲು ಮಾಡಲಾಗುತ್ತಿತ್ತು. ಅವರಿಂದ ಆರೈಕೆ ಮಾಡಿದ ಒಟ್ಟು 1200 ಮಕ್ಕಳು ಸ್ಥಳೀಯ ಶಾಲೆಗಳಿಗೆ ಸೇರಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಶ್ಯಾಮಲಾ ಜೀವನ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಅವರಿಗೆ ಸ್ತನ ಕ್ಯಾನ್ಸರ್ ಬಂದರೆಗಿತ್ತು. ಆದರೆ ಅವರು ಚಿಕಿತ್ಸೆ ಪಡೆಯುತ್ತಲೇ ಕೆಲಸ ಮಾಡುತ್ತ ಸೇವೆ ಸಲ್ಲಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ತುಂಬಾ ತೊಂದರೆಯಲ್ಲಿದ್ದೆವು. ಮಕ್ಕಳಿಗೆ ಊಟ ಹಾಕುವ ದಾರಿ ಕಾಣಲಿಲ್ಲ. ಅವರಲ್ಲಿ ಕೆಲವರನ್ನು ಅವರ ಸಂಬಂಧಿಕರ ಊರಿಗೆ ಕಳುಹಿಸಿದ್ದರೂ ಅನಾಥರನ್ನು ಎಲ್ಲಿಗೂ ಕಳುಹಿಸಲು ಸಾಧ್ಯವಾಗಿಲ್ಲ. ಹೇಗೋ ಆ ಕಷ್ಟಗಳನ್ನು ನೀಗಿಸಿಕೊಂಡೆ ಎಂದುಕೊಳ್ಳುವಷ್ಟರಲ್ಲಿ ನನಗೆ ಕಾಯಿಲೆ ಬಂತು. ಈಗ ಔಷಧಿ ಪಡೆಯುತ್ತಲೇ ಕೆಲಸಕ್ಕೆ ಹೋಗುತ್ತಿದ್ದೇನೆ. ತಮಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬರು ಇತ್ತೀಚೆಗಷ್ಟೇ ಪದವಿ ಮುಗಿಸಿದ್ದರೆ, ಮತ್ತೊಬ್ಬರು ಎಂಬಿಎ ಮಾಡುತ್ತಿದ್ದಾರೆ ಎಂದು ಶ್ಯಾಮಲಾ ಹೇಳುತ್ತಾರೆ.

ಇದನ್ನೂ ಓದಿ: ವಿದ್ಯಾರ್ಥಿನಿ ಅಂದಕ್ಕೆ ಮನಸೋತ ಶಿಕ್ಷಕಿ.. ಆಕೆಯನ್ನೇ ಮದುವೆಯಾಗಲು ಲಿಂಗ ಬದಲಾಯಿಸಿಕೊಂಡ ರೋಚಕ ಕಥೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.