ETV Bharat / bharat

ವೃತ್ತಿಯಲ್ಲಿ ಎಎಸ್​ಐ.. ನಾಲ್ಕು ವರ್ಷದಿಂದ ಅನಾಥ ಶವಗಳ ಅಂತ್ಯಕ್ರಿಯೆ ನಡೆಸುತ್ತಿರುವ ಮಹಿಳಾ ಪೊಲೀಸ್​! - ಎಎಸ್​ಐ ಸುನೀತಾ ರಾಣಿ ಅನಾಥ ಶವಗಳ ಅಂತ್ಯಕ್ರಿಯೆ

ಪೊಲೀಸ್ ಇಲಾಖೆಯಲ್ಲಿ ಎಎಸ್​ಐ ಆಗಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಅಧಿಕಾರಿಯೊಬ್ಬರು ಕಳೆದ ನಾಲ್ಕು ವರ್ಷಗಳಿಂದ ಅನಾಥ ಶವಗಳ ಅಂತ್ಯಕ್ರಿಯೆ ನಡೆಸುವ ಕೆಲಸ ಮಾಡ್ತಿದ್ದಾರೆ.

cremation of unclaimed body
cremation of unclaimed body
author img

By

Published : May 20, 2022, 9:10 PM IST

ಲೂಧಿಯಾನ್​(ಪಂಜಾಬ್​): ಪಂಜಾಬ್​ ಪೊಲೀಸ್​​​​ ಇಲಾಖೆಯಲ್ಲಿ ಎಎಸ್​ಐ ಆಗಿ ಕೆಲಸ ಮಾಡ್ತಿರುವ ಲೂಧಿಯಾನ​ ನಿವಾಸಿ ಸುನೀತಾ ರಾಣಿ, ಕಳೆದ ನಾಲ್ಕು ವರ್ಷಗಳಿಂದಲೂ ಅನಾಥ ಶವಗಳ ಅಂತ್ಯಕ್ರಿಯೆ ನಡೆಸುತ್ತಿದ್ದು, ಅನೇಕರ ಮನಗೆದ್ದಿದ್ದಾರೆ. ವಿಶೇಷವೆಂದರೆ ತಮ್ಮ ಸ್ವಂತ ಖರ್ಚಿನಲ್ಲೇ ಶವಗಳ ಅಂತ್ಯಸಂಸ್ಕಾರ ನಡೆಸುವ ಮೂಲಕ ಅವುಗಳಿಗೆ ಮುಕ್ತಿ ನೀಡುವ ಕೆಲಸ ಮಾಡ್ತಿದ್ದಾರೆ. 2019ರಲ್ಲಿ ಈ ಸೇವೆ ಪ್ರಾರಂಭಿಸಿರುವ ಇವರು, ಇಲ್ಲಿಯವರೆಗೆ 2200 ಮೃತದೇಹಗಳ ಅಂತ್ಯಕ್ರಿಯೆ ನಡೆಸಿದ್ದಾರೆ.

ನಾಲ್ಕು ವರ್ಷದಿಂದ ಅನಾಥ ಶವಗಳ ಅಂತ್ಯಕ್ರಿಯೆ ನಡೆಸುತ್ತಿರುವ ಮಹಿಳಾ ಪೊಲೀಸ್​!

ಅಂತ್ಯಕ್ರಿಯೆ ನಡೆಸುವುದಕ್ಕೂ ಮುಂಚಿತವಾಗಿ ಸಾಂಪ್ರದಾಯಿಕ ವಿಧಿ-ವಿಧಾನ ನಡೆಸುವ ಅವರು, ಮೃತದೇಹಗಳ ಅವಶೇಷ ಬಿಯಾಸ್ ನದಿಯಲ್ಲಿ ಬಿಡುತ್ತಾರೆ. ಸುನೀತಾ ರಾಣಿ ಅವರ ಸೇವೆ ಲೂಧಿಯಾನದ ಕೆಲವೇ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಗೊತ್ತಿದ್ದು, ಯಾವುದೇ ಆಸ್ಪತ್ರೆಯಿಂದ ಕರೆ ಬಂದರೂ, ಅಲ್ಲಿಗೆ ತೆರಳಿ, ಮೃತದೇಹಗಳ ಶವಸಂಸ್ಕಾರ ಮಾಡ್ತಾರೆ.

