ETV Bharat / bharat

ಛತ್ತೀಸ್​ಗಡ ನಕ್ಸಲ್​​ ದಾಳಿ ಪ್ರದೇಶಕ್ಕೆ ಇಂದು ಅಮಿತ್​ ಶಾ ಭೇಟಿ - ಛತ್ತೀಸ್​ಗಡದಲ್ಲಿ ನಕ್ಸಲ್​​ ದಾಳಿ

ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ ನಿನ್ನೆ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರು. ಈ ವೇಳೆ 31 ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಇವರಲ್ಲಿ 16 ಮಂದಿ ಸಿಆರ್‌ಪಿಎಫ್ ಯೋಧರಾಗಿದ್ದಾರೆ. ಇವತ್ತು ದಾಳಿ ನಡೆದ ಪ್ರದೇಶಕ್ಕೆ ಗೃಹ ಸಚಿವ ಅಮಿತ್‌ ಶಾ ಭೇಟಿ ನೀಡಿ ಭದ್ರತಾ ಪಡೆಗಳಿಗೆ ಧೈರ್ಯ ತುಂಬಲಿದ್ದಾರೆ.

Amit Shah to visit Chhattisgarh's Bijapur Naxal attack site, meet injured jawans
ಛತ್ತೀಸ್​ಗಡದ ನಕ್ಸಲ್​​ ದಾಳಿ ಪ್ರದೇಶಕ್ಕೆ ಇಂದು ಅಮಿತ್​ ಶಾ ಭೇಟಿ
author img

By

Published : Apr 5, 2021, 10:11 AM IST

ರಾಯಪುರ್​ (ಛತ್ತೀಸ್​ಗಡ): ನಕ್ಸಲರೊಂದಿಗೆ ನಡೆದ ಭೀಕರ ಕಾಳಗದಲ್ಲಿ ಮಡಿದ ಯೋಧರ ಕುಟುಂಬಸ್ಥರು ಹಾಗು ಭದ್ರತಾ ಪಡೆಗಳಿಗೆ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಧೈರ್ಯ ತುಂಬಲಿದ್ದಾರೆ.

ಇದೇ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಸಭೆಗಳನ್ನು ಮೊಟಕುಗೊಳಿಸಿರುವ ಅವರು ಛತ್ತೀಸ್‌ಗಢಕ್ಕೆ ತೆರಳಿ ದಾಳಿ ನಡೆದ ಸ್ಥಳ ಹಾಗು ಗಾಯಗೊಂಡ ಯೋಧರನ್ನು ಭೇಟಿ ಮಾಡಲಿದ್ದಾರೆ.

ಇಲ್ಲಿನ ಸುಕ್ಮಾ-ಬಿಜಾಪುರ್ ಎಂಬಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾದ ಘಟನೆ ನಿನ್ನೆ ನಡೆದಿತ್ತು.

ಇದನ್ನೂ ಓದಿ : ಛತ್ತೀಸ್‌ಗಡದಲ್ಲಿ ನಕ್ಸಲರ ಅಟ್ಟಹಾಸ​: ಗುಂಡಿನ ಕಾಳಗದಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮ

'ಗುಪ್ತಚರ ವೈಫಲ್ಯವಿಲ್ಲ'

ಗುಪ್ತಚರ ಅಥವಾ ಕಾರ್ಯಾಚರಣೆಯ ವೈಫಲ್ಯವಿದೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಇದು ಗುಪ್ತಚರ ವೈಫಲ್ಯವಾಗಿದ್ದರೆ, ಪಡೆಗಳು ಕಾರ್ಯಾಚರಣೆಗೆ ಹೋಗುತ್ತಿರಲಿಲ್ಲ. ಕಾರ್ಯಾಚರಣೆಯ ವೈಫಲ್ಯವಿದ್ದರೆ, ಅನೇಕ ನಕ್ಸಲರನ್ನು ಬಲಿ ಪಡೆಯುತ್ತಿರಲಿಲ್ಲ ಎಂದು ಸಿಆರ್​ಪಿಎಫ್​​ ಡಿಜಿ ತಿಳಿಸಿದ್ದಾರೆ.

ಇದನ್ನೂ ಓದಿ: ನಕ್ಸಲ್​ ವಿರುದ್ಧದ ಕಾರ್ಯಾಚರಣೆ ಮುಂದುವರೆಯಲಿದೆ: ಸಿಎಂ ಭೂಪೇಶ್ ಬಾಗೇಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.