ಕೊಲ್ಕತ್ತಾ: ಉತ್ತರ ಕೊಲ್ಕತ್ತಾದ ಕಾಶಿಪುರದಲ್ಲಿ ಶುಕ್ರವಾರ ಬೆಳಗ್ಗೆ ಬಿಜೆಪಿ ಕಾರ್ಯಕರ್ತರೊಬ್ಬರ ಶವ ಪತ್ತೆಯಾಗಿದೆ. ಎರಡು ದಿನಗಳ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಮಧ್ಯಾಹ್ನ ಅವರ ನಿವಾಸಕ್ಕೆ ಭೇಟಿ ನೀಡುವರು.
ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಅರ್ಜುನ್ ಚೌರಾಸಿಯಾ ಅವರ ಶವವು, ಘೋಷ್ ಬಗಾನ್ ಪ್ರದೇಶದಲ್ಲಿನ ಕಟ್ಟಡದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆಡಳಿತಾರೂಢ ಟಿಎಂಸಿ ಪಕ್ಷದವರೇ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. ಆದ್ರೆ ಈ ಆರೋಪವನ್ನು ಟಿಎಂಸಿ ಅಲ್ಲಗಳೆದಿದೆ.
ಚೌರಾಸಿಯಾ ಪಕ್ಷದ ದಕ್ಷ ಕಾರ್ಯಕರ್ತರಾಗಿದ್ದರು. ಇಂದು ಬೆಳಗ್ಗೆ ನಮಗೆ ಅವರು ಮೃತಪಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ಈ ಸುದ್ದಿ ಕೇಳಿದ ನಂತರ ಶಾ ಬೇಸರಗೊಂಡಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ನೋಡಿ: 26 ವರ್ಷಗಳಿಂದ ಜನರ ದಾಹ ತಣಿಸುತ್ತಿರುವ 'ಜಬಲ್‌ಪುರದ ವಾಟರ್‌ಮ್ಯಾನ್'!