cremation of unclaimed body
ಅನಾಥ ಶವಗಳ ಅಂತ್ಯಕ್ರಿಯೆ ನಡೆಸುವ ಮಹಿಳಾ ಎಎಸ್​ಐ

ಸ್ವಃತ ಹಣದಿಂದಲೇ ಖರ್ಚು: ಮೃತದೇಹಗಳ ಅಂತ್ಯಸಂಸ್ಕಾರ ನಡೆಸುವ ಸುನೀತಾ ರಾಣಿ, ಎಲ್ಲ ಖರ್ಚು ತಮ್ಮ ಸಂಬಳದಿಂದಲೇ ಭರಿಸುತ್ತಾರೆ. ಈ ಸೇವೆ ಆರಂಭ ಮಾಡಿದಾಗ ಅನೇಕರು ಇವರೊಂದಿಗೆ ಸೇರಿಕೊಂಡಿದ್ದರು. ಆದರೆ, ತದನಂತರ ಅವರೆಲ್ಲರೂ ಹಿಂದೆ ಸರಿಯುತ್ತಾರೆ. ಹೀಗಾಗಿ, ಒಬ್ಬಂಟಿಯಾಗಿ ಈ ಸೇವೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಇವರು 2025ರಲ್ಲಿ ಸೇವೆಯಿಂದ ನಿವೃತ್ತಿ ಪಡೆದುಕೊಳ್ಳಲಿದ್ದು, ಈ ಕಾರ್ಯ ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಮನೆಗೆ ಆವರಿಸಿದ ಅಡುಗೆ ಅನಿಲದ ಬೆಂಕಿ: ಕುಟುಂಬದ 3 ಮಂದಿ ಸಾವು, ಮಹಿಳೆ ಗಂಭೀರ

ಲೂಧಿಯಾನ ಒಂದು ದೊಡ್ಡ ನಗರವಾಗಿದ್ದು, ಸಾಕಷ್ಟು ಅಪರಾಧಗಳಾಗ್ತಿವೆ. ಇದರ ಮಧ್ಯೆ ಕೆಲವೊಂದು ಆತ್ಮಹತ್ಯೆ ನಡೆಯುತ್ತಲೇ ಇರುತ್ತವೆ. ಅವರ ಮೃತದೇಹಗಳನ್ನ ವಶಕ್ಕೆ ಪಡೆದುಕೊಳ್ಳುವ GRP, RPF ಸಿಬ್ಬಂದಿ ಅವುಗಳನ್ನ ಆಸ್ಪತ್ರೆಗೆ ತಲುಪಿಸುತ್ತಾರೆ. ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಫೋನ್ ಕರೆಗಳು ಬರುತ್ತವೆ. ಅವುಗಳನ್ನ ಸುನೀತಾ ರಾಣಿ ಅವರಿಗೆ ಹಸ್ತಾಂತರ ಮಾಡಿದ ಬಳಿಕ, ವಿಧಿವಿಧಾನಗಳೊಂದಿಗೆ ಅಂತ್ಯಕ್ರಿಯೆ ನಡೆಸುತ್ತಾರೆ. ಒಂದು ಶವದ ಅಂತ್ಯಕ್ರಿಯೆ ನಡೆಸಲು ಸರಿಸುಮಾರು 1600 ರೂಪಾಯಿ ಖರ್ಚು ಮಾಡುವ ಸುನೀತಾ ರಾಣಿ, ಎಲ್ಲ ರೀತಿಯ ವಿಧಿವಿಧಾನ ನಡೆಸುತ್ತಾರೆ.

cremation of unclaimed body
ನಾಲ್ಕು ವರ್ಷದಿಂದ ಅನಾಥ ಶವಗಳ ಅಂತ್ಯಕ್ರಿಯೆ

ಈ ಸೇವೆ ಮಾಡುತ್ತಿರುವುದು ಯಾಕೆ?: ಸುನೀತಾ ರಾಣಿ ಅವರು ಇಂತಹ ಸೇವೆ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಹೇಳಿಕೊಂಡಿದ್ದಾರೆ. ಅವರ ಮಗಳು. ಸಹೋದರಿ ಅಥವಾ ತಾಯಿಯಾಗಿ ಅಂತ್ಯಸಂಸ್ಕಾರ ನಡೆಸುತ್ತೇನೆ ಎಂದಿದ್ದಾರೆ. ಇದೇ ವಿಚಾರವಾಗಿ ಮಾತನಾಡಿರುವ ಸ್ಮಶಾನದ ಪಂಡಿತ, ಕಳೆದ ನಾಲ್ಕು ವರ್ಷದಿಂದಲೂ ಸುನೀತಾ ರಾಣಿ ಅವರು ಈ ಕೆಲಸ ಮಾಡ್ತಿದ್ದು, ಅವರ ಕೆಲಸಕ್ಕೆ ನಾವು ಸಾಥ್ ನೀಡಿದ್ದೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.